ಓಮಾನ್ ಸಮುದ್ರದಲ್ಲಿ ಒಂದು ನೌಕೆಯ ಮೇಲೆ ಕ್ಷಿಪಣಿ ದಾಳಿ : ಇರಾನ್ ಮೇಲೆ ಸಂಶಯ : Missile attack

ಪ್ರತಿನಿಧಿಕ ಚಿತ್ರ

ಟೆಹರಾನ್ (ಇರಾನ್) – ಓಮಾನ್ ಸಮುದ್ರದಲ್ಲಿ ಜುಲೈ ೭ ರ ಮುಂಜಾನೆ ನೌಕೆಯೊಂದರ ಮೇಲೆ ಕ್ಷಿಪಣಿ ದಾಳಿ ನಡೆದಿರುವುದಾಗಿ ಬ್ರಿಟಿಷ್ ಸೇನೆಯು ಮಾಹಿತಿ ನೀಡಿದೆ. ಓಮಾನ್‌ ನ ಲಿಮಾಹ್‌ ನ ಪೂರ್ವದಲ್ಲಿ ಈ ನೌಕೆಯ ಮೇಲೆ ದಾಳಿ ನಡೆದಿದೆ ಎಂದು ‘ಯುನೈಟೆಡ್ ಕಿಂಗ್‌ ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್’ ತಿಳಿಸಿದೆ.

​‘ಯುನೈಟೆಡ್ ಕಿಂಗ್‌ ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್’ ನೀಡಿದ ಮಾಹಿತಿಯ ಪ್ರಕಾರ, ಈ ನೌಕೆಯು ಹೋರ್ಮುಜ್ ಜಲಸಂಧಿಯಿಂದ ದಕ್ಷಿಣದ ಕಡೆಗೆ ಓಮಾನ್ ಕೊಲ್ಲಿಯ ದಿಕ್ಕಿನಲ್ಲಿ ಪ್ರಯಾಣಿಸುತ್ತಿದ್ದಾಗ ಕ್ಷಿಪಣಿಯೊಂದು ಈ ನೌಕೆಗೆ ಅಪ್ಪಳಿಸಿತು. ಇದರಿಂದಾಗಿ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಅದೃಷ್ಟವಶಾತ್ ಇದರಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಅಧಿಕಾರಿಗಳು ಈ ಘಟನೆಯ ತನಿಖೆ ನಡೆಸುತ್ತಿದ್ದು, ಈ ಭಾಗದಲ್ಲಿ ಪ್ರಯಾಣಿಸುವ ಇತರ ನೌಕೆಗಳು ಜಾಗರೂಕರಾಗಿರಬೇಕು ಮತ್ತು ಯಾವುದೇ ಸಂಶಯಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡಬೇಕು ಎಂದು ಕರಾವಳಿ ಸಂಸ್ಥೆ ಸೂಚಿಸಿದೆ. ಈ ದಾಳಿಯನ್ನು ಇರಾನ್ ಮಾಡಿರಬಹುದು ಎಂದು ಅಮೆರಿಕ ಸಂಶಯ ವ್ಯಕ್ತಪಡಿಸಿದೆ.