ಅಲಾಹಾಬಾದ ಉಚ್ಚ ನ್ಯಾಯಾಲಯವು ಕೇಂದ್ರ ಸರಕಾರ ಮತ್ತು ಪುರಾತತ್ವ ಇಲಾಖೆಯಿಂದ ಉತ್ತರ ಕೇಳಿದೆ ! : Taj Mahal Survey

ತಾಜಮಹಲ್‌ ನಲ್ಲಿ ತೇಜೋ ಮಹಾಲಯ ದೇವಸ್ಥಾನವಿರುವ ಪ್ರಕರಣ

ಪ್ರಯಾಗರಾಜ (ಉತ್ತರಪ್ರದೇಶ) – ತಾಜಮಹಲ ಇದು ತೇಜೋಮಹಾಲಯ ದೇವಸ್ಥಾನವಾಗಿದೆ ಎಂದು ದಾವೆ ಮಾಡುವ ಅರ್ಜಿಯ ಕುರಿತು ಅಲಾಹಾಬಾದ ಉಚ್ಚ ನ್ಯಾಯಾಲಯವು ಜುಲೈ ೬ ರಂದು ನಡೆದ ವಿಚಾರಣೆಯ ಸಮಯದಲ್ಲಿ ಕೇಂದ್ರ ಸರಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಬಳಿ ಉತ್ತರವನ್ನು ನೀಡಲು ಆದೇಶಿಸಿದೆ.

ಈ ಅರ್ಜಿಯನ್ನು ‘ಅಗ್ರೇಶ್ವರ ಮಹಾದೇವ ನಾಗನಾಥೇಶ್ವರ ವಿರಾಜಮಾನ’ ಇವರ ಪರವಾಗಿ ಹಿರಿಯ ನ್ಯಾಯವಾದಿ ಪೂ. ಹರಿ ಶಂಕರ ಜೈನ್ ಅವರೊಂದಿಗೆ ೫ ಜನರಿಂದ ದಾಖಲಿಸಲಾಗಿದೆ. ಇದರಲ್ಲಿ ‘ತಾಜಮಹಲ ಪರಿಸರದ ಒಳಗೆ ‘ಅಗ್ರೇಶ್ವರ ಮಹಾದೇವ ನಾಗನಾಥೇಶ್ವರ ವಿರಾಜಮಾನ ತೇಜೋಮಹಾಲಯ ದೇವಸ್ಥಾನ’ ಇದೆ, ಎಂದು ಘೋಷಣೆ ಮಾಡಬೇಕು, ಎಂಬ ಬೇಡಿಕೆಯನ್ನು ಮಾಡಲಾಗಿದೆ.

‘ನ್ಯಾಯವಾದಿ ಆಯುಕ್ತರನ್ನು ನೇಮಕ’ ಮಾಡಲು ಬೇಡಿಕೆ

ವಿಚಾರಣೆಯ ಸಮಯದಲ್ಲಿ ನ್ಯಾಯವಾದಿ ಪೂ. ಹರಿ ಶಂಕರ ಜೈನ್ ಅವರು ಯುಕ್ತಿವಾದ ಮಾಡಿದರು, ಈ ಪರಿಸರದ ಚಿತ್ರೀಕರಣ ಮತ್ತು ಛಾಯಾಚಿತ್ರ ತೆಗೆಯಲು ಮತ್ತು ಒಬ್ಬ ನ್ಯಾಯವಾದಿ ಆಯುಕ್ತರನ್ನು ನೇಮಕ ಮಾಡಲು ಕಿರಿಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು; ಆದರೆ ಕಿರಿಯ ನ್ಯಾಯಾಲಯವು ಅವರ ಈ ಅರ್ಜಿಯನ್ನು ತಪ್ಪು ರೀತಿಯಲ್ಲಿ ತಿರಸ್ಕರಿಸಿತು. ಇದರ ನಂತರ ಅವರ ಪುನರ್ವಿಮರ್ಶನಾ ಅರ್ಜಿಯನ್ನೂ ಸಹ ವಿಚಾರಣೆಗೆ ಯೋಗ್ಯವಲ್ಲ ಎಂದು ಭಾವಿಸಿ ತಿರಸ್ಕರಿಸಲಾಯಿತು. ಈ ಸಂಪೂರ್ಣ ವಿವಾದದ ಯೋಗ್ಯ ನಿವಾರಣೆಗಾಗಿ ಪರಿಸರದ ಸಮೀಕ್ಷೆ ಮತ್ತು ಚಿತ್ರೀಕರಣ ಮಾಡುವುದು ಅತ್ಯಂತ ಆವಶ್ಯಕವಾಗಿದೆ.

೨೦೧೫ ರಿಂದ ಮುಖ್ಯ ಪ್ರಕರಣ ಬಾಕಿ

ತಾಜಮಹಲಗೆ ಸಂಬಂಧಿಸಿದಂತೆ ೨೦೧೫ ರಲ್ಲಿ ಒಂದು ಖಟ್ಲೆಯನ್ನು ದಾಖಲಿಸಲಾಗಿತ್ತು, ಅದು ಇನ್ನೂ ಆಗ್ರಾದ ದಿವಾಣಿ ನ್ಯಾಯಾಲಯದಲ್ಲಿ ಬಾಕಿ ಇದೆ. ಈ ಖಟ್ಲೆಯಲ್ಲಿ ತಾಜಮಹಲ ಪರಿಸರದಲ್ಲಿ ಅಗ್ರೇಶ್ವರ ಮಹಾದೇವ ನಾಗನಾಥೇಶ್ವರ ವಿರಾಜಮಾನ ತೇಜೋ ಮಹಾಲಯದ ದೇವಸ್ಥಾನವಿದೆ ಎಂದು ಘೋಷಿಸುವ ಬೇಡಿಕೆಯನ್ನು ಮಾಡಲಾಗಿದೆ. ಈ ಖಟ್ಲೆಯು ಬಾಕಿ ಇರುವಾಗಲೇ ನ್ಯಾಯವಾದಿ ಆಯುಕ್ತರನ್ನು ನೇಮಕ ಮಾಡುವ ಅರ್ಜಿ ಸಲ್ಲಿಸಲಾಗಿತ್ತು, ಅದನ್ನು ಎರಡೂ ಜಿಲ್ಲಾ ನ್ಯಾಯಾಲಯಗಳು ತಿರಸ್ಕರಿಸಿದ್ದವು.

ಸಂಪಾದಕೀಯ ನಿಲುವು

  • ​ಕೇಂದ್ರದಲ್ಲಿನ ಭಾಜಪ ಸರಕಾರ ಮತ್ತು ಅದರದೇ ಅಧೀನದಲ್ಲಿರುವ ಪುರಾತತ್ವ ಇಲಾಖೆಯು ತಾಜಮಹಲ್‌ ನ ನಿಜವಾದ ಇತಿಹಾಸವನ್ನು ಮುನ್ನೆಲೆಗೆ ತರಲು ಯಾವುದು ವಸ್ತುನಿಷ್ಠ ಮಾಹಿತಿಯಿದೆಯೋ, ಅಂದರೆ ‘ಅದು ಹಿಂದೂಗಳ ದೇವಸ್ಥಾನವಾಗಿದೆ’, ಇದನ್ನು ಈಗ ಜಗತ್ತಿಗೆ ಹೇಳಬೇಕು !
  • ಮೊಘಲರು ಕಬಳಿಸಿದ ಹಿಂದೂಗಳ ವಾಸ್ತುಗಳು ಪುನಃ ಹಿಂದೂಗಳದ್ದೇ ಆಗಿವೆ ಎಂದು ಜಗತ್ತಿಗೆ ಹೇಳಲು ಇದೇ ಯೋಗ್ಯ ಸಮಯವಾಗಿದೆ. ತಾಜಮಹಲ ಕುರಿತು ಪು.ನಾ. ಓಕ್ ಅವರು ಕೆಲವು ದಶಕಗಳ ಹಿಂದೆಯೇ ಯಾವ ಪುರಾವೆಗಳೊಂದಿಗೆ ಬಹಿರಂಗಪಡಿಸಿದ್ದಾರೆಯೋ, ಅದನ್ನು ಈಗ ಒಪ್ಪಿಕೊಳ್ಳಲೇಬೇಕು !