ಬಲೂಚಿಸ್ತಾನ್‌ನಲ್ಲಿ ಆತ್ಮಹುತಿ ದಾಳಿ, 30 ಪಾಕ್ ಸೈನಿಕರು ಬಲಿ ಬಲೂಚಿಸ್ತಾನ್ ಸ್ಫೋಟ: 30 ಸೈನಿಕರ ಸಾವು : Balochistan Suicide Attack

ಗ್ವಾದರ್ (ಬಲೂಚಿಸ್ತಾನ್) – ಬಲೂಚಿಸ್ತಾನ್ ಪ್ರಾಂತ್ಯವನ್ನು ಪಾಕಿಸ್ತಾನದಿಂದ ಸಂಪೂರ್ಣವಾಗಿ ಸ್ವತಂತ್ರಗೊಳಿಸಲು ಹೋರಾಡುತ್ತಿರುವ ಬಲೂಚಿಸ್ತಾನದ ಸಶಸ್ತ್ರ ಪ್ರತ್ಯೇಕತಾವಾದಿ ಸಂಘಟನೆಯಾದ ‘ಬಲೂಚ್ ಲಿಬರೇಷನ್ ಆರ್ಮಿ’ (ಬಿ.ಎಲ್.ಎ.), ಗ್ವಾದರ್ ಜಿಲ್ಲೆಯ ಜಿವಾನಿ ಪ್ರದೇಶದಲ್ಲಿ ಪಾಕಿಸ್ತಾನದ ‘ಕೋಸ್ಟ್ ಗಾರ್ಡ್ಸ್’ ಕೇಂದ್ರದ ಮೇಲೆ ಆತ್ಮಾಹುತಿ ದಾಳಿ ನಡೆಸಿದೆ. ಆತ್ಮಾಹುತಿ ಬಾಂಬರ್ ಸ್ಫೋಟಕಗಳನ್ನು ತುಂಬಿದ್ದ ಟ್ರಕ್ ಅನ್ನು ಕೇಂದ್ರದೊಳಗೆ ನುಗ್ಗಿಸಿದ್ದಾನೆ. ಇದರ ಬೆನ್ನಲ್ಲೇ ಭಾರಿ ದೊಡ್ಡ ಸ್ಫೋಟ ಸಂಭವಿಸಿದೆ. ಈ ದಾಳಿಯಲ್ಲಿ 30ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

‘ಬಿ.ಎಲ್.ಎ.’ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಜುಲೈ 3 ರಂದು ಅವರ ವಿಶೇಷ ‘ಮಜೀದ್ ಬ್ರಿಗೇಡ್’ ಈ ದಾಳಿಯನ್ನು ನಡೆಸಿದೆ. ಸ್ಫೋಟದ ಬೆನ್ನಲ್ಲೇ ಅವರ ‘ಫತೇಹ್ ಸ್ಕ್ವಾಡ್’ನ ಹೋರಾಟಗಾರರು ಕೇಂದ್ರದ ಮೇಲೆ ಎಲ್ಲಾ ಕಡೆಯಿಂದಲೂ ದಾಳಿ ನಡೆಸಿ, ಬದುಕುಳಿದ ಪಾಕಿಸ್ತಾನಿ ಸೈನಿಕರೊಂದಿಗೆ ಗುಂಡಿನ ಚಕಮಕಿ ನಡೆಸಿದರು. ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ, ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಈ ಸಂಘಟನೆ ತಿಳಿಸಿದೆ.