ಪೊಲೀಸ್ ಉಪ ಅಧೀಕ್ಷಕನಿಗೆ ಸಂಬಂಧಿಸಿದ ೧೬ ಸ್ಥಳಗಳ ಮೇಲೆ ದಾಳಿ

ಭಾಗ್ಯನಗರ – ಇಲ್ಲಿನ ಲಂಚ ಮತ್ತು ಭ್ರಷ್ಟಾಚಾರ ನಿಗ್ರಹ ದಳವು ನಗರದ ಪೊಲೀಸ್ ಪಡೆಯ ‘ಕಂಪ್ಯೂಟರ್ ಸರ್ವಿಸ್’ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಸಂಕೀರೆಡ್ಡಿ ಭೀಮ ರೆಡ್ಡಿ ಅವರ ಮನೆ ಸೇರಿದಂತೆ ೧೬ ಸ್ಥಳಗಳ ಮೇಲೆ ದಾಳಿ ನಡೆಸಿದೆ. ಇದರಲ್ಲಿ ರೆಡ್ಡಿ ಅವರ ಮನೆ ಹಾಗೂ ಅವರ ಸಂಬಂಧಿಕರು, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಸೇರಿದ ಆಸ್ತಿಗಳು ಸೇರಿವೆ. ಭ್ರಷ್ಟಾಚಾರ ನಿಗ್ರಹ ದಳದ ಪ್ರಕಾರ, ‘ರೆಡ್ಡಿ ಅವರ ಬಳಿ ೨೦೦ ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಮೌಲ್ಯದ ಆಸ್ತಿ ಇದೆ. ಇವರ ಬಳಿ ಆದಾಯದ ಮೂಲಕ್ಕಿಂತ ಹೆಚ್ಚಿನ ಸಂಪತ್ತು ಇದೆ. ಈ ಅಧಿಕಾರಿಯು ತನ್ನ ಸೇವಾ ಅವಧಿಯಲ್ಲಿ ಭ್ರಷ್ಟಾಚಾರ ಮತ್ತು ಇತರ ಅಕ್ರಮ ಮಾರ್ಗಗಳ ಮೂಲಕ ಅಪಾರ ಪ್ರಮಾಣದ ಸಂಪತ್ತನ್ನು ಗಳಿಸಿದ್ದಾನೆ.’ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳವು ಜುಲೈ ೨ ರಂದು ಏಕಕಾಲದಲ್ಲಿ ೧೬ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ.
೧. ಈ ದಾಳಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ರೆಡ್ಡಿ ಅವರ ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳಲ್ಲಿರುವ ಅಪಾರ ಆಸ್ತಿಗೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆಗಳು ಪತ್ತೆಯಾಗಿವೆ.
೨. ರೆಡ್ಡಿ ಅವರ ಮಾಲೀಕತ್ವದ ೨ ಐಷಾರಾಮಿ ಬಂಗಲೆಗಳು, ಗಾಚಿಬೌಲಿ ಮತ್ತು ತೆಲ್ಲಾಪುರದಲ್ಲಿ ೪ ಫ್ಲಾಟ್‌ಗಳು, ನಾಗೋಲೆ ಮತ್ತು ಪಟಾಣಚೆರುವಿನಲ್ಲಿ ೩ ನಿವೇಶನಗಳು, ಮಣಿಕೊಂಡದ ವಾಣಿಜ್ಯ ಸಂಕೀರ್ಣದಲ್ಲಿ ಪಾಲುದಾರಿಕೆ ಮುಂತಾದ ವಿಷಯಗಳು ಬೆಳಕಿಗೆ ಬಂದಿವೆ.
೩. ಕರ್ನಾಟಕ, ಹಾಗೆಯೇ ತೆಲಂಗಾಣದ ಸಂಗಾರೆಡ್ಡಿ, ವಿಕಾರಾಬಾದ ಮತ್ತು ಮುಚಿಂತಾಲಾದಲ್ಲಿ ೫೦ ಎಕರೆಗಿಂತಲೂ ಅಧಿಕ ಕೃಷಿ ಭೂಮಿಯೂ ಅವರ ಮಾಲೀಕತ್ವದಲ್ಲಿದೆ.
೪. ಅಧಿಕಾರಿಗಳು ನಡೆಸಿದ ಶೋಧದ ವೇಳೆ ರೆಡ್ಡಿ ಅವರ ಮನೆಯಿಂದ ೩ ಲಕ್ಷದ ೬ ಸಾವಿರ ರೂಪಾಯಿ ನಗದು ಮತ್ತು ಸಂಬಂಧಿಕರೊಬ್ಬರ ಮನೆಯಿಂದ ೪೦ ಲಕ್ಷ ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ. ಇದರೊಂದಿಗೆ ೨ ಕೆಜಿ ಚಿನ್ನದ ಆಭರಣಗಳು ಮತ್ತು ೨೦ ಕೆಜಿ ಬೆಳ್ಳಿಯ ವಸ್ತುಗಳನ್ನೂ ವಶಪಡಿಸಿಕೊಳ್ಳಲಾಗಿದೆ.
೫. ಲಂಚ ಮತ್ತು ಭ್ರಷ್ಟಾಚಾರ ನಿಗ್ರಹ ದಳವು ನೀಡಿರುವ ಮಾಹಿತಿಯ ಪ್ರಕಾರ, ಜಪ್ತಿ ಮಾಡಲಾದ ಸ್ಥಿರಾಸ್ತಿಯ ಮಾರುಕಟ್ಟೆ ಮೌಲ್ಯ ೨೦೦ ಕೋಟಿ ರೂಪಾಯಿಗಳಿಗಿಂತಲೂ ಅಧಿಕವಾಗಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”