ನೋಟುಗಳ ಕಂತೆಗಳನ್ನು ಕದ್ದು ಸಾಕ್ಸ್‌ನಲ್ಲಿ ಅಡಗಿಸಿಡುತ್ತಿದ್ದ 5 ಸಿಬ್ಬಂದಿ ಪತ್ತೆ! : Ram Temple Theft

ಶ್ರೀರಾಮ ಮಂದಿರದ ದಾನದ ಹಣ ಕಳ್ಳತನದ ಸಿಸಿಟಿವಿ ದೃಶ್ಯಾವಳಿ ಬಹಿರಂಗ!

ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀರಾಮ ಮಂದಿರದ ‘ಪಿಲ್ಗ್ರಿಮ್ ಫೆಸಿಲಿಟಿ ಸೆಂಟರ್’ (ಯಾತ್ರಾರ್ಥಿ ಸೌಲಭ್ಯ ಕೇಂದ್ರ) ನಲ್ಲಿದ್ದ 45 ದಿನಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಕೂಲಂಕಷವಾಗಿ ಪರಿಶೀಲಿಸಿದಾಗ, ಹಣ ಎಣಿಕೆ ಮಾಡುವ 5 ಮಂದಿ ಸಿಬ್ಬಂದಿ ನೋಟುಗಳ ಕಂತೆಗಳನ್ನು ತೆಗೆದು ತಮ್ಮ ಬಟ್ಟೆಗಳಲ್ಲಿ ಅಥವಾ ಸಾಕ್ಸ್‌ಗಳಲ್ಲಿ ಅಡಗಿಸಿಟ್ಟಿರುವುದು ಬೆಳಕಿಗೆ ಬಂದಿದೆ. ‘ದುರಾದೃಷ್ಟವಶಾತ್ ಮಂದಿರದ ಆಡಳಿತ ಮಂಡಳಿಯು 45 ದಿನಗಳಿಗಿಂತ ಹಳೆಯದಾದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಿಡುವುದಿಲ್ಲ. ಆದ್ದರಿಂದ ಈ ಕೃತ್ಯವು ಯಾವಾಗಲಿಂದ ನಡೆಯುತ್ತಿತ್ತು? ಎಂಬುದನ್ನು ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

1. ಈ ಸಿಬ್ಬಂದಿಗಳನ್ನು ನೇಮಕ ಮಾಡಿದ್ದ ಸಂಸ್ಥೆಯು, ತಾನು ಇವರನ್ನು ಆಯ್ಕೆ ಮಾಡಿಲ್ಲ ಎಂದು ವಾದಿಸಿದೆ. ಯಾವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (SBI) ದಾನದ ಹಣವನ್ನು ಜಮಾ ಮಾಡಲಾಗುತ್ತಿತ್ತೋ, ಅದೇ ಬ್ಯಾಂಕ್ ಈ ನೇಮಕಾತಿಗಾಗಿ ಇವರ ಹೆಸರುಗಳನ್ನು ಶಿಫಾರಸು ಮಾಡಿತ್ತು ಎಂದು ಸಂಸ್ಥೆ ಹೇಳಿದೆ.

2. ಪೊಲೀಸರ ತಂಡವು ಇದುವರೆಗೆ ಆರೋಪಿಗಳಿಂದ 80 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದೆ. ಮಂದಿರದ ವಿವಿಧ ದಾನಪೆಟ್ಟಿಗೆಗಳಲ್ಲಿ ಸಂಗ್ರಹವಾದ ಹಣವನ್ನು ಎಣಿಸಲು ಟ್ರಸ್ಟ್ (ನ್ಯಾಸ) 50 ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿತ್ತು.