ಭ್ರಷ್ಟ ವ್ಯವಹಾರಗಳ ಕಡೆಗೆ ಕಣ್ಣು ಮುಚ್ಚಿ ಕುಳಿತದ್ದೇ ಚಂಪತ್ ರಾಯ್ ಅವರ ಅಪರಾಧ! – ವಿಹಿಂಪ

ಶ್ರೀರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ

ಅಯೋಧ್ಯಾ (ಉತ್ತರ ಪ್ರದೇಶ) – ಶ್ರೀರಾಮ ಮಂದಿರಕ್ಕೆ ಸಂಬಂಧಿಸಿದಂತೆ ಏನೆಲ್ಲಾ ನಡೆದಿದೆಯೋ, ಅದರಿಂದ ತೀವ್ರ ವೇದನೆಯಾಗಿದೆ. ಆದ್ದರಿಂದ ಯಾರು ದೋಷಿಗಳಾಗಿದ್ದಾರೋ, ಅವರನ್ನು ಆದಷ್ಟು ಬೇಗ ಜೈಲಿಗೆ ಹಾಕಬೇಕು. ಇದರಿಂದ ಮಾತ್ರ ಹಿಂದೂ ಸಮಾಜಕ್ಕೆ ಸಮಾಧಾನ ಸಿಗಲಿದೆ. ಶ್ರೀರಾಮ ಮಂದಿರ ದೇಣಿಗೆ ಪ್ರಕರಣದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ನಿರ್ಲಕ್ಷ್ಯ ವಹಿಸಿರುವುದರಿಂದ ಅವರೇ ದೋಷಿಯಾಗಿದ್ದಾರೆ. ಭ್ರಷ್ಟ ವ್ಯವಹಾರಗಳ ಕಡೆಗೆ ಅವರು ಕಣ್ಣು ಮುಚ್ಚಿ ಕುಳಿತದ್ದೇ ಅವರ ಅಪರಾಧವಾಗಿರಬಹುದು ಎಂದು ವಿಶ್ವ ಹಿಂದೂ ಪರಿಷತ್ (ವಿಹಿಂಪ) ಕಾರ್ಯಾಧ್ಯಕ್ಷ ಆಲೋಕ್ ಕುಮಾರ್ ಹೇಳಿದ್ದಾರೆ. ನಡೆದಿರುವುದೆಲ್ಲಾ ಅತ್ಯಂತ ದುರದೃಷ್ಟಕರ. ಈ ಘಟನೆಯಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ದೇಣಿಗೆ ಕಳ್ಳತನ ಪ್ರಕರಣಕ್ಕೆ ವಿಹಿಂಪ ಜವಾಬ್ದಾರಿಯಲ್ಲ! – ಆಲೋಕ್ ಕುಮಾರ್

ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣಕ್ಕೆ ವಿಶ್ವ ಹಿಂದೂ ಪರಿಷತ್ ಜವಾಬ್ದಾರಿಯಲ್ಲ. 2019 ರಲ್ಲಿ ಶ್ರೀರಾಮ ಜನ್ಮಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಬಂದ ದಿನವೇ ನಾವು ಸ್ಪಷ್ಟಪಡಿಸಿದ್ದೆವು – ಇನ್ನು ಮುಂದೆ ವಿಶ್ವ ಹಿಂದೂ ಪರಿಷತ್ತಿನ ಕಾರ್ಯ ಮುಗಿಯಿತು. ಮಂದಿರವನ್ನು ನಿರ್ಮಿಸುವುದು ಮತ್ತು ಆ ನಂತರದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ವಿಹಿಂಪದ ಕೆಲಸವಲ್ಲ. ಆದ್ದರಿಂದ ದೇಣಿಗೆ ಕಳ್ಳತನಕ್ಕೆ ನಾವು ಜವಾಬ್ದಾರರಲ್ಲ ಎಂದು ಕುಮಾರ್ ಸ್ಪಷ್ಟಪಡಿಸಿದರು.