ಬೆಂಗಳೂರು: ಮಹಾನಗರ ಪಾಲಿಕೆಯ ಬೇಜವಾಬ್ದಾರಿತನ; ವೃದ್ಧೆ ಸಾವು

ಬೆಂಗಳೂರು – ಮರದ ರೆಂಬೆಗಳು ಮನೆಯ ಮೇಲೆ ಬರುತ್ತಿದ್ದ ಕಾರಣ, ಅವುಗಳನ್ನು ತೆರವುಗೊಳಿಸುವಂತೆ ಮಹಾನಗರ ಪಾಲಿಕೆಗೆ ಸತತವಾಗಿ ತಿಳಿಸಿದರೂ ಅವುಗಳನ್ನು ತೆರವುಗೊಳಿಸಲಿಲ್ಲ. ಇದರಿಂದಾಗಿ 58 ವರ್ಷದ ಪ್ರಮಿಳಾಬಾಯಿ ಎಂಬವರು ಸ್ವತಃ ತಾವೇ ಟೆರೇಸ್ ಮೇಲೆ ಹೋಗಿ ರೆಂಬೆಗಳನ್ನು ಕಡಿಯಲು ಯತ್ನಿಸುತ್ತಿದ್ದಾಗ ಕಾಲು ಜಾರಿ ಕೆಳಗೆ ಬಿದ್ದರು. ಅವರ ತಲೆಗೆ ತೀವ್ರ ಗಾಯವಾಯಿತು. ಆಸ್ಪತ್ರೆಯಲ್ಲಿ ಮೂರು ದಿನಗಳ ವರೆಗೆ ಪ್ರಮಿಳಾಬಾಯಿ ಅವರ ಚಿಕಿತ್ಸೆ ನಡೆಯುತ್ತಿತ್ತು. ಅಂತಿಮವಾಗಿ ಅವರು ಸಾವನ್ನಪ್ಪಿದರು. ಈ ಘಟನೆಯಿಂದಾಗಿ ನಗರದಲ್ಲಿ ಬೆಳೆದಿರುವ ಮರಗಳ ಕುರಿತಾದ ದೂರುಗಳ ಬಗ್ಗೆ ಮಹಾನಗರ ಪಾಲಿಕೆ ಆಡಳಿತವು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ.
ಪ್ರಮಿಳಾಬಾಯಿ ಅವರ ಪತಿ ಸಿದ್ದರಾವ್ ಅವರು ಈ ಬಗ್ಗೆ ಮಾತನಾಡಿ, ಬಹಳ ದಿನಗಳಿಂದ ಮನೆಯ ಆವರಣದಲ್ಲಿ ಬೆಳೆಯುತ್ತಿದ್ದ ಮರಗಳ ತೊಂದರೆಯಿತ್ತು. ನನ್ನ ಪತ್ನಿ ಮರದ ರೆಂಬೆಯನ್ನು ಕಡಿಯಲು ಪ್ರಯತ್ನಿಸಿದಳು, ಈ ಪ್ರಯತ್ನದಲ್ಲೇ ಇಂದು ಅವಳು ತನ್ನ ಪ್ರಾಣ ಕಳೆದುಕೊಂಡಿದ್ದಾಳೆ. ನನ್ನ ಕಾಲಿಗೆ ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಯಾಗಿತ್ತು ಮತ್ತು ಅವಳು ನನ್ನನ್ನು ನೋಡಿಕೊಳ್ಳುತ್ತಿದ್ದಳು, ಈಗ ನನ್ನನ್ನು ಯಾರು ನೋಡಿಕೊಳ್ಳುತ್ತಾರೆ?, ಎಂದು ಭಾವುಕರಾಗಿ ಪ್ರಶ್ನಿಸಿದರು.
ಪಶ್ಚಿಮ ವಲಯದ ಸರಕಾರಿ ವಲಯ ಅರಣ್ಯಾಧಿಕಾರಿ ಬಿ. ಸುದರ್ಶನ ಅವರು ಈ ಘಟನೆ ಕುರಿತು ಮಾತನಾಡಿ, ನಮಗೆ ಆ ಮಹಿಳೆಯಿಂದ ಯಾವುದೇ ದೂರು ಬಂದಿಲ್ಲ. ಸಾವಿನ ಮಾಹಿತಿ ದೊರೆತ ನಂತರ ನಾನು ಸ್ಥಳಕ್ಕೆ ಭೇಟಿ ನೀಡಿದ್ದೆ, ಆಗ ಆ ಮಹಿಳೆ ಮೂರನೇ ಮಹಡಿಯ ಸಜ್ಜಾದಲ್ಲಿ ಕಾಲು ಜಾರಿ ಬಿದ್ದಿರುವುದು ಕಂಡುಬಂದಿದೆ. ಈ ಘಟನೆ ನಡೆದ ಸ್ಥಳದಲ್ಲಿ ಸುರಕ್ಷತೆಗಾಗಿ ಯಾವುದೇ ರೇಲಿಂಗ್ಸ್ ಅಥವಾ ರಕ್ಷಣಾತ್ಮಕ ಗೋಡೆ ಇರಲಿಲ್ಲ ಎಂದು ಹೇಳಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”