ಶವ ಹೂಳಲು ಮುಸಲ್ಮಾನ ಮತ್ತು ಪಾರ್ಸಿ ಎರಡೂ ಸಮಾಜಗಳಿಂದ ನಿರಾಕರಣೆ : ಕೊನೆಗೆ ಹಿಂದೂ ಸ್ಮಶಾನಭೂಮಿಯಲ್ಲಿ ಅಂತ್ಯಸಂಸ್ಕಾರ !
ಮಹಿಳೆಯು ಮತಾಂತರ ಮಾಡಿಕೊಂಡಿರಲಿಲ್ಲ !

ಕರ್ಣಾವತಿ (ಗುಜರಾತ) – ಮುಸಲ್ಮಾನ ವ್ಯಕ್ತಿಯೊಬ್ಬನನ್ನು ನಿಕಾಹ್ ಮಾಡಿಕೊಂಡಿದ್ದ ಗುಜರಾತಿನ ಪಾರ್ಸಿ ಮಹಿಳೆಯೊಬ್ಬರ ಮೃತದೇಹವು 2 ದಿನಗಳ ಕಾಲ ಅಂತ್ಯಸಂಸ್ಕಾರಕ್ಕಾಗಿ ಕಾಯಬೇಕಾದ ಘಟನೆ ಬೆಳಕಿಗೆ ಬಂದಿದೆ. ಮುಸಲ್ಮಾನ ಮತ್ತು ಪಾರ್ಸಿ ಎರಡೂ ಸಮಾಜಗಳು ದಫನಭೂಮಿಯನ್ನು ನೀಡಲು ನಿರಾಕರಿಸಿದ್ದರಿಂದ ಆಕೆಯ ಮೃತದೇಹವು ಶವಗಾರದಲ್ಲಿಯೇ ಬಿದ್ದಿತ್ತು. ಮುಸಲ್ಮಾನ ಪತಿಯು ಕೆಲವು ಮೌಲ್ವಿಗಳ (ಇಸ್ಲಾಂನ ಧಾರ್ಮಿಕ ಮುಖಂಡರು) ಸಂಪರ್ಕದಲ್ಲಿದ್ದರೂ, ನಿಕಾಹ್ (ಇಸ್ಲಾಮಿಕ್ ಪದ್ಧತಿಯ ಮದುವೆ) ಆಗಿದ್ದರೂ ಸಹ ಇಸ್ಲಾಮಿಕ್ ಪದ್ಧತಿಯಂತೆ ಆಕೆಯ ಮೃತದೇಹದ ಹೂಳಲು ಅನುಮತಿ ಸಿಗಲಿಲ್ಲ. ಇದರ ನಂತರ ಪತಿಯು ಪಾರ್ಸಿ ಸಮುದಾಯವನ್ನು ಸಂಪರ್ಕಿಸಿದರೂ, ಅಂತ್ಯಸಂಸ್ಕಾರಕ್ಕೆ ಅನುಮತಿ ದೊರೆಯಲಿಲ್ಲ. ಕೊನೆಗೆ ಸನಾತನ ರೀತಿನೀತಿಗಳ ಪ್ರಕಾರ ಆ ಮಹಿಳೆಯ ಅಂತ್ಯಸಂಸ್ಕಾರವನ್ನು ಮಾಡಲಾಯಿತು. ಈ ಘಟನೆಯು ಗುಜರಾತಿನ ನವಸಾರಿಯಲ್ಲಿ ನಡೆದಿದೆ.
1. ಈ ಕುರಿತಾದ ವರದಿಯೊಂದರ ಪ್ರಕಾರ, 35 ವರ್ಷಗಳ ಹಿಂದೆ ನವಸಾರಿಯ ಪಾರ್ಸಿ ವಿದ್ಯಾರ್ಥಿನಿಯೊಬ್ಬಳು ಮುಸಲ್ಮಾನ ಪ್ರಾಧ್ಯಾಪಕ ನಿಸಾರ್ ಅಹ್ಮದ್ ಅವರನ್ನು ನಿಕಾಹ್ ಮಾಡಿಕೊಂಡಿದ್ದಳು.
2. ಪಾರ್ಸಿ ಸಮಾಜವು ಆ ವಿದ್ಯಾರ್ಥಿನಿಯನ್ನು ಪಾರ್ಸಿ ಸಮುದಾಯದಿಂದ ಹೊರಹಾಕಿತ್ತು ಮತ್ತು ಕುಟುಂಬಸ್ಥರೂ ಸಹ ಆಕೆಯೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದರು.
3. ಮೃತ ಮಹಿಳೆಯು ಇಸ್ಲಾಂ ಧರ್ಮವನ್ನು ಸ್ವೀಕರಿಸಿರಲಿಲ್ಲ ಮತ್ತು ಅವಳು ಜೊರಾಸ್ಟ್ರಿಯನ್ (ಪಾರ್ಸಿ) ಧರ್ಮವನ್ನೇ ಪಾಲಿಸುತ್ತಿದ್ದಳು. ಈ ದಂಪತಿಗೆ ಮಕ್ಕಳಿರಲಿಲ್ಲ. ಇತ್ತೀಚೆಗೆ ಅವಳು ಅನಾರೋಗ್ಯಕ್ಕೆ ತುತ್ತಾಗಿ, ಜೂನ್ 4 ರಂದು ನಿಧನರಾಗಿದ್ದರು.
4. ಮೃತ ಮಹಿಳೆಯ ಸಹೋದರಿಯು ಮಾಹಿತಿ ನೀಡಿ, ಯಾವುದೇ ದಾರಿ ಉಳಿಯದ ಕಾರಣ ತಾವು ನವಸಾರಿಯ ಸಮಾಜ ಸೇವಕ ಮತ್ತು ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಸಾಜನ ಭರವಾಡ ಅವರ ಸಹಾಯವನ್ನು ಕೋರಿದ್ದಾಗಿ ತಿಳಿಸಿದರು. ಎಲ್ಲರ ಒಪ್ಪಿಗೆಯೊಂದಿಗೆ ಹಿಂದೂ ಸ್ಮಶಾನಭೂಮಿಯಲ್ಲಿ ಮೃತದೇಹದ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ