ರಾಜಸ್ಥಾನದ ಘಟನೆ
(ಟ್ರಯಲ್ ರೂಮ್ ಎಂದರೆ ಬಟ್ಟೆ ಬದಲಾಯಿಸುವ ಸ್ಥಳ)

ಜುಂಜುನು (ರಾಜಸ್ಥಾನ) – ಇಲ್ಲಿನ ಚಿರಾವಾ ಪ್ರದೇಶದ ‘ಝಮ್‌ಝಮ್ ಕಲೆಕ್ಷನ್’ ಬಟ್ಟೆ ಅಂಗಡಿಯಲ್ಲಿ ‘ಸೇಲ್ಸ್‌ಮನ್’ ಆಗಿ ಕೆಲಸ ಮಾಡುತ್ತಿದ್ದ ಶಾರುಖ್ ಮನಿಯಾರ್ ಎಂಬಾತ ಅಂಗಡಿಯ ‘ಟ್ರಯಲ್ ರೂಮ್’ನಲ್ಲಿ ಮಹಿಳೆಯರ ರಹಸ್ಯ ವಿಡಿಯೋ ಚಿತ್ರೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಆರೋಪಿ ಶಾರುಖ್‌ನನ್ನು ಬಂಧಿಸಿದ್ದಾರೆ.
🚨 SHOCKING INCIDENT IN RAJASTHAN 🚨
A hidden camera was found inside a women's changing room of Zam Zam Collection in Chirawa, Jhunjhunu.
The accused, Shahrukh, tried to silence the victim's family through threats and offers of bribes, but the family courageously stood firm.… pic.twitter.com/EU9XcLN2UQ
— Sanatan Prabhat (@SanatanPrabhat) June 8, 2026
1. ಜೂನ್ 6 ರಂದು ಮಹಿಳೆಯೊಬ್ಬರು ತಮ್ಮ ಪತಿ ಮತ್ತು ಮಕ್ಕಳೊಂದಿಗೆ ಈ ಅಂಗಡಿಗೆ ಹೋಗಿದ್ದರು. ಆಯ್ಕೆ ಮಾಡಿದ ಬಟ್ಟೆಗಳನ್ನು ಧರಿಸಿ ನೋಡಲು ಅವರು ‘ಟ್ರಯಲ್ ರೂಮ್’ಗೆ ಹೋದರು; ಆದರೆ ಶಾರುಖ್ ಮನಿಯಾರ್ ಕೊಠಡಿಯ ಮೇಲ್ಛಾವಣಿಯ ಸಣ್ಣ ರಂಧ್ರದ ಮೂಲಕ ಮೊಬೈಲ್ ಫೋನ್‌ನಲ್ಲಿ ತನ್ನ ವಿಡಿಯೋ ಚಿತ್ರೀಕರಿಸುತ್ತಿರುವುದನ್ನು ಅವಳು ಗಮನಿಸಿದಳು.
2. ಆ ಮಹಿಳೆ ಹೊರಬಂದು ತನ್ನ ಪತಿಗೆ ಈ ವಿಷಯ ತಿಳಿಸಿದಳು. ಆಕೆಯ ಪತಿ ಶಾರುಖ್ ವಿಡಿಯೋ ನೋಡುತ್ತಿದ್ದಾಗ ರೆಡ್ ಹ್ಯಾಂಡೆಡ್ ಆಗಿ ಹಿಡಿದರು. ಸಂತ್ರಸ್ತ ಮಹಿಳೆ ತಕ್ಷಣ ಪೊಲೀಸರನ್ನು ಕರೆಸಿದರು.
3. ಶಾರುಖ್‌ನ ಮೊಬೈಲ್ ಫೋನ್ ಪರಿಶೀಲಿಸಿದಾಗ, ಬಟ್ಟೆ ಅಂಗಡಿಗೆ ಭೇಟಿ ನೀಡಿದ ಮಹಿಳೆಯರ ಹಲವು ಆಕ್ಷೇಪಾರ್ಹ ವಿಡಿಯೋಗಳು ಮತ್ತು ಚಿತ್ರಗಳು ಪತ್ತೆಯಾಗಿವೆ.
4. ಮುಂದಿನ ತನಿಖೆಯಲ್ಲಿ ಶಾರುಖ್ ಮಾತ್ರವಲ್ಲದೆ ಅಂಗಡಿಯ ಮಾಲೀಕರು ಮತ್ತು ಇತರ ಸಿಬ್ಬಂದಿಯೂ ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿದುಬಂದಿದೆ.
5. ಅಂಗಡಿಯ ಮಾಲೀಕ ಮತ್ತು ಅವನ ಸಹಚರರು ಈ ಅಪರಾಧವನ್ನು ಮುಚ್ಚಿಡಲು ಯತ್ನಿಸಿದರು ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ನನ್ನ ಮಾನಹಾನಿಯಾಗುವ ಭಯವನ್ನು ತೋರಿಸಿ, ಪೊಲೀಸರಿಗೆ ದೂರು ನೀಡದಿರಲು ಹಣದ ಆಮಿಷವನ್ನೂ ಒಡ್ಡಿದರು; ಆದರೆ ಸಂತ್ರಸ್ತೆ ಪೊಲೀಸರನ್ನು ಕರೆಯಿಸುವ ತನ್ನ ನಿರ್ಧಾರಕ್ಕೆ ಬದ್ಧಳಾಗಿದ್ದು ಪೊಲೀಸರನ್ನು ಕರೆಸಿದಳು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!