‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ಎಮ್.ಐ.ಎಮ್.’ನ ನಗರಸೇವಕ ಮತೀನ್ ಪಟೇಲ್ ಮತ್ತು ಹನೀಫ್ ಶೇಖ್ ಅವರ 8 ಗಂಟೆಗಳ ಕಾಲ ವಿಚಾರಣೆ !

ನಾಶಿಕ್ – ಇಲ್ಲಿನ ರಾಷ್ಟ್ರವಿಘಾತಕ ‘ಕಾರ್ಪೊರೇಟ್ ಜಿಹಾದ್’ ಪ್ರಕರಣದ ಮುಖ್ಯ ಶಂಕಿತ ನಿದಾ ಖಾನ್ ಳಿಗೆ ಛತ್ರಪತಿ ಸಂಭಾಜಿನಗರದಲ್ಲಿ ರಹಸ್ಯವಾಗಿ ಆಶ್ರಯ ನೀಡಿರುವುದು ಬೆಳಕಿಗೆ ಬಂದಿದೆ. ‘ವಿಶೇಷ ತನಿಖಾ ತಂಡ’ವು ‘ಎ.ಐ.ಎಮ್.ಐ.ಎಮ್.’ (‘ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತಿಹಾದುಲ್ ಮುಸ್ಲಿಮೀನ್’) ಪಕ್ಷದ ನಗರಸೇವಕ ಮತೀನ್ ಪಟೇಲ್ ಮತ್ತು ಮನೆ ಮಾಲೀಕ ಹನೀಫ್ ಶೇಖ್ ಇಬ್ಬರನ್ನೂ ಜೂನ್ 1 ರಂದು ಅಪರಾಧ ವಿಭಾಗದ (ಕ್ರೈಮ್ ಬ್ರಾಂಚ್) ಕಚೇರಿಯಲ್ಲಿ ಎರಡನೇ ಬಾರಿಗೆ 8 ಗಂಟೆಗಳ ಕಾಲ ವಿಚಾರಣೆ ನಡೆಸಿತು. ತನಿಖೆಯಲ್ಲಿ ಮನೆ ಮಾಲೀಕ ಹನೀಫ್ ಶೇಖ್ ನಿದಾ ಖಾನ್ ಳಿಗೆ ಆಶ್ರಯ ನೀಡಿರುವುದು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಈ ಅಪರಾಧದಲ್ಲಿ ಸಹ-ಆರೋಪಿಯನ್ನಾಗಿ ಮಾಡಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವಿಚಾರಣೆಯ ವೇಳೆ ಹನೀಫ್ ಶೇಖ್, ಮತೀನ್ ಭಾಯ್ ನನ್ನ ಬಳಿ ಮನೆಯ ಕೀ ಕೇಳಿದ್ದರು. ಅವರು ಅದನ್ನು ಯಾರಿಗೆ ಕೊಟ್ಟರು ಎಂಬುದು ನನಗೆ ಗೊತ್ತಿಲ್ಲ, ಎಂದು ನೆಪ ಹೇಳಿ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದನು; ಆದರೆ ಶಂಕಿತ ನಿದಾ ಖಾನ್ ಇದೇ ಮನೆಯಲ್ಲಿ ಅಡಗಿ ಕುಳಿತಿದ್ದಳು. ಮೇ 25 ರಂದು ನಡೆದ 10 ಗಂಟೆಗಳ ವಿಚಾರಣೆಯಲ್ಲಿ ಮತೀನ್ ಪಟೇಲ್, ‘ಬಡೇ ಸಾಹಬ್’ (ದೊಡ್ಡ ಸಾಹೇಬರು) ದೂರವಾಣಿ ಕರೆ ಮಾಡಿ ಹೇಳಿದ್ದರಿಂದ ಮನೆಯಲ್ಲಿ ಇರಲು ವ್ಯವಸ್ಥೆ ಮಾಡಿದ್ದಾಗಿ ತಿಳಿಸಿದ್ದನು.
ದೇಶದ್ರೋಹಿಗೆ ಮನೆಯಲ್ಲಿ ಆಶ್ರಯ ನೀಡುವುದು ಗಂಭೀರ ಅಪರಾಧ !
ಯಾವುದೇ ಗುರುತಿನ ಚೀಟಿ ಅಥವಾ ಪೂರ್ವಾಪರ ಮಾಹಿತಿ ಪಡೆದುಕೊಳ್ಳದೆ ಶಂಕಿತ ದೇಶದ್ರೋಹಿಗೆ ಮನೆಯಲ್ಲಿ ಆಶ್ರಯ ನೀಡಿದ್ದಕ್ಕಾಗಿ ಮನೆ ಮಾಲೀಕ ಹನೀಫ್ ಶೇಖ್ ವಿರುದ್ಧ ‘ಬಿ.ಎನ್.ಎಸ್. 216’ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಶೇಷ ತನಿಖಾ ತಂಡವು ಹನೀಫ್ ನನ್ನು ಕರೆದುಕೊಂಡು ಪಂಚನಾಮೆ ನಡೆಸಲು ಛತ್ರಪತಿ ಸಂಭಾಜಿನಗರಕ್ಕೆ ತೆರಳಿದೆ. ಈ ಸೂಕ್ಷ್ಮ ಪ್ರಕರಣದ ಶಂಕಿತರಾದ ದಾನಿಶ್ ಶೇಖ್, ತೌಸಿಫ್ ಅತ್ತಾರ್ ಮತ್ತು ನಿದಾ ಖಾನ್ ಅವರ ಜಾಮೀನು ಅರ್ಜಿಯ ಮೇಲಿನ ವಿಚಾರಣೆಯು ಮುಂಬರುವ ಜೂನ್ 12 ರಂದು ನಡೆಯಲಿದ್ದು, ತನಿಖಾ ತಂಡವು ಈ ಪ್ರಕರಣದ ಪೂರಕ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”