
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಅಹಿಂಸೆಯು ಮಾನವ ಜೀವನದ ಮಾರ್ಗದರ್ಶಕ ತತ್ವವಾಗಿರಬೇಕು; ಆದರೆ ಯಾವುದೇ ವ್ಯಕ್ತಿ ರಾಷ್ಟ್ರ ಮತ್ತು ಸಮಾಜಕ್ಕೆ ಅಪಾಯಕಾರಿಯಾದಾಗ, ಅಹಿಂಸೆ ನಡೆಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಹಿಂಸೆ ಅವಶ್ಯಕವಾಗುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು. ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪಸ್ಥಿತರಿದ್ದರು. ಯೋಗಿ ಆದಿತ್ಯನಾಥ್ ಅವರು, ಸುರಕ್ಷಿತ ವಾತಾವರಣದಲ್ಲಿ ಮಾತ್ರ ಅಭಿವೃದ್ಧಿ ಅರಳಲು ಸಾಧ್ಯ. ದೇಶದ ಶಕ್ತಿಯೇ ಜಗತ್ತಿನಲ್ಲಿ ಅದರ ಸ್ಥಾನವನ್ನು ನಿರ್ಧರಿಸುತ್ತದೆ. ಭದ್ರತಾ ರಂಗದಲ್ಲಿ ನಾವು ಬಲಿಷ್ಠರಾಗಿದ್ದಾಗ ಮಾತ್ರ ಜಗತ್ತು ನಮ್ಮೊಂದಿಗೆ ಸ್ನೇಹ ಬೆಳೆಸುತ್ತದೆ. ನೀವು ದುರ್ಬಲರಾಗಿದ್ದರೆ, ಯಾರೂ ನಿಮ್ಮ ಮುಂದೆ ತಲೆಬಾಗುವುದಿಲ್ಲ. ದೇಶದ ಶತ್ರುಗಳನ್ನು ಎದುರಿಸುವಾಗ ದೇಶದ ಸಶಸ್ತ್ರ ಪಡೆಗಳ ಕಾರ್ಯಗಳಲ್ಲಿ ಈ ತತ್ವವು ಕಂಡುಬರುತ್ತದೆ. ಸಶಸ್ತ್ರ ಪಡೆಗಳು ಎಲ್ಲಾ ಪರಿಸ್ಥಿತಿಗಳಲ್ಲೂ ದೇಶದ ಗಡಿಗಳನ್ನು ರಕ್ಷಿಸುವಂತೆ, ದೇಶವನ್ನು ರಕ್ಷಿಸುವ ಸೈನಿಕರನ್ನು ಗೌರವಿಸುವುದು ಮತ್ತು ಆದರಿಸುವುದು ನಾಗರಿಕರ ಜವಾಬ್ದಾರಿಯಾಗಿದೆ.
ಪರಧರ್ಮವು ನಮ್ಮ ಸ್ವಧರ್ಮದೊಂದಿಗೆ ಸಹಿಷ್ಣುತೆಯಿಂದ ವರ್ತಿಸದಿದ್ದರೆ, ಆಗ… !ರಾಷ್ಟ್ರಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ಅವರು ಯಾವ ರೀತಿ ಹೇಳಿಕೆ ನೀಡಿದ್ದಾರೋ, ಅದೇ ರೀತಿಯ ಹೇಳಿಕೆಯನ್ನು ಹಲವು ದಶಕಗಳ ಹಿಂದೆಯೇ ಸ್ವಾತಂತ್ರ್ಯವೀರ ಸಾವರ್ಕರ್ ಅವರು ಧರ್ಮದ ಬಗ್ಗೆ ನೀಡಿದ್ದರು. ಭಾರತ ರಾಷ್ಟ್ರ ಮತ್ತು ಹಿಂದೂ ಧರ್ಮದ ನಡುವೆ ಅದ್ವೈತವಿರುವುದರಿಂದ ಅವರ ಹೇಳಿಕೆ ಇಂದಿಗೂ ಸಂಪೂರ್ಣವಾಗಿ ಅನ್ವಯಿಸುತ್ತದೆ. ಅವರು ಹೇಳಿದ್ದರು, ‘ಪರಧರ್ಮವು ನಮ್ಮ ಸ್ವಧರ್ಮದೊಂದಿಗೆ ಸಹಿಷ್ಣುತೆಯಿಂದ ವರ್ತಿಸುವಾಗ, ಆ ಪರಧರ್ಮದೊಂದಿಗೆ ನಾವು ಸಹಿಷ್ಣುತೆಯಿಂದ ವರ್ತಿಸುವುದು ಒಂದು ಸದ್ಗುಣವಾಗಬಹುದು. ಆದರೆ, ಯಾವ ಪರಧರ್ಮವು ನಮ್ಮ ಸ್ವಧರ್ಮದೊಂದಿಗೆ ಸಹಿಷ್ಣುತೆಯಿಂದ ವರ್ತಿಸುವುದಿಲ್ಲವೋ, ಅಂತಹ ಪರಧರ್ಮಕ್ಕೆ ಪರಧರ್ಮಸಹಿಷ್ಣುತೆಯ ವ್ಯಾಖ್ಯಾನ ಅನ್ವಯಿಸುವುದಿಲ್ಲ !’ |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!