(‘ಡಿಟೆನ್ಷನ್ ಸೆಂಟರ್’ ಅಂದರೆ ಅನಧಿಕೃತವಾಗಿ ವಾಸಿಸುತ್ತಿರುವವರನ್ನು ವಶಕ್ಕೆ ತೆಗೆದುಕೊಂಡ ನಂತರ ಇರಿಸಲು ನಿರ್ಮಿಸಲಾದ ಶಿಬಿರ)

ಕೊಲಕಾತಾ (ಬಂಗಾಳ) – ರಾಜ್ಯದಲ್ಲಿ ಭಾಜಪ ಸರಕಾರ ಬಂದ ನಂತರ ಬಾಂಗ್ಲಾದೇಶಿ ನುಸುಳುಕೋರರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದ್ದು, ಈ ನುಸುಳುಕೋರರನ್ನು ಬಂಧಿಸಲು ಒಟ್ಟು 11 ಜಿಲ್ಲೆಗಳಲ್ಲಿ ‘ಡಿಟೆನ್ಷನ್ ಸೆಂಟರ್’ಗಳನ್ನು ನಿರ್ಮಿಸಲಾಗಿದೆ. ಇದುವರೆಗೆ 386 ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಲಾಗಿದೆ.
ಬಾಂಗ್ಲಾದೇಶ ಗಡಿಯ ಸಮೀಪವಿರುವ ಬಶೀರ್ಹಾಟ್ ಜಿಲ್ಲೆಯ 3 ‘ಡಿಟೆನ್ಷನ್ ಸೆಂಟರ್’ಗಳಲ್ಲಿ ಅತಿ ಹೆಚ್ಚು, ಅಂದರೆ 335 ಬಾಂಗ್ಲಾದೇಶಿ ನುಸುಳುಕೋರರನ್ನು ಇರಿಸಲಾಗಿದ್ದು, ಇದರಲ್ಲಿ 148 ಪುರುಷರು, 99 ಮಹಿಳೆಯರು ಮತ್ತು 88 ಮಕ್ಕಳು ಸೇರಿದ್ದಾರೆ. ಇದರ ನಂತರ ಮುರ್ಷಿದಾಬಾದ್ ನಲ್ಲಿ 19 ನುಸುಳುಕೋರರನ್ನು ಇರಿಸಲಾಗಿದೆ. ಇದರೊಂದಿಗೆ ಮಾಲ್ಡಾದಲ್ಲಿ 9, ದಕ್ಷಿಣ ದಿನಾಜ್ ಪುರದಲ್ಲಿ 8, ಬರುಯಿಪುರದಲ್ಲಿ 5, ಬಾರಾಸಾತ್ ನಲ್ಲಿ 3, ಕೂಚ್ ಬಿಹಾರ್ ಮತ್ತು ಜಾಂಗೀಪುರದಲ್ಲಿ ತಲಾ 2, ಹಾಗೆಯೇ ಸುಂದರ್ಬನ್, ಬೋನ್ಗಾಂವ್ ಮತ್ತು ಕೃಷ್ಣನಗರದಲ್ಲಿ ತಲಾ ಒಬ್ಬ ನುಸುಳುಕೋರನನ್ನು ಇರಿಸಲಾಗಿದೆ. ‘ಡಿಟೆಕ್ಟ್, ಡಿಲೀಟ್ ಮತ್ತು ಡಿಪೋರ್ಟ್’ (ಗುರುತಿಸಿ, ತೆಗೆದುಹಾಕಿ ಮತ್ತು ಗಡೀಪಾರು ಮಾಡಿ) ನೀತಿಯ ಪ್ರಕಾರ ಈ ನುಸುಳುಕೋರರ ಅಕ್ರಮ ಗುರುತನ್ನು ಅಳಿಸಿಹಾಕಲು ಅವರನ್ನು ಇಲ್ಲಿ ಇರಿಸಲಾಗಿದೆ. ಆ ನಂತರ ಈ ನುಸುಳುಕೋರರನ್ನು ಗಡಿ ಭದ್ರತಾ ಪಡೆಗೆ ಹಸ್ತಾಂತರಿಸಲಾಗುವುದು.
ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರು ಪ್ರಾರಂಭಿಸಿದ ‘ಡಿಟೆಕ್ಟ್, ಡಿಲೀಟ್ ಮತ್ತು ಡಿಪೋರ್ಟ್’ ಅಭಿಯಾನದ ಅಡಿಯಲ್ಲಿ ‘ಡಿಟೆನ್ಷನ್ ಸೆಂಟರ್’ಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದರು. ಅದರಂತೆ ಇದುವರೆಗೆ 11 ಜಿಲ್ಲೆಗಳಲ್ಲಿ ಈ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ ಬಾಂಗ್ಲಾದೇಶ ಗಡಿಯಲ್ಲಿ ಬೇಲಿ ಹಾಕಲು ರಾಜ್ಯ ಸರಕಾರವು ಗಡಿ ಭದ್ರತಾ ಪಡೆಗೆ 9 ಜಿಲ್ಲೆಗಳಲ್ಲಿನ 142.79 ಎಕರೆ ಭೂಮಿಯನ್ನೂ ನೀಡಿದೆ.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!