ಇದುವರೆಗೆ ಒಟ್ಟು ೧೩ ಜನರ ಬಂಧನ !

ಪುಣೆ – ‘ನೀಟ್ ೨೦೨೬’ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ಮೇ ೨೭ ರಂದು ಇನ್ನೂ ೨ ಆರೋಪಿಗಳನ್ನು ಬಂಧಿಸಿದೆ. ಲಾತೂರಿನ ಡಾ. ಮನೋಜ ಶಿರೂರೆ ಅವರು ‘ಕೋಚಿಂಗ್ ಸೆಂಟರ್’ ಒಂದರ ಮಾಲೀಕನ (ಆತ ಕೂಡ ಆರೋಪಿಯಾಗಿದ್ದಾನೆ) ಮಗನೂ ಸೇರಿದಂತೆ ೩ ವಿದ್ಯಾರ್ಥಿಗಳಿಗೆ ಆರೋಪಿ ಪಿ.ವಿ. ಕುಲಕರ್ಣಿ ಅವರಿಂದ ರಸಾಯನಶಾಸ್ತ್ರದ ಪ್ರಶ್ನೆಪತ್ರಿಕೆಗಳನ್ನು ತಂದುಕೊಟ್ಟಿದ್ದರು. ಡಾ. ಶಿರೂರೆ ಅವರನ್ನು ಬಂಧಿಸಲಾಗಿದೆ. ತೇಜಸ್ ಶಾ ಅವರು ಪುಣೆಯ ಡಾ. ‘ಅಭಂಗ್ ಪ್ರಭು ಮೆಡಿಕಲ್ ಅಕಾಡೆಮಿ’ ಎಂಬ ತರಬೇತಿ ಕೇಂದ್ರದಲ್ಲಿ (ಟ್ಯೂಷನ್ ಕ್ಲಾಸ್) ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದು, ಅವರನ್ನು ಬಂಧಿಸಲಾಗಿದೆ. ಅವರಿಗೆ ನೀಟ್ ಪರೀಕ್ಷೆಯ ಭೌತಶಾಸ್ತ್ರದ ಸೋರಿಕೆಯಾದ ಪ್ರಶ್ನೆಗಳು ಆರೋಪಿ ಮನೀಷಾ ಹವಾಲ್ದಾರ್ ಅವರಿಂದ ದೊರೆತಿದ್ದವು. ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು ೧೩ ಜನರನ್ನು ಬಂಧಿಸಲಾಗಿದೆ. ಸಿಬಿಐ ಇದುವರೆಗೆ ಇದಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ೪೯ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ಪ್ರಶ್ನೆಪತ್ರಿಕೆ ಸೋರಿಕೆಯ ಅತಿದೊಡ್ಡ ಕೇಂದ್ರ ಮಹಾರಾಷ್ಟ್ರವಾಗಿದೆ. ಇಲ್ಲಿಂದಲೇ ರಾಜಸ್ಥಾನ ಮತ್ತು ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ‘ಕ್ವೆಶ್ಚನ್ ಬ್ಯಾಂಕ್’ ತಲುಪಿತು. ಯಾವ ಪೋಷಕರ ಬ್ಯಾಂಕ್ ಖಾತೆಯಿಂದ ಪ್ರಾ. ಶಿವರಾಜ್ ಮೋಟೆಗಾಂವ್ಕರ್, ಪ್ರಾ. ಪಿ.ವಿ. ಕುಲಕರ್ಣಿ, ಹಾಗೆಯೇ ಮನೀಷಾ ವಾಘ್ಮಾರೆ ಅವರ ಖಾತೆಗೆ ಹಣ ವರ್ಗಾವಣೆಯಾಗಿತ್ತೋ, ಆ ಎಲ್ಲ ಪೋಷಕರ ಪಟ್ಟಿಯನ್ನು ತನಿಖಾ ಸಂಸ್ಥೆ ಈಗ ಸಿದ್ಧಪಡಿಸುತ್ತಿದೆ.
ಪ್ರಾ. ಮೋಟೆಗಾಂವ್ಕರ್ ಮತ್ತು ಪ್ರಾ. ಕುಲಕರ್ಣಿ ಅವರು ಪೋಷಕರಿಗೆ ಪ್ರಶ್ನೆಪತ್ರಿಕೆಯನ್ನು ೧೦ ರಿಂದ ೧೨ ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದರು !
ಪ್ರಾ. ಪಿ.ವಿ. ಕುಲಕರ್ಣಿ ಮತ್ತು ಪ್ರಾ. ಶಿವರಾಜ್ ಮೋಟೆಗಾಂವ್ಕರ್ ಅವರು ‘ನೀಟ್’ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ೧೦ ರಿಂದ ೧೨ ಲಕ್ಷ ರೂಪಾಯಿಗಳವರೆಗೆ ವಿದ್ಯಾರ್ಥಿಗಳ ಪೋಷಕರಿಗೆ ಮಾರಾಟ ಮಾಡಿದರು. ಪ್ರಶ್ನೆಪತ್ರಿಕೆ ಖರೀದಿಸಲು ಅನೇಕ ಪೋಷಕರು ಇವರಿಬ್ಬರಿಗೆ ಆನ್‌ಲೈನ್ ಮೂಲಕ ಹಣ ಕಳುಹಿಸಿರುವ ಮಾಹಿತಿಯಿದೆ. ಪ್ರಶ್ನೆಪತ್ರಿಕೆ ಪಡೆದ ಪೋಷಕರು ಮುಂದೆ ತಮ್ಮ ವಲಯದ ಇತರ ಜನರಿಗೆ ೨ ರಿಂದ ೧೦ ಲಕ್ಷ ರೂಪಾಯಿಗಳವರೆಗೆ ಅದನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನಗರದ ಕೆಲವು ಆಧುನಿಕ ವೈದ್ಯರು ತಮ್ಮ ಸ್ನೇಹಿತರ ಮಕ್ಕಳಿಗೆ ಈ ಪ್ರಶ್ನೆಪತ್ರಿಕೆಯನ್ನು ಒದಗಿಸಿದರು. ಪ್ರಾ. ಮೋಟೆಗಾಂವ್ಕರ್ ಅವರ ಮೊಬೈಲ್‌ಗೆ ಈ ಪ್ರಶ್ನೆಪತ್ರಿಕೆ ನೀಟ್ ಪರೀಕ್ಷೆಯ ಮುಂಚೆಯೇ ಬಂದ ನಂತರ, ಪ್ರಾ. ಕುಲಕರ್ಣಿ ಮತ್ತು ಮೋಟೆಗಾಂವ್ಕರ್ ಸೇರಿ ಈ ಪ್ರಶ್ನೆಪತ್ರಿಕೆಯನ್ನು ಮಾರಾಟ ಮಾಡಿದ್ದಾರೆ ಎಂದು ಸಿಬಿಐ ಶಂಕಿಸಿದೆ.
ಸಿಬಿಐ ಲಾತೂರಿನ ೫ ಆಧುನಿಕ ವೈದ್ಯರನ್ನು ವಿಚಾರಣೆ ನಡೆಸಿದೆ. ಇವರಲ್ಲಿ ನಾಲ್ವರ ಮಕ್ಕಳು ‘ನೀಟ್’ ಪರೀಕ್ಷೆ ಬರೆದಿದ್ದು, ಇದರಿಂದಾಗಿ ಪ್ರಶ್ನೆಪತ್ರಿಕೆ ಖರೀದಿಯಲ್ಲಿ ಅವರ ಕೈವಾಡವಿರಬಹುದು ಎಂದು ಸಿಬಿಐ ಶಂಕಿಸಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”