
ಲಂಡನ್ (ಬ್ರಿಟನ್) – ಬ್ರಿಟನ್‌ನಲ್ಲಿ ಹರಿಯಾಣಕ್ಕೆ ಸೇರಿದ ಕುಟುಂಬವೊಂದರ ತಾಯಿ ಮತ್ತು ಮಗ ಒಂದೇ ಸಮಯದಲ್ಲಿ ಬೇರೆ ಬೇರೆ ನಗರಗಳ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮಗ ತುಷಾರ್ ಎಲ್ಸ್ಟ್ರಿ ‘ಬೋರ್‌ಹ್ಯಾಮ್‌ವುಡ್ ಟೌನ್ ಕೌನ್ಸಿಲ್’ನ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಆಗಿದ್ದರೆ, ಅವರ ತಾಯಿ ಪರ್ವೀನ್ ರಾಣಿ ದಹಿಯಾ ಅವರು ‘ಹರ್ಟ್ಸ್‌ಮೆಯರ್ ಬರೋ ಕೌನ್ಸಿಲ್’ನ ಮೊದಲ ಭಾರತೀಯ ಮೂಲದ ಮಹಿಳಾ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
೧. ಈ ಕುಟುಂಬದ ಮೂಲ ಗ್ರಾಮವು ಹರಿಯಾಣ ರಾಜ್ಯದ ಸೋನಿಪತ್ ಜಿಲ್ಲೆಯ ಖರಖೋದಾ ಪ್ರದೇಶದಲ್ಲಿದೆ; ಆದರೆ ಅವರು ದೀರ್ಘಕಾಲ ರೋಹ್ಟಕ್‌ನಲ್ಲಿ ವಾಸವಾಗಿದ್ದರು ಮತ್ತು ೨೦೧೩ ರಲ್ಲಿ ಬ್ರಿಟನ್‌ಗೆ ವಲಸೆ ಹೋದರು.
೨. ತುಷಾರ್ ಅವರ ತಂದೆ ಸುನಿಲ್ ದಹಿಯಾ ಅವರು ಮಾತನಾಡಿ, ತಾವು ಪತ್ನಿ ಮತ್ತು ೨ ಮಕ್ಕಳೊಂದಿಗೆ ಬ್ರಿಟನ್‌ಗೆ ತಲುಪಿದಾಗ, ತಮ್ಮ ಕುಟುಂಬವು ಇಷ್ಟೊಂದು ದೊಡ್ಡ ಮಟ್ಟದ ಗುರುತನ್ನು ಗಳಿಸುತ್ತದೆ ಎಂದು ಎಂದಿಗೂ ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ. ನಾವು ಬ್ರಿಟನ್‌ಗೆ ಬಂದಾಗ ತುಷಾರ್‌ಗೆ ಕೇವಲ ೧೦ ವರ್ಷ ವಯಸ್ಸಾಗಿತ್ತು. ಇಂದು ಭಾರತೀಯ ಮೂಲದ ತಾಯಿ ಮತ್ತು ಮಗ ಇಬ್ಬರೂ ಒಂದೇ ಸಮಯದಲ್ಲಿ ಮೇಯರ್ ಆಗಿರುವುದು ನಮಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ, ಎಂದು ಹೇಳಿದ್ದಾರೆ.
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಸ್ವದೇಶವೇ ಸರ್ವಸ್ವ !
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine