ಟಿಟವಾಳಾ (ಠಾಣೆ ಜಿಲ್ಲೆ) ಇಲ್ಲಿ ಅಕ್ರಮ ಚಾಳ(ಸಾಲು ಮನೆ)ಕೆಡವುವ ಪ್ರಕರಣ
ಮಹಿಳಾ ಪೊಲೀಸರಿಗೆ ಉಗುರುಗಳಿಂದ ಪರಚಿದರು
ಇತರ ಪೊಲೀಸರಿಗೆ ಬೈಗುಳ

ಟಿಟವಾಳಾ (ಠಾಣೆ ಜಿಲ್ಲೆ) – ಇಲ್ಲಿನ ಬಲ್ಯಾಣಿ ಖಜುರಿನಗರ ಭಾಗದಲ್ಲಿ ಅಕ್ರಮ ಚಾಳ(ಸಾಲು ಮನೆ) ಕೆಡವುವಾಗ ಜೆಸಿಬಿ ಯಂತ್ರದ ಮುಂದೆ ಅಡಚಣೆ ತರುತ್ತಿದ್ದ ಮಹಿಳೆಯರನ್ನು ತಿಳುವಳಿಕೆ ಹೇಳಿ ಬದಿಗೆ ಸರಿಸುತ್ತಿದ್ದ ಸಹಾಯಕ ಪೊಲೀಸ್ ನಿರೀಕ್ಷಕ ಸರಲಾ ಕಾಳೆಯವರ ಕೂದಲು ಹಿಡಿದು ಕೆಳಗೆ ಕೆಡವಿದರು. ಅವರಿಗೆ ಮುಷ್ಟಿಯಿಂದ ಗುದ್ದಿ ಹೊಡೆಯುತ್ತಾ ಅವರ ಕೈ-ಕಾಲುಗಳಿಗೆ ಕಚ್ಚಿದರು, ಹಾಗೆಯೇ ಉಗುರುಗಳಿಂದ ಪರಚಿದರು. ಇತರ ಮಹಿಳಾ ಪೊಲೀಸರಿಗೆ ಮತ್ತು ಒತ್ತುವರಿ ನಿಯಂತ್ರಣ ದಳಕ್ಕೆ ಈ ಮಹಿಳೆಯರು ಬೈದರು. ಈ ಪ್ರಕರಣದಲ್ಲಿ ಮಹಾನಗರಪಾಲಿಕೆ ಅಧಿಕಾರಿಯು ದೂರು ಸಲ್ಲಿಸಿದ ನಂತರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡರು. ರೂಬೀನಾ ಖಾನ್ (ವಯಸ್ಸು ೪೨ ವರ್ಷ), ಅವರ ೨ ಹೆಣ್ಣುಮಕ್ಕಳಾದ ಸಾಫಿಯಾ ಖಾನ್ (ವಯಸ್ಸು ೨೩ ವರ್ಷ), ಶಾಹಿನಾ ಖಾನ್ (ವಯಸ್ಸು ೨೧ ವರ್ಷ), ಹಾಗೂ ಸರಫುನ ಶೇಖ್ ಮತ್ತು ಶಾಹಿನ ಖಾನ್ ಎಂದು ಮೊಕದ್ದಮೆ ದಾಖಲಾದ ಮಹಿಳೆಯರ ಹೆಸರುಗಳಾಗಿವೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!