ಮಹಾರಾಷ್ಟ್ರ ಗೃಹ ಇಲಾಖೆಯಿಂದ ಪೊಲೀಸರಿಗೆ ಆದೇಶ
ಅನಧಿಕೃತ ಕಸಾಯಿಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ!

ಮುಂಬಯಿ – ಪದೇ-ಪದೇ ಗೋವು ಕಳ್ಳಸಾಗಾಣಿಕೆ ಮಾಡುವ ವ್ಯಕ್ತಿಗಳು, ಸಂಘಟನೆಗಳು ಮತ್ತು ಗುಂಪುಗಳ ವಿರುದ್ಧ ‘ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ’ (ಮಕೋಕಾ) ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಗೃಹ ಇಲಾಖೆಯು ಪೊಲೀಸ್ ಮತ್ತು ಕಂದಾಯ ಆಡಳಿತಕ್ಕೆ ಆದೇಶ ನೀಡಿದೆ. ‘ಬಕ್ರೀದ್’ ಹಬ್ಬದ ಹಿನ್ನೆಲೆಯಲ್ಲಿ ಮುಸಲ್ಮಾನ ಶಾಸಕರು ಮುಖ್ಯ ಕಾರ್ಯದರ್ಶಿಗಳ ಸಭೆಯಲ್ಲಿ ‘ಗೋವು ಕಳ್ಳಸಾಗಾಣಿಕೆ ಮಾಡುವವರ ಮೇಲೆ ಮಕೋಕಾ ಹೇರಬಾರದು’ ಎಂದು ಆಗ್ರಹಿಸಿದ್ದರು, ಆದಾಗ್ಯೂ ಸರಕಾರವು ಈ ಮಹತ್ವದ ಆದೇಶವನ್ನು ಹೊರಡಿಸಿದೆ. ಗೃಹ ಇಲಾಖೆಯು ಈ ಕುರಿತು ಸುತ್ತೋಲೆಯನ್ನು ಹೊರಡಿಸಿದೆ.
ಸುತ್ತೋಲೆಯಲ್ಲಿ ಹೀಗೆ ಹೇಳಲಾಗಿದೆ,
೧. ಮಹಾನಗರ ಪಾಲಿಕೆಗಳು, ನಗರ ಪರಿಷತ್ತುಗಳು, ಜಿಲ್ಲಾ ಪಂಚಾಯತಿಗಳು, ತಾಲೂಕು ಪಂಚಾಯತಿಗಳು ಹಾಗೂ ಗ್ರಾಮ ಪಂಚಾಯತಿಗಳು ಅನಧಿಕೃತ ಕಸಾಯಿಖಾನೆಗಳನ್ನು ಪತ್ತೆ ಹಚ್ಚಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
೨. ಸಾರಿಗೆ ಮತ್ತು ಸಂಚಾರ ಇಲಾಖೆಯು ಅನಧಿಕೃತ ಪ್ರಾಣಿಗಳ ಸಾಗಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ‘ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ ಕಾಯ್ದೆ ೧೯೭೬’ ರ ಅಡಿಯಲ್ಲಿ ಪ್ರಾಣಿಗಳ ವಿರುದ್ಧ ನಡೆಯುವ ಪ್ರತ್ಯಕ್ಷ ಕ್ರೂರತೆಯ ವಿರುದ್ಧ ಕ್ರಮ ಕೈಗೊಳ್ಳಬೇಕು.
೩. ಪೊಲೀಸ್ ಕಮಿಷನರ್, ಪೊಲೀಸ್ ಅಧೀಕ್ಷಕರು , ಪಶುಸಂಗೋಪನಾ ಆಯುಕ್ತರು ಮತ್ತು ಸಾರಿಗೆ ಆಯುಕ್ತರು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಹಾಗೂ ಅವರ ಸಂಪರ್ಕ ಸಂಖ್ಯೆ ಲಭ್ಯವಾಗುವಂತೆ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
೪. ಸಂಬಂಧಪಟ್ಟ ಇಲಾಖೆಗಳು ಗಸ್ತು ತಂಡಗಳನ್ನು ರಚಿಸಿ (ಫ್ಲೈಯಿಂಗ್ ಸ್ಕ್ವಾಡ್?) ಸ್ಥಾಪಿಸಿ ಅಕ್ರಮ ಕಸಾಯಿಖಾನೆಗಳು ಮತ್ತು ಅಕ್ರಮ ಪ್ರಾಣಿ ಸಾಗಾಟದ ಮೇಲೆ ನಿಷೇಧ ಹೇರಬೇಕು.
೫. ಗೋವು ಸಂರಕ್ಷಣೆಗೆ ಸಂಬಂಧಿಸಿದಂತೆ ಬರುವ ದೂರುಗಳನ್ನು ‘೧೧೨’ ಸಂಖ್ಯೆಗೆ ಸಂಪರ್ಕಿಸಿ ಪೊಲೀಸರು ಕ್ರಮ ಕೈಗೊಳ್ಳಬೇಕು.
‘ವ್ಯಾಪಾರಿಗಳ ವಾಹನಗಳನ್ನು ಪೊಲೀಸರಿಲ್ಲದೆ ತಡೆಯುವ ಕಾರ್ಯಕರ್ತರು ಮತ್ತು ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೆಲವು ಶಾಸಕರು ಸಭೆಯಲ್ಲಿ ಒತ್ತಾಯಿಸಿದ್ದರು; ಆದರೆ ಈ ಬಗ್ಗೆ ಗೃಹ ಇಲಾಖೆ ಹೊರಡಿಸಿರುವ ಪತ್ರದಲ್ಲಿ ಯಾವುದೇ ಉಲ್ಲೇಖವಿಲ್ಲ.
ಕೇರಳ: ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಹಲ್ಲೆ ನಡೆಸಿದ ಕ್ರೈಸ್ತ ಪಾದ್ರಿ ವಿರುದ್ಧ ರೊಚ್ಚಿಗೆದ್ದು ರಸ್ತೆಗಿಳಿದ ನಾಗರಿಕರು!
ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದಿಂದ ‘ಲವ್ ಜಿಹಾದ್’ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು
‘ಲವ್ ಜಿಹಾದ್’ನ ಅಂತರರಾಷ್ಟ್ರೀಯ ಪಿತೂರಿ ಪ್ರಕರಣ: 14 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ಶ್ರೀರಾಮಮಂದಿರವನ್ನು ಬಾಂಬ್ನಿಂದ ಸ್ಫೋಟಿಸಲು ಸಂಚು ರೂಪಿಸಿದ್ದ ಸುಹೇಲ್ ದಾವಣಗೆರೆಯಿಂದ ಬಂಧನ
ದೆಹಲಿಯ ಮುಸಲ್ಮಾನ ಬಹುಸಂಖ್ಯಾತ ಸೀಲಂಪುರದಲ್ಲಿ ಮುಸಲ್ಮಾನರಿಂದ 16 ವರ್ಷದ ಹಿಂದೂ ಹುಡುಗನ ಬರ್ಬರ ಹತ್ಯೆ
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!