ದಾವೋಸ್‌ನ ಜಾಗತಿಕ ಆರ್ಥಿಕ ಸಮ್ಮೇಳನದಲ್ಲಿ ಒಪ್ಪಂದ
(‘ಡೇಟಾ ಸೆಂಟರ್ ಹಬ್’ ಎಂದರೆ ಗಣಕೀಕೃತ (ಕಂಪ್ಯೂಟರ್) ಸೇವೆಗಳ ಮುಖ್ಯ ಕೇಂದ್ರ)

ಮುಂಬಯಿ – ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ‘ಜಾಗತಿಕ ಆರ್ಥಿಕ ಸಮ್ಮೇಳನ’ದಲ್ಲಿ ನಡೆದ ಒಪ್ಪಂದದ ಅನ್ವಯ ರಾಜ್ಯದಲ್ಲಿನ ಕೈಗಾರಿಕಾ, ಮೂಲಸೌಕರ್ಯ, ಶೈಕ್ಷಣಿಕ, ಡೇಟಾ ಸೆಂಟರ್, ಸ್ಮಾರ್ಟ್ ಸಿಟಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳಿಗೆ ವೇಗ ನೀಡಲು ಭೂಮಿ ಹಂಚಿಕೆ, ಅನುಮತಿ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ರಾಜ್ಯದ ಪರಸ್ಪರ ತಿಳುವಳಿಕಾ ಒಪ್ಪಂದಗಳ ಅನ್ವಯ ಯೋಜನೆಗಳ ಅನುಷ್ಠಾನದ ಮೇಲೆ ನಿಗಾ ಇಡಲು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ಮಹಾ ಮಂಡಳಿ, ಕೈಗಾರಿಕಾ ನಿರ್ದೇಶನಾಲಯ ಮತ್ತು ಸಚಿವಾಲಯದ ೧೦ ಪ್ರಮುಖ ಅಧಿಕಾರಿಗಳಿಗೆ ‘ತಲಾ ೧೦ ಯೋಜನೆಗಳನ್ನು ಸಮಯಕ್ಕೆ ಪೂರ್ಣಗೊಳಿಸುವ’, ಜವಾಬ್ದಾರಿ ನೀಡಲಾಗುವುದು. ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರ ರಾಜ್ಯ ‘ಡೇಟಾ ಸೆಂಟರ್ ಹಬ್’ ಆಗಲಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಹೇಳಿದರು. ಸಹ್ಯಾದ್ರಿ ಅತಿಥಿಗೃಹದಲ್ಲಿ ಮುಖ್ಯಮಂತ್ರಿಗಳು ದಾವೋಸ್‌ನಲ್ಲಿ ನಡೆದ ‘ಜಾಗತಿಕ ಆರ್ಥಿಕ ಸಮ್ಮೇಳನ’ದ ತಿಳುವಳಿಕಾ ಒಪ್ಪಂದಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಮುಖ್ಯಮಂತ್ರಿಗಳು ಮಾತನಾಡಿ, ‘‘ನವಿ ಮುಂಬಯಿ ರಾಜ್ಯದ ಪ್ರಮುಖ ಡೇಟಾ ಸೆಂಟರ್ ಹಬ್ ಆಗಿ ಹೊರಹೊಮ್ಮುತ್ತಿದೆ. ಮಹಾಪೆ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ದೊಡ್ಡ ಯೋಜನೆಗಳು ಪ್ರಾರಂಭವಾಗುತ್ತಿವೆ. ಖಾಲಾಪುರವನ್ನು ೩ನೇ ಪ್ರಮುಖ ಡೇಟಾ ಸೆಂಟರ್ ‘ಕ್ಲಸ್ಟರ್’ ಆಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ. ಪನ್ವೇಲ್ ಪ್ರದೇಶದಲ್ಲಿ ಮೂಲಸೌಕರ್ಯಗಳನ್ನು ಬಲಪಡಿಸಲು ಒತ್ತು ನೀಡಲಾಗುತ್ತಿದೆ,’’ ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!