
ಮುಂಬಯಿ – ಪಿತಾಂಬರಿ ಉದ್ಯಮ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರವೀಂದ್ರ ಪ್ರಭುದೇಸಾಯಿ ಅವರು ಬರೆದಿರುವ ‘ಆಧುನಿಕ ಶೇತಿಚೆ ಮಾಡೆಲ್’ (ಆಧುನಿಕ ಬೇಸಾಯದ ಮಾದರಿ) ಮತ್ತು ‘ಆಪ್ಲಂ ಕೊಂಕಣ್-ಅಣುಸ್ಕುರಾ ತೆ ಸಾಖಳೋಲಿ ಸ್ವಪ್ನಪೂರ್ತಿಚಾ ಅದ್ಭುತ ಪ್ರವಾಸ್’ (ನಮ್ಮ ಕೊಂಕಣ-ಅಣುಸ್ಕುರಾದಿಂದ ಸಾಖಳೋಲಿವರೆಗಿನ ಕನಸು ನನಸಾದ ಅದ್ಭುತ ಪ್ರಯಾಣ) ಎಂಬ ಪುಸ್ತಕಗಳನ್ನು ಮಹಾರಾಷ್ಟ್ರದ ರಾಜ್ಯಪಾಲರಾದ ಜಿಷ್ಣು ದೇವ್ ವರ್ಮಾ ಅವರು ಬಿಡುಗಡೆ ಮಾಡಿದರು. ಮೇ 20 ರಂದು ರಾಜಭವನದಲ್ಲಿ ಈ ಪುಸ್ತಕ ಬಿಡುಗಡೆ ಸಮಾರಂಭ ಜರುಗಿತು. ಪ್ರಗತಿಪರ ಕೃಷಿಯ ನವೀನ ಪ್ರಯೋಗಗಳನ್ನು ಒಳಗೊಂಡಿರುವ ಈ ಪುಸ್ತಕಗಳು, ಯುವಕರಿಗೆ ಆಧುನಿಕ ಬೇಸಾಯ ಮಾಡಲು ಪ್ರೋತ್ಸಾಹ ನೀಡುವಂತಿವೆ. ಈ ಸಮಾರಂಭದಲ್ಲಿ ಪಿತಾಂಬರಿ ಉದ್ಯಮ ಸಮೂಹದ ಪದಾಧಿಕಾರಿಗಳಾದ ಶ್ರೀ ಮಧುಕರ್ ಪೂಜಾರಿ, ಸೌ. ಪ್ರಿಯಾ ಪ್ರಭುದೇಸಾಯಿ, ಶೈಲಜಾ ಶೆಟ್ಟಿ ಮತ್ತು ಪ್ರಿಯಾಂಕಾ ಪಾವಸ್ಕರ್, ಹಾಗೂ ಪದ್ಮಶ್ರೀ ಪುರಸ್ಕೃತ ರಮೇಶ್ ಪತಂಗೆ, ‘ವಿವೇಕ ಪ್ರಕಾಶನ’ದ ಆದಿನಾಥ್ ಪಾಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಡಾ. ಪ್ರಭುದೇಸಾಯಿ ಅವರು ಕೃಷಿ ಬೇಸಾಯದಲ್ಲಿ ತಾವು ಕೈಗೊಂಡ ನವೀನ ಪ್ರಯೋಗಗಳ ಸ್ವಂತ ಅನುಭವಗಳನ್ನು ಈ ಪುಸ್ತಕಗಳಲ್ಲಿ ಶಬ್ದ ರೂಪದಲ್ಲಿ ದಾಖಲಿಸಿದ್ದಾರೆ. ಬಿದಿರು, ಸಂಪಿಗೆ (ಸೋನಚಾಫಾ), ಆಯುರ್ವೇದ ಸಸ್ಯಗಳು, ವಿವಿಧ ಹಣ್ಣಿನ ಗಿಡಗಳು, ತರಕಾರಿ ಮತ್ತು ಕಬ್ಬು ಬೆಳೆಯುವಲ್ಲಿ ನಡೆಸಿದ ಪ್ರಯೋಗಗಳು ಈ ಪುಸ್ತಕಗಳಲ್ಲಿ ಸೇರಿವೆ. ವಿಶೇಷವೆಂದರೆ, ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡುವಾಗ ಎದುರಾದ ವಿಫಲತೆಗಳ ಬಗ್ಗೆಯೂ ಅವರು ಈ ಪುಸ್ತಕಗಳಲ್ಲಿ ಬರೆದಿದ್ದಾರೆ. ಆದ್ದರಿಂದ ‘ಬೇಸಾಯ ಮಾಡುವಾಗ ಯಾವ ವಿಷಯಗಳನ್ನು ತಪ್ಪಿಸಬೇಕು’ ಎಂಬುದು ಕೂಡ ಈ ಪುಸ್ತಕಗಳ ಮೂಲಕ ತಿಳಿಯಲಿದೆ. ಡಾ. ಪ್ರಭುದೇಸಾಯಿ ಅವರು ತಮ್ಮದೇ ಆದ ಸ್ವಂತ ಅನುಭವಗಳನ್ನು ಬರೆದಿರುವುದರಿಂದ ಪುಸ್ತಕದಲ್ಲಿನ ಮಾಹಿತಿ ಅತ್ಯಂತ ವಸ್ತುನಿಷ್ಠವಾಗಿದೆ.
Books on agriculture authored by Dr. Ravindra Prabhudesai, Managing Director of the ‘Pitambari’ Group, were officially released by Maharashtra Governor @Jishnu_Devvarma at Lok Bhavan, Mumbai! 🇮🇳
“Guidebooks for the new generation!” – Governor
“These books will inspire farmers!”… pic.twitter.com/Z3t0FREgQJ
— Sanatan Prabhat (@SanatanPrabhat) May 23, 2026
ಹೊಸ ಪೀಳಿಗೆಗೆ ಮಾರ್ಗದರ್ಶಕ ಪುಸ್ತಕಗಳು! – ರಾಜ್ಯಪಾಲರು
ನೂತನ ಪೀಳಿಗೆಯ ಆಧುನಿಕ ರೈತರಿಗೆ ಮತ್ತು ಕೃಷಿ ಕ್ಷೇತ್ರಕ್ಕೆ ಬರಲು ಬಯಸುವ ಯುವಕರಿಗೆ ಡಾ. ರವೀಂದ್ರ ಪ್ರಭುದೇಸಾಯಿ ಅವರು ಬರೆದಿರುವ ಎರಡೂ ಪುಸ್ತಕಗಳು ಅತ್ಯಂತ ಪ್ರೇರಣಾದಾಯಿ ಮತ್ತು ಮಾರ್ಗದರ್ಶಕವಾಗಲಿವೆ!
Padmashri Ramesh Patange, Patron of Saptahik Vivek, Padmashri Dada Idate, Dr. Ravindra Prabhudesai, along with members of the Samarasata Manch, Vivek Parivar, the Pitambari family were present. pic.twitter.com/OKtJbgt14T
— Governor of Maharashtra (@maha_governor) May 20, 2026
ಈ ಪುಸ್ತಕಗಳು ರೈತರಿಗೆ ಪ್ರೇರಣೆ ನೀಡಲಿವೆ! – ಡಾ. ರವೀಂದ್ರ ಪ್ರಭುದೇಸಾಯಿ
ರಾಜ್ಯಪಾಲರ ಹಸ್ತದಿಂದ ನನ್ನ ಪುಸ್ತಕಗಳು ಬಿಡುಗಡೆಯಾಗಿರುವುದು ನನಗೆ ಅತ್ಯಂತ ಗೌರವದ ಕ್ಷಣವಾಗಿತ್ತು. ಕೊಂಕಣ ಕರಾವಳಿ ಪ್ರದೇಶದ ಕೃಷಿ ವಿಕಾಸ ಮತ್ತು ಆಧುನಿಕ ಬೇಸಾಯ ಪದ್ಧತಿಗಳ ಕುರಿತು ಹಲವು ವರ್ಷಗಳ ಕಾಲ ಮಾಡಿದ ಸಮರ್ಪಿತ ಕಾರ್ಯ, ಅನುಭವ ಹಾಗೂ ದೂರದೃಷ್ಟಿಯ ಪ್ರತಿಫಲವೇ ಈ ಪುಸ್ತಕಗಳಾಗಿವೆ. ಪುಸ್ತಕಗಳ ಮಾಧ್ಯಮದ ಮೂಲಕ ರೈತ ಬಾಂಧವರಿಗೆ ಪ್ರೇರಣೆ ನೀಡುವ ಮತ್ತು ಅವರನ್ನು ಸಶಕ್ತಗೊಳಿಸುವ ಪ್ರಾಯೋಗಿಕ ಅನುಭವಗಳನ್ನು, ಹಾಗೆಯೇ ಪ್ರಗತಿಪರ ಕೃಷಿಯ ಮಾದರಿಯನ್ನು ಪ್ರಸ್ತುತಪಡಿಸಲು ನಾನು ಪ್ರಯತ್ನಿಸಿದ್ದೇನೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!