ಹಿಂದೂ ಧಾರ್ಮ ಸ್ವೀಕರಿಸಿದ ಚರ್ಚ್ ಪಾದ್ರಿ!
ಜನರ ಕಾಲು ತೊಳೆದು ಹಿಂದೂ ಧರ್ಮಕ್ಕೆ ಸ್ವಾಗತ ಮಾಡಿದ ಭಾಜಪ ಶಾಸಕಿ ಭಾವನಾ ಬೋಹರಾ
(ಘರ್ ವಾಪಸಿ ಎಂದರೆ ಹಿಂದೂ ಧರ್ಮಕ್ಕೆ ಮರುಸೇರ್ಪಡೆ)

ರಾಯಪುರ (ಛತ್ತೀಸಗಢ) – ರಾಜ್ಯದ ಕವರ್ಧಾ ಜಿಲ್ಲೆಯ ಪಂಡರಿಯಾ ಭಾಗದಲ್ಲಿ ಸುಮಾರು 200 ಬಡ ಆದಿವಾಸಿಗಳು ಘರ್ ವಾಪಸಿ ಮಾಡಿದ್ದಾರೆ. ವಿಶೇಷವೆಂದರೆ, ಹಿಂದೂ ಧರ್ಮ ಸ್ವೀಕರಿಸಿದವರಲ್ಲಿ ಚರ್ಚ್‌ನ ಓರ್ವ ಪಾದ್ರಿ ಕೂಡ ಸೇರಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಂಡರಿಯಾದ ಭಾಜಪ ಶಾಸಕಿ ಭಾವನಾ ಬೋಹರಾ ಉಪಸ್ಥಿತರಿದ್ದರು. ಅವರು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆದ ಈ ಸಮಾರಂಭದಲ್ಲಿ ಆದಿವಾಸಿಗಳನ್ನು ಸನಾತನ ಧರ್ಮಕ್ಕೆ ಸ್ವಾಗತಿಸಿದರು. ಜನರ ಕಾಲುಗಳನ್ನು ತೊಳೆದು ಅವರಿಗೆ ಗೌರವ ಸಲ್ಲಿಸಿದರು.
ಶಾಸಕಿ ಬೋಹರಾ ಅವರು ಈ ಸಂದರ್ಭದಲ್ಲಿ ಮಾತನಾಡಿ, ಪಂಡರಿಯಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಜನರ ಸಹಾಯದಿಂದ ದೀರ್ಘಕಾಲದಿಂದ ಘರ್ ವಾಪಸಿ ಅಭಿಯಾನವನ್ನು ನಡೆಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಈ ಅಭಿಯಾನವನ್ನು ಆರಂಭಿಸಲಾಯಿತು. ಇದುವರೆಗೆ ಈ ಭಾಗದ ವಿವಿಧ ಗ್ರಾಮಗಳ ಸುಮಾರು 750 ಜನರು ಹಿಂದೂ ಧರ್ಮಕ್ಕೆ ಮರುಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು.
ವಿವಿಧ ಗ್ರಾಮಗಳಿಂದ ಘರ್ ವಾಪಸಿ ಆದವರ ಸಂಖ್ಯೆ!
1. ನೇವುರ್ ಅರಣ್ಯ ಪ್ರದೇಶದ ಹತ್ತಿರದ ಗ್ರಾಮಗಳಿಂದ 115 ಜನರು
2. ಕುಯಿ-ಕುಕದುರ್ ಭಾಗದಿಂದ 70 ಜನರು
3. ದಮಗಡ ಗ್ರಾಮದಿಂದ 50 ಜನರು
4. ಕುಲ್ಹಿಡೋಂಗರಿ ಗ್ರಾಮದಿಂದ 140 ಜನರು.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!