ಅಪರಾಧಿಕ ಹಿನ್ನೆಲೆಯುಳ್ಳ ಲವ್ ಜಿಹಾದಿ ಫಹೀಮನು ಹಿಂದೂ ಹುಡುಗಿಗೆ ಬೆದರಿಕೆ ನೀಡಿ ವಿವಾಹವಾದನು
ಫಹೀಮನ ಕುಟುಂಬವು ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿರುವುದು ಬೆಳಕಿಗೆ !
(ಜನ್ನತ್ ಅಂದರೆ ಸ್ವರ್ಗ, ಹಾಗೂ ನಿಕಾಹ ಅಂದರೆ ಇಸ್ಲಾಮಿ ಪದ್ಧತಿಗನುಸಾರ ವಿವಾಹ)

ನವಿ ದೆಹಲಿ – ದೆಹಲಿಯ ಬಾಟಲಾ ಹೌಸ್ ಪರಿಸರದಲ್ಲಿ ಓರ್ವ ೨೩ ವರ್ಷದ ಹಿಂದೂ ಯುವತಿಯ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಮತಾಂತರ ಮಾಡುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತೆಯು ಪೊಲೀಸರಿಗೆ, ಫಹೀಮನು, ‘ನನ್ನ ಅಪರಾಧಿಕ ಹಿನ್ನೆಲೆಯಿಂದಾಗಿ ನಾನು ಹಜ್ ಗಾಗಿ ಭಾರತದ ಹೊರಗೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ನನಗೆ ಜನ್ನತ್ ನಲ್ಲಿ ಹೋಗಲು ಓರ್ವ ಹಿಂದೂ ಮಹಿಳೆಯೊಂದಿಗೆ ನಿಕಾಹ ಮಾಡಬೇಕಾಗುವುದು ಮತ್ತು ಅವಳ ಧರ್ಮಪರಿವರ್ತನೆ ಮಾಡಿ ಅವಳು ಇಸ್ಲಾಮ್ ಸ್ವೀಕರಿಸಬೇಕಾಗುವುದು’ ಎಂದು ಹೇಳುತ್ತಿದ್ದನು, ಎಂದು ತಿಳಿಸಿದಳು. ಸಂತ್ರಸ್ತೆಯ ದೂರಿನ ಆಧಾರದಲ್ಲಿ ದೆಹಲಿ ಪೊಲೀಸರು ಮೊಕದ್ದಮೆ ದಾಖಲಿಸಿ ೪ ಆರೋಪಿಗಳನ್ನು ಬಂಧಿಸಿದರು.
೧. ಸಂತ್ರಸ್ತೆಯು ದೂರಿನಲ್ಲಿ, ೨೦೨೧ ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಭೇಟಿ ‘ಸಾಹಿಲ್’ ಎಂಬ ಯುವಕನೊಂದಿಗೆ ಆಯಿತು, ಅವನು ತನ್ನನ್ನು ಒಂದು ಶ್ರೀಮಂತ ಹಿಂದೂ ಕುಟುಂಬದವನೆಂದು ಹೇಳಿದನು ಮತ್ತು ಮದುವೆಯ ಆಮಿಷವೊಡ್ಡಿ ೨೦೨೨ ರಲ್ಲಿ ಅವಳನ್ನು ದೆಹಲಿಯ ಬಾಟಲಾ ಹೌಸ್ ಗೆ ಕರೆಸಿದನು. ಅಲ್ಲಿ ಫಹೀಮನು ತನ್ನ ಓರ್ವ ಮಿತ್ರನೊಂದಿಗೆ ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದನು, ಅದರ ವಿಡಿಯೋ ಮಾಡಿದನು ಮತ್ತು ನಂತರ ಅದನ್ನು ಬಳಸಿ ಅವಳಿಗೆ ಬೆದರಿಸತೊಡಗಿದನು. ಅಲ್ಲಿ ಯುವಕನ ನಿಜವಾದ ಹೆಸರು ಸಾಹಿಲ್ ಆಗಿರದೆ ಫಹೀಮ್ ಆಗಿದೆ, ಎಂದು ಅವಳಿಗೆ ತಿಳಿಯಿತು. ನಂತರ ಅವರು ಅವಳನ್ನು ಮೀರತ್ ಗೆ ಕರೆದೊಯ್ದರು.
೨. ಅವರು ಅವಳ ನಿಕಾಹ ಮಾಡಿಸಿದರು ಮತ್ತು ಅವಳ ಹೆಸರು ಆಯಿಶಾ ಎಂದು ಇಟ್ಟರು. ಫಹೀಮನ ಕುಟುಂಬವು ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿದೆ, ಎಂಬುದು ನಿಧಾನವಾಗಿ ಬೆಳಕಿಗೆ ಬಂದಿತು.
೩. ಈ ಕಾಲಾವಧಿಯಲ್ಲಿ ಅವರು ಅವಳ ಮೇಲೆ ಅನೇಕ ಅತ್ಯಾಚಾರಗಳನ್ನು ಮಾಡಿದರು. ಅವರು ಅವಳ ಮೇಲೆ ಮಾಂಸ ಎಸೆದರು, ಹಾಗೆಯೇ ತಾರಸಿಯ ಮೇಲೆ ತಲೆಕೆಳಗಾಗಿ ಕಟ್ಟಿ ಕೆಳಗೆ ಬಿಸಾಡುವೆವು, ಎಂಬ ರೀತಿಯ ಬೆದರಿಕೆಗಳನ್ನು ನೀಡಿ ಒತ್ತಡ ಹೇರುತ್ತಿದ್ದರು.
೪. ಕಿರುಕುಳಕ್ಕೆ ಬೇಸತ್ತು ಅವಳು ಆತ್ಮಹತ್ಯೆ ಮಾಡಲು ಹೊರಟಿದ್ದಳು. ಆಗ ಯಾರೋ ಅವಳನ್ನು ತಡೆದರು ಮತ್ತು ಒಂದು ಸಂಸ್ಥೆಗೆ ಕರೆದೊಯ್ದರು. ನಂತರ ಪೊಲೀಸರು ಫಹೀಮನ ವಿರುದ್ಧ ಮೊಕದ್ದಮೆ ದಾಖಲಿಸಿ ಅವನನ್ನು ಬಂಧಿಸಿದರು.
೫. ಫಹೀಮನು ತನಗೆ ಕಾರಾಗೃಹದಿಂದಲೂ ಸಂಪರ್ಕ ಮಾಡಿದ್ದಾನೆ ಎಂದು ಸಂತ್ರಸ್ತೆಯು ಆರೋಪಿಸಿದ್ದಾಳೆ. ಹಾಗೆಯೇ ತನಗೆ ದುಬೈನ ಕ್ರಮಾಂಕದಿಂದ ಜೀವಬೆದರಿಕೆಗಳು ಸಿಗುತ್ತಿವೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !