ತಂದೆ ಸಹಿತ ೩ ಆರೋಪಿಗಳ ಬಂಧನ !
೨ ಹಿರಿಯ ಹೆಣ್ಣುಮಕ್ಕಳು ಹಿಂದೂ ಯುವಕರೊಂದಿಗೆ ವಿವಾಹವಾಗಿದ್ದಾರೆ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಹಿಂದೂ ಯುವಕನನ್ನು ಪ್ರೀತಿಸಿರುವ ಸಂಶಯದ ಮೇರೆಗೆ ಬಿಗ್ಗನ ಅನ್ಸಾರಿ ಎಂಬ ಮುಸಲ್ಮಾನ ವ್ಯಕ್ತಿಯು ತನ್ನ ಅಪ್ರಾಪ್ತ ಮಗಳ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಲಕ್ಷ್ಮಣಪುರಿಯ ಗೋಮತಿ ನಗರ ರೈಲುನಿಲ್ದಾಣದಲ್ಲಿ ರೈಲುಗಾಡಿಯಲ್ಲಿನ ಒಂದು ಪೆಟ್ಟಿಗೆಯಲ್ಲಿ ಸಿಕ್ಕಿದ ಮುಂಡದ ಆಧಾರದಲ್ಲಿ ಪೊಲೀಸರು ಅಪರಾಧವನ್ನು ಭೇದಿಸಿದರು. ಈ ಮೃತದೇಹವು ೧೫ ವರ್ಷದ ಶಬ್ಬಾ ಎಂಬ ಮುಸಲ್ಮಾನ ಹುಡುಗಿಯದ್ದಾಗಿತ್ತು. ಅವಳ ತಂದೆ ಬಿಗ್ಗನ ಅನ್ಸಾರಿಯು ತನ್ನ ಸಹೋದರಿ ಮತ್ತು ಭಾವನ ಸಹಾಯದಿಂದ ಶಬ್ಬಾಳ ಹತ್ಯೆಯನ್ನು ಮಾಡಿದ್ದನು. ಪೊಲೀಸರು ಮೂವರೂ ಆರೋಪಿಗಳನ್ನು ಕುಶಿನಗರದಿಂದ ಬಂಧಿಸಿದ್ದಾರೆ.
೧. ಈ ಕುರಿತು ಸಿಕ್ಕಿದ ಮಾಹಿತಿಗನುಸಾರ ತಂದೆ ಬಿಗ್ಗನ ಅನ್ಸಾರಿಗೆ, ತನ್ನ ಕಿರಿಯ ಮಗಳಿಗೆ ಓರ್ವ ಹಿಂದೂ ಯುವಕನೊಂದಿಗೆ ಪ್ರೇಮಸಂಬಂಧವಿದೆ, ಎಂದು ಸಂಶಯವಿತ್ತು. ಅವನ ೨ ಹಿರಿಯ ಹೆಣ್ಣುಮಕ್ಕಳು ಮೊದಲೇ ಹಿಂದೂ ಯುವಕರೊಂದಿಗೆ ವಿವಾಹವಾಗಿ ಹೋಗಿದ್ದರು. ತನ್ನ ಮೂರನೇ ಮಗಳೂ ಹಾಗೆ ಮಾಡುವಳು, ಎಂಬುದು ಅವನಿಗೆ ಒಪ್ಪಿಗೆ ಇರಲಿಲ್ಲ.
೨. ಬಿಗ್ಗನನು ಸಹೋದರಿ ನೂರಜಹಾಂ ಮತ್ತು ಭಾವ ಮೊಜಿಬುಲ್ಲಾನೊಂದಿಗೆ ಸೇರಿ ಮಗಳ ಹತ್ಯೆಯ ಸಂಚು ರೂಪಿಸಿದನು. ಅವರು ಮಗಳ ಹತ್ಯೆ ಮಾಡಿದರು ಮತ್ತು ಅವಳ ಮೃತದೇಹದ ೬ ತುಂಡುಗಳನ್ನು ಮಾಡಿದರು.
೩. ಗುರುತು ಸಿಗಬಾರದು ಎಂದು ಅವರು ಮೃತ ಮಗಳ ತಲೆಯನ್ನು ಕತ್ತರಿಸಿ ಕೆರೆಯಲ್ಲಿ ಎಸೆದರು, ಹಾಗೂ ಕೈ-ಕಾಲು ಮತ್ತು ಮುಂಡವನ್ನು ಒಂದು ಪೆಟ್ಟಿಗೆಯಲ್ಲಿ ತುಂಬಿದರು ಮತ್ತು ಪೆಟ್ಟಿಗೆಯನ್ನು ‘ಛಪರಾ-ಗೋಮತಿನಗರ ಎಕ್ಸ್ ಪ್ರೆಸ್’ನ ಬೋಗಿಯಲ್ಲಿ ಇಟ್ಟರು.
೪. ತಮಕುಹಿ ರೋಡ್ ರೈಲುನಿಲ್ದಾಣದ ಫುಟೇಜ್ ನಲ್ಲಿ ಮೂವರೂ ಆರೋಪಿಗಳು ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡರು. ಪೊಲೀಸರು ಅನ್ಸಾರಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಅವನು ಅಪರಾಧವನ್ನು ಒಪ್ಪಿಕೊಂಡನು. ಪೊಲೀಸರು ಕೆರೆಯಿಂದ ತಲೆಯ ಭಾಗ ಮತ್ತು ಹತ್ಯೆಗಾಗಿ ಬಳಸಿದ ಆಯುಧವನ್ನೂ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ಮಾಡುತ್ತಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!