ಮುಸಲ್ಮಾನರು ಶಿವಲಿಂಗದ ಮೇಲೆ ಮಲಮೂತ್ರ ವಿಸರ್ಜನೆ ಮಾಡಿದ್ದರು

ಕಲಬುರಗಿ – ಕಲಬುರಗಿ ಜಿಲ್ಲೆಯ ಆಳಂದ ನಗರದ ಪ್ರಸಿದ್ಧ ಲಾಡಲೆ ಮಶಾಕ್ ದರ್ಗಾ ಗಲಭೆಗೆ ಸಂಬಂಧಿಸಿದ ಅಪರಾಧಿ ಪ್ರಕರಣಗಳನ್ನು ಹಿಂದೆ ಪಡೆಯುವ ನಿರ್ಣಯವನ್ನು ಸರಕಾರವು ತೆಗೆದುಕೊಂಡಿದೆ.
ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರವರ ಲಿಖಿತ ವಿನಂತಿಯ ಮೇರೆಗೆ ಈ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಇದರಿಂದ ಗಲಭೆಯಲ್ಲಿ ಪಾಲ್ಗೊಂಡಿದ್ದ ಮುಸಲ್ಮಾನ ಯುವಕರಿಗೆ ಮತ್ತು ಕೆಲವು ಪ್ರಮುಖ ನಾಯಕರಿಗೆ ಇದರ ಲಾಭವಾಗಲಿದೆ.
🚨 Karnataka Congress Govt Withdraws Cases Against Aland Dargah Riot Accused 🚨
📍 Kalaburagi, Karnataka
• The Siddaramaiah govt has withdrawn criminal cases against the Muslim accused linked to the Aland Ladle Mashak Dargah riots.
• During the violence, a Shivling was… pic.twitter.com/I65vpOuGM9
— Sanatan Prabhat (@SanatanPrabhat) May 22, 2026
ಗೃಹಮಂತ್ರಿ ಡಾ. ಜಿ. ಪರಮೇಶ್ವರರಿಂದ ನಿರ್ಣಯದ ಬೆಂಬಲ
ಮೊಕದ್ದಮೆಗಳನ್ನು ಹಿಂದೆ ಪಡೆಯುವ ಸಂದರ್ಭದಲ್ಲಿ ಗೃಹಮಂತ್ರಿ ಡಾ. ಜಿ. ಪರಮೇಶ್ವರರವರಿಗೆ ಕೇಳಿದಾಗ ಅವರು, ‘ನಾನು ವಿಸ್ತೃತ ಮಾಹಿತಿ ಹೇಳುವುದಿಲ್ಲ. ಸಚಿವಸಂಪುಟದಲ್ಲಿ ಎಲ್ಲ ವಿಷಯಗಳ ಮೇಲೆ ಚರ್ಚೆ ಮಾಡಿ ಕಾನೂನಿನ ಚೌಕಟ್ಟಿನಲ್ಲಿಯೇ ಬಿಡುಗಡೆಯ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಯಾವುದೇ ನಿರ್ಣಯವನ್ನು ಕೂಡಲೇ ತೆಗೆದುಕೊಂಡಿಲ್ಲ’ ಎಂದು ಹೇಳಿದರು.
|
ಏನು ಪ್ರಕರಣ ? ೨೦೨೨ ರಲ್ಲಿನ ಮಹಾಶಿವರಾತ್ರಿಯ ಸಮಯದಲ್ಲಿ ಆಳಂದ ನಗರದಲ್ಲಿನ ಲಾಡಲೆ ಮಶಾಕ್ ದರ್ಗಾ ಪರಿಸರದಲ್ಲಿರುವ ರಾಘವ ಚೈತನ್ಯ ಶಿವಲಿಂಗದ ಪೂಜೆ ಮಾಡುವ ಅಂಶದಿಂದ ಎರಡೂ ಧರ್ಮದವರ ನಡುವೆ ದೊಡ್ಡ ಸಂಘರ್ಷ ನಿರ್ಮಾಣವಾಗಿತ್ತು. ‘ಕೆಲವು ಮುಸಲ್ಮಾನರು ಪವಿತ್ರ ಶಿವಲಿಂಗದ ಮೇಲೆ ಮಲಮೂತ್ರ ವಿಸರ್ಜನೆ ಮಾಡಿ ವಿಕೃತಿ ತೋರಿದರು’, ಎಂಬ ಆರೋಪ ಬೆಳಕಿಗೆ ಬಂದಾಗ ಪರಿಸ್ಥಿತಿ ಕೈಮೀರಿತ್ತು. ಶಿವಲಿಂಗ ಅಪವಿತ್ರವಾದ ಮಾಹಿತಿ ಸಿಗುತ್ತಲೇ ಸ್ಥಳವನ್ನು ಸ್ವಚ್ಛಗೊಳಿಸಿ ಪೂಜೆ ಮಾಡಲು ಅಂದಿನ ಕೇಂದ್ರಮಂತ್ರಿ ಭಗವಂತ ಖೂಬಾ, ಹಿಂದೂ ಸಂಘಟನೆಗಳ ಪ್ರಮುಖರು ಮತ್ತು ಜನಪ್ರತಿನಿಧಿಗಳು ಮುಂದೆ ಬಂದಿದ್ದರು. ಈ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಘಟನಾಸ್ಥಳಕ್ಕೆ ಧಾವಿಸಿದ ಅಂದಿನ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯವರ ವಾಹನಗಳ ಮೇಲೆಯೇ ಕೋಪಗೊಂಡ ಗುಂಪು ಕಲ್ಲುತೂರಾಟ ಮಾಡಿತ್ತು. ಕೋಲುಗಳಿಂದ ವಾಹನಗಳನ್ನು ಧ್ವಂಸಗೊಳಿಸಿ, ಮಾರಕಾಸ್ತ್ರಗಳನ್ನು ತೋರಿಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದರು. ಈ ಮಾರಣಾಂತಿಕ ದಾಳಿ ಮತ್ತು ನಿರ್ಮಾಣ ಮಾಡಿದ ಹಿಂಸಾತ್ಮಕ ಘಟನೆಗಳ ಸಂದರ್ಭದಲ್ಲಿ ಆ ಸಮಯದಲ್ಲಿ ಪೊಲೀಸರು ವಿವಿಧ ಮುಸಲ್ಮಾನ ನಾಯಕರು ಮತ್ತು ಯುವಕರ ವಿರುದ್ಧ ಒಟ್ಟು ೧೩ ಗಂಭೀರ ಅಪರಾಧಿಕ ಪ್ರಕರಣಗಳನ್ನು ದಾಖಲಿಸಿದ್ದರು. ಈಗ ಸಿದ್ದರಾಮಯ್ಯನವರ ನೇತೃತ್ವದಲ್ಲಿನ ಕಾಂಗ್ರೆಸ್ ಸರಕಾರವು ಈ ಎಲ್ಲ ೧೩ ಪ್ರಕರಣಗಳನ್ನು ಸಂಪೂರ್ಣವಾಗಿ ಹಿಂದೆ ಪಡೆದಿದೆ. |
ಭಾಜಪದ ವಿರೋಧ
ರಾಜ್ಯ ಸರಕಾರವು ಒಂದು ಕಡೆ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಅವರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸುವುದರೊಂದಿಗೆ ಪೊಲೀಸರಿಂದ ಅವರಿಗೆ ತೊಂದರೆ ನೀಡುವ ಕೆಲಸ ಮಾಡುತ್ತಿದೆ. ಇನ್ನೊಂದು ಕಡೆ ಸರಕಾರವು ಮುಸಲ್ಮಾನರ ಮೇಲಿನ ಅಪರಾಧಿ ಮೊಕದ್ದಮೆಗಳನ್ನು ಹಿಂದೆ ಪಡೆಯುತ್ತಿದೆ. ಬೆಂಕಿಹಚ್ಚಿದ ಕೆಲವು ಪ್ರಕರಣಗಳು, ಆಸ್ತಿಪಾಸ್ತಿ ಹಾನಿ ಮಾಡಿದ ಪ್ರಕರಣಗಳು ಮುಂತಾದ ಪ್ರಕರಣಗಳೊಂದಿಗೆ ಗಂಭೀರ ಮೊಕದ್ದಮೆಗಳನ್ನು ಹಿಂದೆ ಪಡೆದು ‘ನಾವು ಅಪರಾಧಿಗಳ ಪರವಾಗಿದ್ದೇವೆ’, ಎಂಬ ಕೆಟ್ಟ ಸಂದೇಶವನ್ನು ಸರಕಾರವು ನೀಡಿದೆ, ಎಂದು ಭಾಜಪದ ಶಾಸಕ ಸಿ.ಟಿ. ರವಿಯವರು ಆರೋಪ ಮಾಡಿದ್ದಾರೆ.
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!
ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ದೆಹಲಿಯ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ: 21 ಜನರ ಸಾವು