ಬಾಂದ್ರಾ (ಮುಂಬಯಿ) ಇಲ್ಲಿನ ಅಕ್ರಮ ಮಸೀದಿ ತೆರವುಗೊಳಿಸುವಾಗ ಮುಸಲ್ಮಾನರಿಂದ ಪೊಲೀಸರ ಮೇಲೆ ಕಲ್ಲು ತೂರಾಟ !

  • ಪೊಲೀಸರ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯ ವೇಳೆ ನಡೆದ ಘಟನೆ

  • ಬರೋಬ್ಬರಿ ೫೦೦ ಕ್ಕೂ ಹೆಚ್ಚು ಕೊಳೆಗೇರಿಗಳ ಅತಿಕ್ರಮಣ

ಮುಂಬಯಿ – ಇಲ್ಲಿನ ಬಾಂದ್ರಾ ರೈಲು ನಿಲ್ದಾಣದ ಪರಿಸರದಲ್ಲಿನ ಅತಿಕ್ರಮಣಗಳನ್ನು ತೆರವುಗೊಳಿಸಲಾಗುತ್ತಿದೆ. ಇಲ್ಲಿರುವ ಅಕ್ರಮ ಮಸೀದಿಯ ಮೇಲೆ ಬುಲ್ಡೋಜರ್ ಚಲಾಯಿಸಲಾಗುತ್ತಿದ್ದಾಗ ಅಲ್ಲಿದ್ದ ಮುಸಲ್ಮಾನರು ಅದನ್ನು ವಿರೋಧಿಸಿದರು. ಅವರು ಪೊಲೀಸರ ಮೇಲೆ ಬಾಟಲಿಗಳು ಮತ್ತು ಇತರ ವಸ್ತುಗಳನ್ನು ಎಸೆದರು, ಹಾಗೆಯೇ ದೊಡ್ಡ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಿದರು. ಪೊಲೀಸರು ಅವರ ಮೇಲೆ ಲಾಠಿ ಪ್ರಹಾರ ನಡೆಸಿದರು. ಇಲ್ಲಿ ಹೆಚ್ಚುತ್ತಿರುವ ಜನಸಂದಣಿಯನ್ನು ಕಂಡು ಪೊಲೀಸರು ಹೆಚ್ಚಿನ ಪಡೆಗಳನ್ನು ಕರೆಸಿಕೊಂಡಿದ್ದಾರೆ. ಗಲಭೆ ನಿಯಂತ್ರಣ ಪಡೆಯೂ ಇಲ್ಲಿಗೆ ಆಗಮಿಸಿದೆ. ಸತತ ಎರಡನೇ ದಿನವೂ ಅತಿಕ್ರಮಣ ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿದಿದೆ. ಮುಂಬಯಿನ ಬಾಂದ್ರಾ ಭಾಗದ ರೈಲ್ವೆ ವ್ಯಾಪ್ತಿಯಲ್ಲಿ ಇದುವರೆಗೆ ನಡೆದ ಅತ್ಯಂತ ದೊಡ್ಡ ಅತಿಕ್ರಮಣ ವಿರೋಧಿ ಕಾರ್ಯಾಚರಣೆ ಎಂದು ಇದನ್ನು ಪರಿಗಣಿಸಲಾಗಿದೆ. ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಬಾಂದ್ರಾದ ರೈಲು ನಿಲ್ದಾಣದ ಪರಿಸರದಲ್ಲಿನ ಕೊಳಚೆ ಪ್ರದೇಶದ ಅತಿಕ್ರಮಣದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದರು. ಆ ಬಳಿಕ ರೈಲ್ವೆಯು ಈ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯನ್ನು ಕೈಗೊಂಡಿದೆ.

ಬಾಂದ್ರಾ ರೈಲ್ವೆ ವ್ಯಾಪ್ತಿಯಲ್ಲಿ ೫ ಸಾವಿರ ಚದರ ಮೀಟರ್‌ನಷ್ಟು ಅತಿಕ್ರಮಣವಾಗಿದೆ. ಇಲ್ಲಿ ೫೦೦ ಕ್ಕೂ ಹೆಚ್ಚು ಕೊಳೆಗೇರಿಗಳಿವೆ. ಕೆಲವು ದಿನಗಳ ಹಿಂದೆ ಅತಿಕ್ರಮಣ ವಿರೋಧಿ ಕಾರ್ಯಾಚರಣೆ ನಡೆದಾಗ ಅತಿಕ್ರಮಣಕಾರರು ಮುಂಬಯಿ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಇದಕ್ಕೆ ರಾಜಕೀಯ ಬೆಂಬಲವಿದ್ದಿದ್ದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು; ಆದರೆ ಈಗ ಮತ್ತೆ ಕಾರ್ಯಾಚರಣೆ ಆರಂಭವಾಗಿದೆ. ಇನ್ನು ಕೆಲವು ದಿನಗಳ ಕಾಲ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.

ರೈಲ್ವೆ ಅಧಿಕಾರಿಗಳ ನಿಲುವು !

ಈ ಪ್ರಕರಣದ ಕುರಿತು ರೈಲ್ವೆ ಅಧಿಕಾರಿಗಳು ಮಾತನಾಡಿ, ”ಪ್ರಯಾಣಿಕರ ಸುರಕ್ಷತೆಗಾಗಿ ಮತ್ತು ಭವಿಷ್ಯದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಅತಿಕ್ರಮಣ ತೆರವುಗೊಳಿಸುವುದು ಅತ್ಯಗತ್ಯವಾಗಿದೆ. ರೈಲ್ವೆ ಹಳಿಗಳ ಪಕ್ಕದಲ್ಲಿ ಬೆಳೆದಿರುವ ಕೊಳೆಗೇರಿಗಳಿಂದಾಗಿ ಅಪಘಾತದ ಅಪಾಯವೂ ಹೆಚ್ಚುತ್ತಿದೆ. ಸಂಬಂಧಪಟ್ಟ ಭೂಮಿ ಮುಕ್ತವಾದರೆ ‘ಬಾಂದ್ರಾ ಟರ್ಮಿನಸ್’ ವಿಸ್ತರಣೆ ಮಾಡಲು, ಹಾಗೂ ದೀರ್ಘ ದೂರದ ರೈಲುಗಳ ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಮತ್ತು ಭವಿಷ್ಯದಲ್ಲಿ ಬಾಂದ್ರಾ ರೈಲು ನಿಲ್ದಾಣವನ್ನು ‘ವರ್ಲ್ಡ್ ಕ್ಲಾಸ್ ಟರ್ಮಿನಸ್’ (ಜಾಗತಿಕ ದರ್ಜೆಯ ರೈಲು ನಿಲ್ದಾಣ) ಆಗಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಕಾರ್ಯಾಚರಣೆಯ ವ್ಯಾಪ್ತಿ !

ಮುಂಬಯಿ ಪೊಲೀಸರ ೪೦೦ ಅಧಿಕಾರಿಗಳು-ಸಿಬ್ಬಂದಿ, ರೈಲ್ವೆ ಪೊಲೀಸರು ಸೇರಿದಂತೆ ರೈಲ್ವೆ ಸುರಕ್ಷತಾ ಪಡೆಯ ೪೦೦ ಸೈನಿಕರು, ಹಾಗೆಯೇ ಪಶ್ಚಿಮ ರೈಲ್ವೆಯ ೨೦೦ ಪೊಲೀಸರು ಹೀಗೆ ಒಟ್ಟು ೧ ಸಾವಿರ ಜನರ ಸಶಸ್ತ್ರ ಪಡೆಯ ಸಮ್ಮುಖದಲ್ಲಿ ೧೨ ಜೆಸಿಬಿ, ಎರಡು ಪೊಕ್ಲೇನ್, ೧೨ ಟ್ರಕ್ ಮುಂತಾದ ಉಪಕರಣಗಳೊಂದಿಗೆ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಈ ಕಾರ್ಯಾಚರಣೆಯಿಂದಾಗಿ ೬೦೦ ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯದ ಭೂಮಿ ಮತ್ತೆ ಪಶ್ಚಿಮ ರೈಲ್ವೆಯ ವಶಕ್ಕೆ ಬರಲಿದೆ.

ಸಂಪಾದಕೀಯ ನಿಲುವು

  • ಕೆಲವು ದಿನಗಳ ಹಿಂದೆ ಗುಜರಾತ್‌ನ ರಾಜಕೋಟ್‌ನಲ್ಲಿ ಪೊಲೀಸರು ಹಿಂದೂಗಳ ತಥಾಕಥಿತ ಅಕ್ರಮ ದೇವಸ್ಥಾನಗಳ ಮೇಲೆ ಬುಲ್ಡೋಜರ್ ಚಲಾಯಿಸಿದ್ದರು. ಆ ಸಮಯದಲ್ಲಿ ಹಿಂದೂಗಳು ಕೇವಲ ಮೌಖಿಕವಾಗಿ ವಿರೋಧಿಸಿದ್ದರು. ಆದರೆ ಮುಂಬಯಿನ ಘಟನೆಯಿಂದ ಮತಾಂಧ ಮುಸಲ್ಮಾನರ ದೃಷ್ಟಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಮೌಲ್ಯ ಶೂನ್ಯವಾಗಿದೆ ಎಂಬುದು ಸ್ಪಷ್ಟವಾಗುತ್ತದೆ !
  • ಬಾಂದ್ರಾದಂತೆ ಮುಂಬಯಿನಲ್ಲಿ ಇನ್ನು ಎಷ್ಟು ಕಡೆಗಳಲ್ಲಿ ಇಂತಹ ಅತಿಕ್ರಮಣಗಳನ್ನು ಮಾಡಲಾಗಿದೆ ಎಂಬುದರ ಕುರಿತು ತನಿಖೆಯಾಗಬೇಕು ಮತ್ತು ಅದರಂತೆ ಅವುಗಳ ಮೇಲೆಯೂ ಬುಲ್ಡೋಜರ್ ಚಲಾಯಿಸಬೇಕು. ಇದರೊಂದಿಗೆ ಅತಿಕ್ರಮಣ ನಡೆದು ನಿರ್ಮಾಣ ಕಾರ್ಯ ನಡೆಯಲು ಅವಕಾಶ ನೀಡಿದ ಆಡಳಿತಾಧಿಕಾರಿಗಳ ವಿರುದ್ಧವೂ ಈಗ ಕ್ರಮ ಕೈಗೊಳ್ಳುವ ಕಾರ್ಯಾಚರಣೆ ಆರಂಭವಾಗಬೇಕು !