ಭಾರತೀಯ ಸೇನಾ ಮುಖ್ಯಸ್ಥರ ಎಚ್ಚರಿಕೆ; ಪಾಕಿಸ್ತಾನ ರಕ್ಷಣಾ ಸಚಿವರ ಪೊಳ್ಳು ಬೆದರಿಕೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಇತಿಹಾಸ ಮತ್ತು ಭೂಗೋಳವನ್ನು ಬದಲಾಯಿಸುವ ಕುರಿತು ಭಾರತದ ಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ ಅವರು ನೀಡಿದ ಎಚ್ಚರಿಕೆಯ ನಂತರ, ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಭಾರತಕ್ಕೆ ಪೊಳ್ಳು ಬೆದರಿಕೆ ಹಾಕಿದ್ದಾರೆ. ಭಾರತವು ಪಾಕಿಸ್ತಾನದ ವಿರುದ್ಧ ಮತ್ತೊಮ್ಮೆ ಯಾವುದೇ ರೀತಿಯ ಸಾಹಸಕ್ಕೆ ಕೈಹಾಕಿದರೆ, ಅವರನ್ನು ಇತಿಹಾಸದ ಪುಟಗಳಿಗೆ ಅಳಿಸಲಾಗುವುದು ಮತ್ತು ಭಾರತದ ಭೂಗೋಳವನ್ನು ಬದಲಾಯಿಸಲಾಗುವುದು ಎಂದು ಆಸಿಫ್ ಬೆದರಿಕೆ ಹಾಕಿದ್ದಾರೆ. ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ. ಜನರಲ್ ದ್ವಿವೇದಿ ಅವರು, “ಪಾಕಿಸ್ತಾನವು ಭೂಗೋಳದ ಭಾಗವಾಗಿ ಉಳಿಯಬೇಕೇ ಅಥವಾ ಇತಿಹಾಸದ ಪುಟ ಸೇರಬೇಕೇ ಎಂಬುದನ್ನು ಅವರೇ ನಿರ್ಧರಿಸಬೇಕು” ಎಂದು ಹೇಳಿದ್ದರು. ಅದಕ್ಕೆ ಪ್ರತಿಯಾಗಿ ಆಸಿಫ್ ಈ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ.
“Pakistan will push India into the pages of history” – Empty threats from Pakistan’s Defence Minister Khawaja Asif after warning from the Indian Army Chief.
𝐏𝐚𝐤𝐢𝐬𝐭𝐚𝐧 𝐬𝐞𝐞𝐦𝐬 𝐭𝐨 𝐟𝐨𝐫𝐠𝐞𝐭 𝐭𝐡𝐚𝐭 𝐈𝐧𝐝𝐢𝐚 𝐚𝐥𝐫𝐞𝐚𝐝𝐲 𝐜𝐡𝐚𝐧𝐠𝐞𝐝 𝐢𝐭𝐬 𝐦𝐚𝐩 𝐨𝐧𝐜𝐞… https://t.co/4NeM8ROaBg pic.twitter.com/m1CtJjMK49
— Sanatan Prabhat (@SanatanPrabhat) May 20, 2026
೧. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಭಾರತೀಯ ಸೇನಾ ಮುಖ್ಯಸ್ಥರು ತಮ್ಮ ಕಳೆದು ಹೋದ ಘನತೆಯನ್ನು ಮರಳಿ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆಸಿಫ್ ಟೀಕೆ ಮಾಡಿದ್ದಾರೆ.
೨. ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾದಂತಹ ನೆರೆಹೊರೆಯ ದೇಶಗಳೊಂದಿಗೆ ಭಾರತಕ್ಕೆ ಈಗ ಹಳೆಯ ಬಾಂಧವ್ಯ ಉಳಿದಿಲ್ಲ ಮತ್ತು ವಿದೇಶಾಂಗ ನೀತಿ ಕ್ಷೇತ್ರದಲ್ಲಿ ಭಾರತ ಮುಖಭಂಗ ಎದುರಿಸುತ್ತಿದೆ ಎಂದು ಆಸಿಫ್ ಹೇಳಿದ್ದಾರೆ. (ಪಾಕಿಸ್ತಾನವನ್ನು ಜಗತ್ತಿನಲ್ಲಿ ಯಾರೂ ನಾಯಿಯಂತೆಯೂ ಪರಿಗಣಿಸದ ಪರಿಸ್ಥಿತಿಯಲ್ಲಿ, ಈ ರೀತಿಯ ಹೇಳಿಕೆ ನೀಡುವುದು ಹಾಸ್ಯಾಸ್ಪದವಾಗಿದೆ! – ಸಂಪಾದಕರು) ಇಸ್ರೇಲ್ ಈ ಪ್ರದೇಶದಲ್ಲಿ ಭಾರತವನ್ನು ಹೊರತುಪಡಿಸಿ ಬೇರೆ ಯಾರನ್ನೂ ಹೆಚ್ಚು ಶಕ್ತಿಶಾಲಿಯಾಗಿ ನೋಡಲು ಬಯಸುವುದಿಲ್ಲ ಎಂದೂ ಅವರು ಹೇಳಿದರು.
೩. ಇತ್ತೀಚೆಗೆ ಸಿಂಧೂ ನದಿ ನೀರಿನ ಒಪ್ಪಂದದ ಕುರಿತು ಶಾಶ್ವತ ಮಧ್ಯಸ್ಥಿಕೆ ಬಗ್ಗೆ ನ್ಯಾಯಾಲಯವು ಪಾಕಿಸ್ತಾನದ ಪರವಾಗಿ ತೀರ್ಪು ನೀಡಿದೆ. ಈ ಒಪ್ಪಂದವನ್ನು ಏಕಪಕ್ಷೀಯವಾಗಿ ರದ್ದುಗೊಳಿಸಲು ಸಾಧ್ಯವಿಲ್ಲ ಮತ್ತು ವಿವಾದ ಬಗೆಹರಿಸಲು ಬಲಿಷ್ಠ ವ್ಯವಸ್ಥೆ ಅಸ್ತಿತ್ವದಲ್ಲಿದೆ ಎಂದು ಆಸಿಫ್ ತಿಳಿಸಿದರು.
ಸಂಘದ ಸಹಕಾರ್ಯವಾಹ ಹೊಸಬಾಳೆ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಭಾರತ ಸರಕಾರದ ವಿರುದ್ಧ ಟೀಕೆ!
ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆಯ ಅವಕಾಶವನ್ನು ಮುಕ್ತವಾಗಿಡಬೇಕೆಂದು ಹೇಳಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಯ ಕುರಿತೂ ಆಸಿಫ್ ಪ್ರತಿಕ್ರಿಯಿಸಿದ್ದಾರೆ. ಭಾರತದಲ್ಲಿ ಸೇನೆ ಮತ್ತು ನಾಗರಿಕ ಸಮಾಜದ (ಸಿವಿಲ್ ಸೊಸೈಟಿ) ಪಾತ್ರಗಳು ವಿಭಿನ್ನವಾಗಿವೆ. ಭಾರತದಲ್ಲಿ ಸರಕಾರದ ವಿರುದ್ಧ ಧ್ವನಿಗಳು ಎದ್ದೇಳುತ್ತಿವೆ ಎಂದು ಆಸಿಫ್ ಹೇಳಿದರು. (ಭಾರತದ ಬಗ್ಗೆ ಚಿಂತಿಸುವ ಬದಲು ಆಸಿಫ್ ಅವರು ತಮ್ಮ ಸಮಾಜ ಎದುರಿಸುತ್ತಿರುವ ದುಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಬೇಕು! – ಸಂಪಾದಕರು)
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !
ಟೆಕ್ಸಾಸ್ (ಅಮೆರಿಕ) ನಲ್ಲಿ ಭಾರತದ ರಾಷ್ಟ್ರಧ್ವಜ ಹರಿದ ಅಮೆರಿಕನ್ ಯುವಕ