ಉತ್ತರ ಪ್ರದೇಶದ ‘ಜನಸತ್ತಾ ದಳ ಲೋಕತಾಂತ್ರಿಕ ಪಕ್ಷ’ದ ಅಧ್ಯಕ್ಷ ಹಾಗೂ ಶಾಸಕ ರಘುರಾಜ್ ಪ್ರತಾಪ್ ಸಿಂಹ ಅಲಿಯಾಸ್ ರಾಜಾ ಭಯ್ಯಾ ಅವರ ಹೇಳಿಕೆ

ಪ್ರತಾಪಗಢ (ಉತ್ತರ ಪ್ರದೇಶ) – ಇಂದು ದೇಶದಲ್ಲಿ ಎಷ್ಟು ಮುಸ್ಲಿಮರಿದ್ದಾರೋ, ಅವರೆಲ್ಲರೂ ಹಿಂದೂಗಳೇ ಆಗಿದ್ದಾರೆ. ಇವರೇನೂ ಅರಬ್ ದೇಶದಿಂದ ಬಂದವರಲ್ಲ. ಯಾರು ಶ್ರದ್ಧಾಹೀನರಾಗಿದ್ದರೋ, ಹೇಡಿಗಳಾಗಿದ್ದರೋ, ಲೋಭಿಗಳಾಗಿದ್ದರೋ, ಆಸೆಬುರುಕರಾಗಿದ್ದರೋ ಮತ್ತು ನಿಷ್ಠಾಹೀನರಾಗಿದ್ದರೋ, ಅಂತಹ ಹಿಂದೂಗಳು ಒತ್ತಡಕ್ಕೆ ಮಣಿದು ಅಥವಾ ಆಮಿಷಗಳಿಗೆ ಬಲಿಯಾಗಿ ಮತಾಂತರಗೊಂಡರು. ಯಾರು ಧಾರ್ಮಿಕರಾಗಿದ್ದರೋ, ವೀರರಾಗಿದ್ದರೋ, ಬಲಿದಾನಿಗಳಾಗಿದ್ದರೋ, ನಾವೆಲ್ಲರೂ (ಹಿಂದೂಗಳು) ಅವರ ಮಕ್ಕಳಾಗಿದ್ದೇವೆ,” (ಅಂತಹ ಪೂರ್ವಜರ ವಂಶಸ್ಥರಾಗಿದ್ದರೂ ಇಂದು ಅವರಲ್ಲಿ ಹೆಚ್ಚಿನವರು ಹೇಡಿಗಳಾಗಿದ್ದಾರೆ. ಇದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ! – ಸಂಪಾದಕರು) ಎಂಬ ಹೇಳಿಕೆಯನ್ನು ಇಲ್ಲಿನ ಕುಂದಾ ಕ್ಷೇತ್ರದ ಶಾಸಕ ಮತ್ತು ಜನಸತ್ತಾ ದಳ ಲೋಕತಾಂತ್ರಿಕ ಪಕ್ಷದ ಅಧ್ಯಕ್ಷ ರಘುರಾಜ್ ಪ್ರತಾಪ್ ಸಿಂಹ ಅಲಿಯಾಸ್ ರಾಜಾ ಭಯ್ಯಾ ನೀಡಿದ್ದಾರೆ. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದರ ಮೇಲೆ ಟೀಕೆಗಳು ವ್ಯಕ್ತವಾಗುತ್ತಿವೆ. ಮೇ 16 ರಂದು ಪ್ರಯಾಗ್‌ರಾಜ್‌ನ ಹಳ್ಳಿಯೊಂದರಲ್ಲಿ ಆಯೋಜಿಸಲಾಗಿದ್ದ ರಾಮಕಥೆಯ ಸಂದರ್ಭದಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
“All the Muslims in India today were originally Hindus.” – Raja Bhaiya (@RajveersinghUP), President of the Jansatta Dal Loktantrik Party in UP, while reacting to Udhayanidhi Stalin’s remarks on Sanatan Dharma.
He further stated: “Those Hindus who lacked conviction, who were… https://t.co/IOL9Hbwl8w pic.twitter.com/korPUMP4kS
— Sanatan Prabhat (@SanatanPrabhat) May 19, 2026
ರಾಜಾ ಭಯ್ಯಾ ಅವರು,
ಸನಾತನವನ್ನು ನಾಶಮಾಡುವ ಹೇಳಿಕೆಗೆ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ; ಆದರೆ ಯಾರಾದರೂ ಇಸ್ಲಾಂ ಅನ್ನು ನಾಶಮಾಡುವ ಬಗ್ಗೆ ಮಾತನಾಡಿದ್ದರೆ…!
ತಮಿಳುನಾಡಿನಲ್ಲಿ ಡಿಎಂಕೆ (‘ದ್ರಾವಿಡ ಮುನ್ನೇತ್ರ ಕಳಗಂ’) ನಾಯಕರೊಬ್ಬರಿದ್ದಾರೆ. ಅವರು, ‘ಸನಾತನ ಧರ್ಮವನ್ನು ಸಂಪೂರ್ಣವಾಗಿ ನಾಶಮಾಡಬೇಕು, ಇದು ಡೆಂಗ್ಯೂ, ಮಲೇರಿಯಾ ಇದ್ದಂತೆ’ ಎಂದು ಹೇಳುತ್ತಾರೆ. ಅದನ್ನು ಹಲವು ಕಾಯಿಲೆಗಳಿಗೆ ಹೋಲಿಸಲಾಯಿತು. ಅವರು ‘ಹಿಂದೂ ಅತ್ಯಂತ ನಿಕೃಷ್ಟ ಧರ್ಮ, ಹಿಂದುತ್ವವನ್ನು ಕೊನೆಗಾಣಿಸಿ’ ಎಂದರು; ಆದರೆ ಇದಕ್ಕೆ ಎಲ್ಲೂ ಪ್ರತಿರೋಧ ವ್ಯಕ್ತವಾಗಲಿಲ್ಲ. ಈಗ ನೀವೇ ಊಹಿಸಿ, ಯಾರಾದರೂ ‘ಇಸ್ಲಾಂ ಅನ್ನು ಕೊನೆಗಾಣಿಸಿ!’ ಎಂದು ಹೇಳಿದ್ದರೆ, ಎಷ್ಟು ಫತ್ವಾಗಳನ್ನು ಹೊರಡಿಸಲಾಗುತ್ತಿತ್ತೋ ಗೊತ್ತಿಲ್ಲ. ಏನೆಲ್ಲಾ ಪ್ರತಿಭಟನೆಗಳು ನಡೆಯುತ್ತಿದ್ದವೋ ಮತ್ತು ಏನೇನು ಸಂಭವಿಸುತ್ತಿತ್ತೋ ಗೊತ್ತಿಲ್ಲ!
ಧರ್ಮ ರಕ್ಷಣೆಗಾಗಿ ಸಿದ್ಧರಾಗಿ!
ಆದ್ದರಿಂದ ಅತ್ಯಂತ ಪ್ರಮುಖವಾದುದೇನೆಂದರೆ, ಒಂದು ಕಡೆ ನಾವು ಧರ್ಮದ ಜ್ಞಾನವನ್ನು ಪಡೆದುಕೊಳ್ಳಬೇಕು ಮತ್ತು ಇನ್ನೊಂದು ಕಡೆ ಸಮರ್ಥ ಹಿಂದೂಗಳಾಗಿ ನಮ್ಮ ಮುಂದಿನ ಪೀಳಿಗೆಗಾಗಿ, ನಮ್ಮ ರಾಷ್ಟ್ರಕ್ಕಾಗಿ, ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯ ರಕ್ಷಣೆಗಾಗಿ ನಾವು ಮುಂದೆ ಬಂದು ಹೋರಾಡಲು, ಎದುರಿಸಲು ಸಿದ್ಧರಾಗಿರಬೇಕು. ಬೇರೆ ಯಾರೂ ಈ ಹೋರಾಟವನ್ನು ಮಾಡುವುದಿಲ್ಲ. ಈ ಹೋರಾಟವನ್ನು ನಾವೇ ಸ್ವತಃ ಮಾಡಬೇಕಾಗಿದೆ.
ಜಾತಿ-ಭೇದವನ್ನು ತ್ಯಜಿಸಿ!
ಅದಕ್ಕಾಗಿಯೇ ನಾವು ಜಾತಿ-ಭೇದವನ್ನು ತ್ಯಜಿಸಿ ಎಂದು ಹೇಳುತ್ತೇವೆ. ನಾವೆಲ್ಲರೂ ಹಿಂದೂ ಸಹೋದರರು. ಸಮಾಜದಲ್ಲಿರುವ ಒಡಕು ನಮ್ಮ ಅತ್ಯಂತ ದೊಡ್ಡ ದೌರ್ಬಲ್ಯಕ್ಕೆ ಕಾರಣವಾಗಿದೆ, ಇದರ ಲಾಭವನ್ನು ವಿರೋಧಿ ಶಕ್ತಿಗಳು ಪಡೆದುಕೊಳ್ಳುತ್ತವೆ.
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !