
ಪ್ರಯಾಗರಾಜ್ (ಉತ್ತರ ಪ್ರದೇಶ) – ಗಂಗಾನದಿಯ ಪಾತ್ರದಲ್ಲಿ ಮಾಂಸಾಹಾರಿ ಆಹಾರ ಎಸೆಯುವುದರಿಂದ ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಬಹುದು ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮಾರ್ಚ್ ತಿಂಗಳಲ್ಲಿ ಗಂಗಾನದಿಯಲ್ಲಿ ದೋಣಿಯೊಂದರಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ ಪ್ರಕರಣದಲ್ಲಿ ಪ್ರಕರಣ ದಾಖಲಾಗಿದ್ದ 14 ಮುಸ್ಲಿಂ ಪುರುಷರ ಪೈಕಿ 5 ಜನರಿಗೆ ಜಾಮೀನು ಮಂಜೂರು ಮಾಡುವಾಗ ನ್ಯಾಯಮೂರ್ತಿ ರಾಜೀವ್ ಲೋಚನ್ ಶುಕ್ಲಾ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
1. ನ್ಯಾಯಾಲಯವು, ಆರೋಪಿಗಳು ವ್ಯಕ್ತಪಡಿಸಿದ ಪಶ್ಚಾತ್ತಾಪದ ಭಾವನೆಯನ್ನು ಜಾಮೀನು ಮಂಜೂರು ಮಾಡಲು ಪರಿಗಣಿಸಬಹುದು ಎಂದು ಹೇಳಿದೆ. ಕೇವಲ ಆರೋಪಿಗಳು ಮಾತ್ರವಲ್ಲ, ಅವರ ಕುಟುಂಬದವರು ಕೂಡ ಸಮಾಜಕ್ಕಾದ ನೋವಿನ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
2. ನ್ಯಾಯಾಲಯವು, ಈ ಹಿಂದೆ ಆರೋಪಿಗಳ ಮೇಲೆ ಹೊರಿಸಲಾದ ಯಾವುದೇ ಅಪರಾಧಕ್ಕೆ 7 ವರ್ಷಗಳಿಗಿಂತ ಹೆಚ್ಚಿನ ಶಿಕ್ಷೆಯ ಅವಕಾಶವಿಲ್ಲ ಎಂದು ಗಮನಿಸಿದೆ. ಅಲ್ಲದೆ, ದೋಣಿ ಚಾಲಕನ ದೋಣಿಯನ್ನು ಆರೋಪಿಗಳು ಬಲವಂತವಾಗಿ ವಶಪಡಿಸಿಕೊಂಡಿದ್ದಾರೆ ಎಂಬ ದೋಣಿ ಚಾಲಕನ ದೂರಿನ ಬಗ್ಗೆಯೂ ನ್ಯಾಯಾಲಯ ಸಂಶಯ ವ್ಯಕ್ತಪಡಿಸಿದೆ. ಪ್ರಕರಣ ದಾಖಲಾಗುವ ಮುನ್ನ ಸಂಬಂಧಪಟ್ಟ ದೋಣಿ ಚಾಲಕ ತನಗಾದ ಸುಲಿಗೆ ಅಥವಾ ಬಲವಂತದ ಬಗ್ಗೆ ಯಾವುದೇ ದೂರು ನೀಡಿರಲಿಲ್ಲ ಎಂದು ಹೇಳಿದೆ. ದೋಣಿ ಚಾಲಕನು ಈ ಆರೋಪಗಳನ್ನು ಮಾಡುವಲ್ಲಿ ಮಾಡಿರುವ ವಿಳಂಬವು ಆತನ ಕಥೆಯ ಬಗ್ಗೆ ಅನುಮಾನವನ್ನು ಉಂಟುಮಾಡುತ್ತದೆ ಎಂದು ಹೇಳಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”