ತಾವು ಹಿಂದೂ ಎಂದು ಅಸಾದುದ್ದೀನ್ ಓವೈಸಿ ಅವರೇ ಒಪ್ಪಿಕೊಳ್ಳುವರು ! – ಕೇಂದ್ರ ಸಚಿವ ಗಿರಿರಾಜ್ ಸಿಂಹ

ನವದೆಹಲಿ – ಸಂಸದ ಅಸಾದುದ್ದೀನ್ ಓವೈಸಿ ಇಂದು ಅಥವಾ ನಾಳೆ ತಾವು ಹಿಂದೂ ಎಂಬುದನ್ನು ಒಪ್ಪಿಕೊಳ್ಳಲಿದ್ದಾರೆ ಎಂದು ಕೇಂದ್ರ ಜವಳಿ ಸಚಿವ ಮತ್ತು ಭಾಜಪ ನಾಯಕ ಗಿರಿರಾಜ್ ಸಿಂಹ ಅವರು ‘ಎಕ್ಸ್’ ನಲ್ಲಿ ಹೇಳಿದ್ದಾರೆ.

ಓವೈಸಿ ಅವರು ಈ ಹೇಳಿಕೆಗೆ ನೇರ ಪ್ರತಿಕ್ರಿಯೆ ನೀಡುವ ಬದಲು ಜವಳಿ ಉದ್ಯಮಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರು. ದೇಶದಲ್ಲಿ ಹತ್ತಿ ನೂಲಿನ ಬೆಲೆ ಏರಿಕೆಯಿಂದಾಗಿ ಕೈಮಗ್ಗ ಮತ್ತು ಸಣ್ಣ ನೇಯ್ಗೆಯವರ ಪರಿಸ್ಥಿತಿ ಹದಗೆಡುತ್ತಿದೆ. ಮಾರುಕಟ್ಟೆಯಲ್ಲಿ ಬಟ್ಟೆಯ ಬೆಲೆಗಳು ಸ್ಥಿರವಾಗಿವೆ; ಆದರೆ ಕಚ್ಚಾ ವಸ್ತುವಿನ ವೆಚ್ಚ ನಿರಂತರವಾಗಿ ಹೆಚ್ಚುತ್ತಿದೆ. ಇದರಿಂದಾಗಿ ಸಣ್ಣ ಉದ್ಯಮಗಳ ಮೇಲೆ ಭಾರಿ ಒತ್ತಡ ಉಂಟಾಗಿದೆ. ಅನೇಕ ಕೈಮಗ್ಗ ಘಟಕಗಳು ಮುಚ್ಚುವ ಹಂತ ತಲುಪಿವೆ ಮತ್ತು ಹೆಚ್ಚಿನ ಸಂಖ್ಯೆಯ ಜನರ ಉದ್ಯೋಗಗಳು ಅಪಾಯದಲ್ಲಿವೆ. ದೇಶೀಯ ಮಾರುಕಟ್ಟೆಯಲ್ಲಿ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಸರಕಾರವು ಹತ್ತಿ ನೂಲಿನ ರಫ್ತಿನ ಮೇಲೆ ನಿಷೇಧ ಹೇರಬೇಕು. ಉದ್ಯಮಕ್ಕೆ ಸಮಾಧಾನ ಸಿಗುವಂತೆ ಕಚ್ಚಾ ಹತ್ತಿಯ ಮೇಲಿನ ಆಮದು ಸುಂಕವನ್ನು ರದ್ದುಗೊಳಿಸಬೇಕು ಎಂದು ಓವೈಸಿ ಹೇಳಿದರು.