ದಾಪೋಲಿ (ರತ್ನಾಗಿರಿ): ಕ್ಷುಲ್ಲಕ ಕಾರಣಕ್ಕೆ ಜಗಳ; ಹಿಂದೂಗಳಿಗೆ ಬೆದರಿಕೆ ಹಾಕಿದ ಮತಾಂಧ
ಮೂವರು ಹಿಂದೂಗಳ ಮೇಲೆ ಪ್ರಾಣಾಂತಿಕ ಹಲ್ಲೆ, ಕಾರು ಧ್ವಂಸ
ಮೂವರು ಮುಸಲ್ಮಾನರ ಬಂಧನ

ದಾಪೋಲಿ (ಜಿಲ್ಲೆ ರತ್ನಾಗಿರಿ) – ನಗರದ ಮುಸಲ್ಮಾನ ಬಹುಸಂಖ್ಯಾತ ಮೀನು ಮಾರುಕಟ್ಟೆ ಪ್ರದೇಶದ ರಸ್ತೆಯಲ್ಲಿ ಗಾಡಿ ನಿಲ್ಲಿಸುವ ಕ್ಷುಲ್ಲಕ ಕಾರಣದ ಜಗಳದಿಂದ ಮೂವರು ಹಿಂದೂಗಳ ಮೇಲೆ 5 ರಿಂದ 6 ಜನರ ಮುಸಲ್ಮಾನ ಗುಂಪು ಜೀವನ್ಮರಣ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ‘ಈ ಪ್ರದೇಶದಲ್ಲಿ ನಮ್ಮದೇ ದಬ್ಬಾಳಿಕೆ ಇದೆ, ನಿಮ್ಮನ್ನು ಇಲ್ಲಿ ಯಾರೂ ರಕ್ಷಿಸಲು ಬರುವುದಿಲ್ಲ’ ಎಂದು ಬೆದರಿಕೆ ಹಾಕುತ್ತಾ ಮುಸಲ್ಮಾನರು ನೇರವಾಗಿ ಹಿಂದೂಗಳ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದರು. ಗಾಜುಗಳು ಒಡೆದು ಕಾರಿಗೆ ಭಾರೀ ಹಾನಿಯಾಗಿದೆ. ಈ ಘಟನೆ ಮೇ 15 ರಂದು ಮಧ್ಯಾಹ್ನ 12:30 ರ ಸುಮಾರಿಗೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಫ್ರಿದಿ ಜೋಗಿಲಕರ್, ಅಜರ್ ಜೋಗಿಲಕರ್ ಮತ್ತು ಅಲ್ತಾಫ್ ಅಲಾವುದ್ದೀನ್ ಆಲಂ ಎಂಬ ಮೂವರನ್ನು ಬಂಧಿಸಿದ್ದಾರೆ.
1. ಲಭ್ಯವಿರುವ ಮಾಹಿತಿಯ ಪ್ರಕಾರ: ಹಲ್ಲೆಗೊಳಗಾದ ದೀಪಕ್ ದತ್ತಾರಾಮ ಶೆಡಗೆ ಎಂಬವರು ಮೂಲತಃ ಟಾಂಗರ್ ನಿವಾಸಿಯಾಗಿದ್ದು, ಪ್ರಸ್ತುತ ವಿರಾರ್ ನಲ್ಲಿ ವಾಸಿಸುತ್ತಿದ್ದು ಮದುವೆ ಸಮಾರಂಭಕ್ಕಾಗಿ ತಮ್ಮ ಗ್ರಾಮಕ್ಕೆ ಬಂದಿದ್ದರು. ಅವರ ಜೊತೆಯಲ್ಲಿ ಅವರ ಸೋದರಸಂಬಂಧಿಗಳಾದ ಪ್ರವೀಣ್ ಪ್ರತಾಪ್ ಜೇದೆ ಮತ್ತು ಸ್ವಪ್ನಿಲ್ ಮಾರುತಿ ಶೆಡಗೆ ಎಂಬುವವರಿದ್ದರು.
2. ಮನೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ದೀಪಕ್ ಶೆಡಗೆ ಅವರು ತಮ್ಮ ಕಾರಿನಲ್ಲಿ ಮಾರುಕಟ್ಟೆಗೆ ಬಂದಿದ್ದರು. ಅವರು ಕೇಳಸಕರ ನಾಕಾ ಪರಿಸರದ ಕಾಮಗಾರ ಗಲ್ಲಿಯಿಂದ ಹೊರಬರುತ್ತಿದ್ದಾಗ, ತಪ್ಪು ಬದಿಯಲ್ಲಿ (ರಾಂಗ್ ಸೈಡ್) ಟೆಂಪೋ ಒಂದನ್ನು ನಿಲ್ಲಿಸಲಾಗಿತ್ತು. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಿತ್ತು. ಶೆಡಗೆ ಅವರು ಟೆಂಪೋ ಚಾಲಕನಿಗೆ ವಾಹನವನ್ನು ಸರಿಯಾಗಿ ನಿಲ್ಲಿಸುವಂತೆ ಹೇಳಿದಾಗ, ಅವರ ನಡುವೆ ಮಾತಿನ ಚಕಮಕಿ ಮತ್ತು ತಳ್ಳಾಟ ನಡೆಯಿತು.
3. ಇದಾದ ಕೆಲ ಸಮಯದ ನಂತರ, ಶೆಡಗೆ ಅವರು ಮೀನು ಮಾರುಕಟ್ಟೆ ರಸ್ತೆಯ ಸಾಮಂತ್ ಬಿಲ್ಡಿಂಗ್ ಬಳಿ ಕಾರನ್ನು ನಿಲ್ಲಿಸಿ ಮನೆಗೆ ಹೋಗಲು ಸಿದ್ಧರಾಗುತ್ತಿದ್ದಾಗ, 5 ರಿಂದ 6 ಜನ ಮುಸಲ್ಮಾನರು ದ್ವಿಚಕ್ರ ವಾಹನಗಳಲ್ಲಿ ಅಲ್ಲಿಗೆ ಬಂದರು. ‘ಈ ಪ್ರದೇಶದಲ್ಲಿ ನಮ್ಮದೇ ದಬ್ಬಾಳಿಕೆ ಇದೆ, ನಿಮ್ಮನ್ನು ಇಲ್ಲಿ ಯಾರೂ ರಕ್ಷಿಸಲು ಬರುವುದಿಲ್ಲ ಎಂದು ಹೇಳುತ್ತಾ ನೇರವಾಗಿ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಿಂದಾಗಿ ಕಾರಿನ ಗಾಜುಗಳು ಒಡೆದು ಭಾರಿ ನಷ್ಟವಾಯಿತು.
4. ತದನಂತರ ಆಫ್ರಿದಿ ಅಹಮದ್ ಜೋಗಿಲಕರ್, ಅಜರ್ ಜೋಗಿಲಕರ್ ಮತ್ತು ಅಲ್ತಾಫ್ ಆಲಂ ಅವರು ಶೆಡಗೆ ಅವರನ್ನು ಕಾರಿನಿಂದ ಹೊರಗೆ ಎಳೆದು ಹಾಕಿ, ಲಾಠಿ-ಕಾಲುಗಳಿಂದ ಅಮಾನಷವಾಗಿ ಥಳಿಸಿದರು. ಆಫ್ರಿದಿ ಎಂಬಾತ ಶೆಡಗೆ ಅವರ ತಲೆಗೆ ಗಾಜಿನ ಬಾಟಲಿಯಿಂದ ಹೊಡೆದ ಪರಿಣಾಮ ದೀಪಕ್ ಅವರ ತಲೆಯಿಂದ ಭಾರೀ ರಕ್ತಸ್ರಾವವಾಯಿತು. ಅವರ ತಲೆಗೆ 12 ಹೊಲಿಗೆಗಳನ್ನು ಹಾಕಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳು ದೀಪಕ್ ಅವರಿಗೆ ಜೀವ ಬೆದರಿಕೆ ಕೂಡ ಹಾಕಿದ್ದಾರೆ.
5. ಘಟನೆಯ ನಂತರ ಗಾಯಗೊಂಡ ಶೆಡಗೆ ಅವರು ದಾಪೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಕ್ರಮ ಕೈಗೊಂಡು ಆರೋಪಿಗಳಾದ ಆಫ್ರಿದಿ ಅಹಮದ್ ಜೋಗಿಲ್ಕರ್, ಅಜರ್ ಅಹಮದ್ ಜೋಗಿಲ್ಕರ್, ಅಲ್ತಾಫ್ ಅಲಾವುದ್ದೀನ್ ಆಲಂ ಮತ್ತು ಇತರ 2 ರಿಂದ 3 ಜನರ ವಿರುದ್ಧ ವಿವಿಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.
6. ಮುಖ್ಯ ಆರೋಪಿಗಳಾದ ಆಫ್ರಿದಿ, ಅಜರ್ ಮತ್ತು ಅಲ್ತಾಫ್ (ಎಲ್ಲರೂ ಖೋಂಡಾ, ದಾಪೋಲಿ ನಿವಾಸಿಗಳು) ಅವರನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!