ನ್ಯಾಯವಾದಿ ಅಮಿತಾ ಸಚ್‌ದೇವ ಅವರಿಂದ ಅರ್ಜಿ ಸಲ್ಲಿಕೆ

ನವದೆಹಲಿ – ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಇತ್ತೀಚೆಗೆ ಸನಾತನ ಧರ್ಮದ ನಿರ್ಮೂಲನೆ ಕುರಿತು ಮಾಡಿದ ಹೇಳಿಕೆಯನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ನ್ಯಾಯವಾದಿ ಅಮಿತಾ ಸಚ್‌ದೇವ ಅವರು ಈ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದು, ಸುಪ್ರೀಂ ಕೋರ್ಟ್‌ನ ಆದೇಶದ ಹೊರತಾಗಿಯೂ ಪೊಲೀಸರು ಸ್ಟಾಲಿನ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅದರಲ್ಲಿ ಪ್ರತಿಪಾದಿಸಿದ್ದಾರೆ. ಈ ಪ್ರಕರಣದ ವಿಚಾರಣೆಯು ಮೇ ೧೯ ರಂದು ನಡೆಯಲಿದೆ.
ಡಿಎಂಕೆ ನಾಯಕ ಉದಯನಿಧಿಯವರು ಸೆಪ್ಟೆಂಬರ್ ೨೦೨೩ ರಲ್ಲಿ ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಗ್ಯೂ ನಂತಹ ಕಾಯಿಲೆಗಳಿಗೆ ಹೋಲಿಸಿ, ಅದರ ನಿರ್ಮೂಲನೆಗೆ ಕರೆ ನೀಡಿದ್ದರು. ಸನಾತನ ಧರ್ಮವು ಜಾತಿ ವ್ಯವಸ್ಥೆ ಮತ್ತು ಐತಿಹಾಸಿಕ ತಾರತಮ್ಯದ ಆಧಾರದ ಮೇಲಿದೆ ಎಂದು ಅವರು ಹೇಳಿದ್ದರು. ಈ ಹೇಳಿಕೆಯ ಹಿನ್ನೆಲೆಯಲ್ಲಿ ಅವರ ವಿರುದ್ಧ ಹಲವು ಕ್ರಿಮಿನಲ್ ದೂರುಗಳು ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು.
ಪದೇ ಪದೇ ಸನಾತನ ಧರ್ಮವನ್ನು ಅವಮಾನಿಸುತ್ತಿರುವ ಉದಯನಿಧಿ ಸ್ಟಾಲಿನ್!
ನ್ಯಾಯವಾದಿ ಸಚ್‌ದೇವ ಅವರು ಈಗ ಸಲ್ಲಿಸಿರುವ ಅರ್ಜಿಯಲ್ಲಿ, ಉದಯನಿಧಿ ಸ್ಟಾಲಿನ್ ಅವರು ಮೇ ೧೨ ರಂದು ತಮಿಳುನಾಡು ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲು ಮತ್ತೆ ಕರೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಜನರ ಮಧ್ಯೆ ಒಡಕು ಉಂಟುಮಾಡುವ ಸನಾತನ ಧರ್ಮವು ಖಂಡಿತವಾಗಿಯೂ ನಾಶವಾಗಬೇಕು, ಎಂದು ಅವರು ಹೇಳಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇರುವಾಗ ಮತ್ತು ನ್ಯಾಯಾಲಯವು ಈ ಹಿಂದೆ ಅವರ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರೂ ಸಹ, ಉದಯನಿಧಿಯವರು ಇಂತಹದೇ ಹೇಳಿಕೆಗಳನ್ನು ನೀಡುವುದನ್ನು ಮುಂದುವರಿಸಿದ್ದಾರೆ. ಇದು ನ್ಯಾಯಾಂಗ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ಗೌರವಿಸದಿರುವುದಾಗಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”