ಜಾರಿ ನಿರ್ದೇಶನಾಲಯದಿಂದ ಕೊಲಕಾತಾದ ಪೊಲೀಸ್ ಉಪ ಆಯುಕ್ತರ ಬಂಧನ! – Sona Pappu Case

ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕ್ರಮ

ಕೊಲಕಾತಾ (ಬಂಗಾಳ) – ಸೋನಾ ಪಪ್ಪು ಪ್ರಕರಣದಲ್ಲಿ ಹಲವು ಬಾರಿ ಸಮನ್ಸ್ ಜಾರಿ ಮಾಡಿದರೂ ವಿಚಾರಣೆಗೆ ಹಾಜರಾಗದ ಕಾರಣ ಜಾರಿ ನಿರ್ದೇಶನಾಲಯವು (ಇ.ಡಿ.) ಕೊಲಕಾತಾದ ಪೊಲೀಸ್ ಉಪ ಆಯುಕ್ತ ಶಾಂತನು ಸಿನ್ಹಾ ಘೋಷ್ ಅವರನ್ನು ಬಂಧಿಸಿದೆ. ಅವರಿಗೆ ಹಲವು ಬಾರಿ ಸಮನ್ಸ್ ಜಾರಿ ಮಾಡಿದರೂ ಹಾಜರಾಗದ ಕಾರಣ ಅವರ ವಿರುದ್ಧ ‘ಲುಕ್-ಔಟ್ ನೋಟಿಸ್’ ಹೊರಡಿಸಲಾಗಿತ್ತು. ಸೋನಾ ಪಪ್ಪು ಪ್ರಕರಣವು ಭೂಕಬಳಿಕೆ, ಸುಲಿಗೆ ಮತ್ತು ‘ರಿಯಲ್ ಎಸ್ಟೇಟ್’ಗೆ (ಆಸ್ತಿ ಖರೀದಿ-ಮಾರಾಟಕ್ಕೆ) ಸಂಬಂಧಿಸಿದ ಆರ್ಥಿಕ ವಂಚನೆಗೆ ಸಂಬಂಧಿಸಿದೆ.