ತಿಲಕ ಹಚ್ಚಿಕೊಂಡು ಶಾಲೆಗೆ ಬಂದ ವಿದ್ಯಾರ್ಥಿಗೆ ಮುಸಲ್ಮಾನ ಶಿಕ್ಷಕಿಯಿಂದ ಹಲ್ಲೆ: Kanpur Tilak Controversy

  • ಕಾನಪುರ (ಉತ್ತರ ಪ್ರದೇಶ) ಇಲ್ಲಿನ ಕ್ರೈಸ್ತ ಮಿಷನರಿ ಶಾಲೆಯಲ್ಲಿನ ಘಟನೆ

  • ಪಾಲಕರಿಂದ ಪೊಲೀಸರಿಗೆ ದೂರು

AI ರಚಿಸಿದ ಚಿತ್ರ

ಕಾನಪುರ (ಉತ್ತರ ಪ್ರದೇಶ) – ನೌಬಸ್ತಾದ ಶಾಲೆಯೊಂದರಲ್ಲಿ ಹಣೆಯ ಮೇಲೆ ತಿಲಕ ಧರಿಸಿ ಬಂದ ಆರನೇ ತರಗತಿಯ ವಿದ್ಯಾರ್ಥಿಗೆ ಮುಸಲ್ಮಾನ್ ಶಿಕ್ಷಕಿಯೊಬ್ಬರು ಹಲ್ಲೆ ನಡೆಸಿದ್ದರಿಂದ ದೊಡ್ಡ ಮಟ್ಟದ ಗದ್ದಲ ಉಂಟಾಯಿತು. ವಿದ್ಯಾರ್ಥಿಯ ಪಾಲಕರು ಪೊಲೀಸರನ್ನು ಸ್ಥಳಕ್ಕೆ ಕರೆಸಿದರು. ಪೊಲೀಸರು ಎರಡೂ ಕಡೆಯವರ ವಾದವನ್ನು ಆಲಿಸಿ ಸಂಧಾನಕ್ಕೆ ಪ್ರಯತ್ನಿಸಿದರು; ಆದರೆ ಪಾಲಕರು ಕಠಿಣ ಕ್ರಮಕ್ಕಾಗಿ ಪಟ್ಟು ಹಿಡಿದರು. ತದನಂತರ ಪೊಲೀಸರು ಅವರನ್ನು ಪೊಲೀಸ್ ಠಾಣೆಗೆ ಕಳುಹಿಸಿದರು.

ನಡೆದ ಘಟನೆಯೇನು?

. ದಾಮೋದರನಗರದ ಖಾದ್ಯ ತೈಲ ವ್ಯಾಪಾರಿಯೊಬ್ಬರ ಪುತ್ರ ಕಿದ್ವಾಯಿ ನಗರದ ‘ಮದರ್ ತೆರೇಸಾ ಮಿಷನ್ ಹೈಯರ್ ಸೆಕೆಂಡರಿ ಸ್ಕೂಲ್’ನಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

. ವಿದ್ಯಾರ್ಥಿಯು ತಾನು ಪ್ರತಿದಿನ ಹಣೆಗೆ ತಿಲಕ ಇಟ್ಟುಕೊಂಡು ಶಾಲೆಗೆ ಹೋಗುತ್ತಿದ್ದು, ಈ ಕಾರಣಕ್ಕಾಗಿ ಮುಸಲ್ಮಾನ್ ಶಿಕ್ಷಕಿ ಪದೇ ಪದೇ ತನಗೆ ಬೈಯುತ್ತಿದ್ದರು ಎಂದು ಆರೋಪಿಸಿದ್ದಾನೆ. ಮೇ ೧೨ ರಂದು ಅವರು ಅವನಿಗೆ ೩-೪ ಬಾರಿ ಕೆನ್ನೆಗೆ ಬಾರಿಸಿದ್ದಾರೆ.

. ಮಧ್ಯಾಹ್ನ ಶಾಲೆಯ ಮುಗಿದ ಬಳಿಕ ತಂದೆ ಮಗನನ್ನು ಕರೆದುಕೊಂಡು ಹೋಗಲು ಬಂದಾಗ, ಮಗು ಈ ವಿಷಯವನ್ನು ತಿಳಿಸಿದೆ. ಈ ಘಟನೆಯಿಂದ ಪಾಲಕರ ಆಕ್ರೋಶ ಕಟ್ಟೆ ಒಡೆದಿದೆ. ತಾವು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದರೂ, ಅವರು ಅದನ್ನು ಕೇಳಿಸಿಕೊಳ್ಳಲು ನಿರಾಕರಿಸಿದರು ಎಂದು ತಂದೆ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿಯು ಹೋಂ ವರ್ಕ ಪೂರ್ಣಗೊಳಿಸದ ಕಾರಣಕ್ಕಾಗಿ ಶಿಕ್ಷಕಿ ಹೀಗೆ ಮಾಡಿದ್ದಾರೆ ಎಂದು ಶಾಲೆಯವರು ಉಲ್ಟಾ ಆರೋಪ ಮಾಡಿದ್ದಾರೆ. ಇದರ ನಂತರ ತಂದೆಯು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

. ಪೊಲೀಸ್ ಅಧಿಕಾರಿ ಬಹಾದೂರ್ ಸಿಂಗ್ ಮಾತನಾಡಿ, ಶಾಲೆಯಲ್ಲಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಿರುವ ಮಾಹಿತಿ ಲಭ್ಯವಾಗಿದೆ; ಆದರೆ ಈವರೆಗೆ ಯಾವುದೇ ಲಿಖಿತ ದೂರು ಬಂದಿಲ್ಲ. ದೂರು ಬಂದ ತಕ್ಷಣ ತನಿಖೆ ನಡೆಸಿ ಸರಕಾರದ ನಿಯಮದಂತೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

. ಶಾಲೆಯ ಮುಖ್ಯೋಪಾಧ್ಯಾಯಿನಿ ಡಾ. ಬೀನಾ ಸಾಯಲ್ಸ್ ಅವರು, ಈ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ಶಿಕ್ಷಕಿಯ ಮೇಲಿನ ಆರೋಪ ಸಾಬೀತಾದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

  • ಕಾನ್ವೆಂಟ್ ಶಾಲೆಗಳ ಮೇಲೆ ನಿಗಾ ಇಡಲು ಪ್ರತಿ ಶಾಲೆಯಲ್ಲಿ ಒಬ್ಬ ಹಿಂದೂ ಅಧಿಕಾರಿಯನ್ನು ನೇಮಿಸುವುದು ಅನಿವಾರ್ಯವಾಗಿದೆ!
  • ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯ ಮೇಲೆ ಇಂತಹ ಹಲ್ಲೆ ನಡೆಸುವ ಧೈರ್ಯ ಯಾರೂ ಮಾಡುವುದಿಲ್ಲ ಎಂಬುದನ್ನು ಗಮನಿಸಿ!
  • ಮುಸಲ್ಮಾನರು ಎಲ್ಲಿದ್ದರೂ ಹಿಂದೂಗಳ ಮೇಲೆ ಹೇಗೆ ದ್ವೇಷ ತೀರಿಸಿಕೊಳ್ಳುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ