ಬುರ್ಖಾ ಧರಿಸಲು ಮತ್ತು ಮಾಂಸ ತಿನ್ನಲು ಬಲವಂತ

ಮುಜಫರಪುರ (ಬಿಹಾರ) – ಜಿಲ್ಲೆಯಲ್ಲಿ ಹಿಂದೂ ಶಿಕ್ಷಕಿಯೊಬ್ಬರು ತನ್ನ ಅತ್ತೆ-ಮಾವನವರ ವಿರುದ್ಧ ಗಂಭೀರ ಸ್ವರೂಪದ ದೂರನ್ನು ಮಾಡಿದ್ದಾಳೆ. ಮುಸಲ್ಮಾನ ಯುವಕನೊಂದಿಗೆ ವಿವಾಹವಾದ ನಂತರ, ಈಗ ಅತ್ತೆ-ಮಾವನವರಿಂದ ಆಕೆಯ ಮೇಲೆ ಧರ್ಮ ಬದಲಾಯಿಸಲು ಮತ್ತು ಇಸ್ಲಾಮಿಕ್ ಪದ್ಧತಿಗಳನ್ನು ಪಾಲಿಸಲು ಪ್ರಚಂಡ ಒತ್ತಡ ತರಲಾಗುತ್ತಿದೆ ಎಂದು ಆಕೆ ಆರೋಪಿಸಿದ್ದಾಳೆ. ಆಕೆ ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಆಕೆಯ ಮಾವ, ಅತ್ತೆ, ಮೈದುನ ಮತ್ತು ಜಾವು (ಮೈದುನನ ಹೆಂಡತಿ) ಆಕೆಯ ಮೇಲೆ ಬುರ್ಖಾ ಧರಿಸಲು ಮತ್ತು ಮಾಂಸ ತಿನ್ನಲು ಬಲವಂತ ಮಾಡುತ್ತಿದ್ದಾರೆ. ಈ ಬೇಡಿಕೆಗಳನ್ನು ಒಪ್ಪದಿದ್ದರೆ ಆಕೆಗೆ ಬರ್ಬರವಾಗಿ ಥಳಿಸಲಾಗುತ್ತದೆ ಮತ್ತು ಜೀವ ಬೆದರಿಕೆ ನೀಡಲಾಗುತ್ತದೆ.
೧. ಸಂತ್ರಸ್ತ ಮಹಿಳೆಯು, ಅತ್ತೆ-ಮಾವನವರು ಈ ವಿವಾಹವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಮತ್ತು ಸ್ಥಳೀಯ ಪಂಚಾಯತ್ ಮೂಲಕ ತನ್ನ ಮೇಲೆ ಒತ್ತಡ ತರಲಾಗುತ್ತಿದೆ ಎಂಬ ಆರೋಪವನ್ನೂ ಮಾಡಿದ್ದಾಳೆ.
೨. ನನ್ನನ್ನು ಶೋಷಣೆ ಮಾಡಿ ನನ್ನಿಂದ ಬಲವಂತವಾಗಿ ಧರ್ಮಪರಿವರ್ತನೆ ಮಾಡಿಸುತ್ತಿದ್ದಾರೆ, ಎಂಬ ದೂರನ್ನು ಆಕೆ ಪೊಲೀಸ್ ಠಾಣೆಯಲ್ಲಿ ನೀಡಿದ್ದಾಳೆ. ಮಹಿಳೆಯ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ