ಬಂಗಾಳ: ತೃಣಮೂಲ ಕಾಂಗ್ರೆಸ್ ಕಚೇರಿಗಳಲ್ಲಿ ನೂರಾರು ಬಿಳಿ ಸೀರೆಗಳು ಪತ್ತೆ !

ಭಾಜಪ ಕಾರ್ಯಕರ್ತರಿಗೆ ಹತ್ಯೆ ಬೆದರಿಕೆ ಹಾಕಲು ಅವರ ಮನೆಗಳಿಗೆ ಬಿಳಿ ಸೀರೆಗಳನ್ನು ಕಳುಹಿಸಲಾಗುತ್ತಿತ್ತು !

ಕೋಲಕಾತಾ (ಬಂಗಾಳ) – ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ತೃಣಮೂಲ ಕಾಂಗ್ರೆಸ್ ಕಚೇರಿಗಳಲ್ಲಿ ನೂರಾರು ಬಿಳಿ ಸೀರೆಗಳು ಪತ್ತೆಯಾಗಿವೆ. ಸೋಲು ಹತ್ತಿರವಾಗುತ್ತಿರುವುದನ್ನು ಕಂಡು ತೃಣಮೂಲ ಕಾಂಗ್ರೆಸ್, ಭಾಜಪ ಕಾರ್ಯಕರ್ತರು ವಾಸವಿದ್ದ ಮನೆಗಳಿಗೆ ಬಿಳಿ ಸೀರೆಗಳನ್ನು ಕಳುಹಿಸಲು ಪ್ರಾರಂಭಿಸಿತ್ತು. ಈ ಮೂಲಕ ಪರೋಕ್ಷವಾಗಿ ಕೊಲೆ ಬೆದರಿಕೆ ಹಾಕಲಾಗುತ್ತಿತ್ತು.

೧. ೨೦೨೪ ರಲ್ಲಿ ಸಂದೇಶಖಾಲಿಯಲ್ಲಿ ಭಾಜಪ ಕಾರ್ಯಕರ್ತರೊಬ್ಬರ ಮನೆಗೆ ಬಿಳಿ ಸೀರೆ ಮತ್ತು ಹೂವುಗಳನ್ನು ಕಳುಹಿಸಲಾಗಿತ್ತು. ಅದರ ಮೇಲೆ ‘ನೀನು ಹರಿ ಬೋಲ್ ಹೇಳು ಮತ್ತು ನಾನು ಹರಿ ಬೋಲ್ ಎನ್ನುವೆ’ ಎಂದು ಬರೆಯಲಾಗಿತ್ತು. ಬಂಗಾಳದಲ್ಲಿ ಶವಯಾತ್ರೆಯ ಸಮಯದಲ್ಲಿ ಇಂತಹ ಘೋಷಣೆಗಳನ್ನು ಕೂಗಲಾಗುತ್ತದೆ.

೨. ಫೆಬ್ರವರಿ ೨೦೨೬ ರಲ್ಲಿ ಬೀರಭೂಮ್‌ ನಲ್ಲಿಯೂ ಭಾಜಪ ಕಾರ್ಯಕರ್ತರೊಬ್ಬರ ಮನೆಗೆ ಬಿಳಿ ಸೀರೆ, ಹೂವುಗಳು ಮತ್ತು ಊದುಬತ್ತಿಯನ್ನು ಕಳುಹಿಸಲಾಗಿತ್ತು.

೩. ತೃಣಮೂಲ ಕಾಂಗ್ರೆಸ್ ಕಚೇರಿಯಲ್ಲಿ ಬಿಳಿ ಸೀರೆಗಳು ಪತ್ತೆಯಾಗಿರುವುದು ಪಕ್ಷದ ಹಿಂಸಾತ್ಮಕ ಕಾರ್ಯತಂತ್ರವನ್ನು ಬಯಲು ಮಾಡುತ್ತದೆ. ಈ ಪಕ್ಷವು ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ‘ದಹಶತ್’ (ಭಯೋತ್ಪಾದನೆ) ಯನ್ನೇ ಅತಿದೊಡ್ಡ ಆಯುಧವನ್ನಾಗಿ ಮಾಡಿಕೊಂಡಿತ್ತು.

೪. ಪಂಚಾಯತ್ ಚುನಾವಣೆಯ ಸಮಯದಲ್ಲಿಯೂ ಬಂಗಾಳದ ಮಹಿಳೆಯರು ಈ ಬಗ್ಗೆ ದೂರು ನೀಡಿದ್ದರು, ಮತದಾನ ಮಾಡದಂತೆ ತಡೆಯಲು ಜನರ ಮನೆಗಳ ಹೊರಗೆ ಅಂತ್ಯಸಂಸ್ಕಾರದ ವಸ್ತುಗಳನ್ನು ಎಸೆಯಲಾಗಿತ್ತು ಎಂದು ಆರೋಪಿಸಲಾಗಿತ್ತು.

ಸಂಪಾದಕೀಯ ನಿಲುವು

ತೃಣಮೂಲ ಕಾಂಗ್ರೆಸ್ ರಾಜಕೀಯ ಪಕ್ಷವಲ್ಲ, ಅದೊಂದು ಭಯೋತ್ಪಾದಕ ಸಂಘಟನೆ. ಆದ್ದರಿಂದ ಅದರ ಮೇಲೆ ನಿಷೇಧ ಹೇರಲೇಬೇಕು !