
ತಿರುವನಂತಪುರಂ (ಕೇರಳ) – ಕಾಂಗ್ರೆಸ್‌ನ ಹಿರಿಯ ನಾಯಕ ಚೆರಿಯನ್ ಫಿಲಿಪ್ ಅವರು ಪಕ್ಷದ ಶಾಸಕಾಂಗ ಪಕ್ಷದ ಸಭೆಯ ಮೊದಲು ಆಯ್ಕೆಯಾದ ಮಹಿಳಾ ಶಾಸಕಿ ಬಿಂದು ಕೃಷ್ಣ ಅವರನ್ನು ಬಲವಂತವಾಗಿ ಅಪ್ಪಿಕೊಳ್ಳಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಶಾಸಕಿ ಬಿಂದು ಕೃಷ್ಣ ಅವರು ತೀವ್ರ ಅಸ್ವಸ್ಥರಾದಂತೆ ಕಂಡುಬಂದರು.
೧. ಈ ಘಟನೆಯು ಕಾಂಗ್ರೆಸ್ ಪ್ರದೇಶ ಕಚೇರಿಯ ಪ್ರವೇಶ ದ್ವಾರದಲ್ಲಿ ನಡೆದಿದೆ. ೪೮ ವರ್ಷದ ಬಿಂದು ಕೃಷ್ಣ ಅವರು ಬಿಳಿ ಮತ್ತು ಹಳದಿ ಬಣ್ಣದ ಸೀರೆಯನ್ನು ಧರಿಸಿ ಸಭೆಯ ಸ್ಥಳಕ್ಕೆ ಆಗಮಿಸಿದ್ದರು.
೨. ಅಲ್ಲಿ ಉಪಸ್ಥಿತರಿದ್ದ ಮಾಧ್ಯಮ ಪ್ರತಿನಿಧಿಗಳು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಅವರು ಹಸ್ತಲಾಘವ ಮಾಡುತ್ತಿದ್ದರು.
೩. ಈ ವೇಳೆ ಅವರು ೭೧ ವರ್ಷದ ಚೆರಿಯನ್ ಫಿಲಿಪ್ ಅವರ ಬಳಿ ಬಂದರು. ಬಿಂದು ಅವರು ಹಸ್ತಲಾಘವಕ್ಕಾಗಿ ಕೈ ಚಾಚಿದಾಗ, ಫಿಲಿಪ್ ಅವರು ಅವರ ಕುತ್ತಿಗೆಗೆ ಕೈ ಹಾಕಿ ಅಪ್ಪಿಕೊಳ್ಳಲು ಪ್ರಯತ್ನಿಸಿದರು.
೪. ಈ ಸಂದರ್ಭದಲ್ಲಿ ಬಿಂದು ಅವರು ತಕ್ಷಣವೇ ಅವರ ಕೈಯನ್ನು ಕೆಳಗಿಳಿಸಿ ಅವರನ್ನು ಹಿಂದೆ ತಳ್ಳಿದರು; ಆದರೆ ಫಿಲಿಪ್ ಮತ್ತೆ ಎರಡನೇ ಬಾರಿಗೆ ಅದೇ ರೀತಿ ಪ್ರಯತ್ನಿಸಿದರು. ಇದಕ್ಕೆ ಬಿಂದು ಅವರು ಕೈಮುಗಿದು ಅಸಮಾಧಾನಗೊಂಡ ಸ್ಥಿತಿಯಲ್ಲಿಯೇ ಮುಂದೆ ಸಾಗಿದರು.
೫. ಈ ಪ್ರಕರಣದ ಬಗ್ಗೆ ಇದುವರೆಗೆ ಇಬ್ಬರೂ ನಾಯಕರು ಯಾವುದೇ ರೀತಿಯ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ; ಆದರೆ ಈ ಘಟನೆಯು ಕಾಂಗ್ರೆಸ್‌ನ ಆಂತರಿಕ ಶಿಸ್ತಿನ ಬಗ್ಗೆಯೇ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ.
ಫಿಲಿಪ್ ವಿರುದ್ಧ ತೀವ್ರ ಟೀಕೆ !
ಈ ಘಟನೆ ನಡೆಯುವಾಗ ಅಲ್ಲಿ ಅನೇಕ ಪತ್ರಕರ್ತರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ನಂತರ ಚೆರಿಯನ್ ಫಿಲಿಪ್ ವಿರುದ್ಧ ತೀವ್ರ ಟೀಕೆಗಳು ಕೇಳಿಬಂದಿವೆ. ಮಹಿಳಾ ಶಾಸಕಿಯ ವೈಯಕ್ತಿಕ ಗಡಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಅನೇಕರು ಆರೋಪಿಸಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!