ಭಾಜಪ ಕ್ರಮ ಕೈಗೊಳ್ಳಬಹುದೆಂಬ ಭೀತಿ!

ಕೋಲಕಾತಾ (ಬಂಗಾಳ) – ಬಂಗಾಳದಲ್ಲಿ ಭಾಜಪಕ್ಕೆ ಬಹುಮತ ಸಿಕ್ಕಿದ ನಂತರ ತೃಣಮೂಲ ಕಾಂಗ್ರೆಸ್ಸಿನ ಕೆಲವು ನಾಯಕರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಭಾಜಪ ತಮ್ಮ ವಿರುದ್ಧ ಕ್ರಮ ಜರುಗಿಸುವ ಭಯದಿಂದ ಅವರು ಈಗ ಭಾಜಪ ಸೇರಲು ಬಯಸುತ್ತಿದ್ದಾರೆ ಅಥವಾ ಭಾಜಪದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ ವಕ್ತಾರೆ ರಿಜು ದತ್ತಾ ಅವರು ಭಾಜಪ ನಾಯಕ ಶುಭೇಂದು ಅಧಿಕಾರಿ ಅವರ ಪದೇ ಪದೇ ಕ್ಷಮೆ ಕೋರುತ್ತಿದ್ದಾರೆ. ಭಾಜಪದಿಂದ ಈ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಶುಭೇಂದು ಅಧಿಕಾರಿ ಅವರ ಬಗ್ಗೆ ಆಕ್ಷೇಪಾರ್ಹ ಟಿಪ್ಪಣಿ ಮಾಡಿದ್ದ ದತ್ತಾ
ವಾಸ್ತವವಾಗಿ ರಿಜು ದತ್ತಾ ಅವರು ಕಳೆದ ಕೆಲವು ದಿನಗಳಲ್ಲಿ ಶುಭೇಂದು ಅಧಿಕಾರಿ ಅವರ ಬಗ್ಗೆ ಅವಹೇಳನಕಾರಿ ಟಿಪ್ಪಣಿ ಮಾಡಿದ್ದರು. ಅದರ ವಿಡಿಯೋ ಹೊರಬಂದಿತ್ತು. ಅವರಿಗೆ ಈಗ ತಮ್ಮ ಹೇಳಿಕೆಯ ಬಗ್ಗೆ ಪಶ್ಚಾತ್ತಾಪವಾಗುತ್ತಿದೆ; ಹಾಗಾಗಿಯೇ ಅವರು ಶುಭೇಂದು ಅಧಿಕಾರಿ ಅವರ ಕ್ಷಮೆ ಕೇಳುತ್ತಿದ್ದಾರೆ. ನಾನು ಒತ್ತಡದಿಂದಾಗಿ ಹಾಗೆ ಮಾಡಿದ್ದೆ. ಆ ಸಮಯದಲ್ಲಿ ನನ್ನ ಮತ್ತು ನನ್ನ ಕುಟುಂಬದ ಸುರಕ್ಷತೆಗಾಗಿ ಆ ವಿಷಯಗಳನ್ನು ಹೇಳಲು ನನಗೆ ಒತ್ತಾಯಿಸಲಾಗಿತ್ತು. ನಾನೊಬ್ಬ ಕೇವಲ ವಕ್ತಾರ, ನಾಯಕನಲ್ಲ, ಎಂದು ದತ್ತಾ ಸ್ಪಷ್ಟನೆ ನೀಡಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!