
ವಾಷಿಂಗ್ಟನ್ (ಅಮೆರಿಕ) – ಅಶ್ಲೀಲ ಸಾಹಿತ್ಯ ಮತ್ತು ಸಲಿಂಗಕಾಮಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರತಿಬಂಧಿಸಲು ಅಮೆರಿಕದಲ್ಲಿ ಹೊಸ ‘ಯೇಸು-ಕೇಂದ್ರಿತ’ (Jesus-centric) ‘ಕ್ರಿಶ್ಚಿಯನ್ ಮೊಬೈಲ್ ನೆಟ್‌ವರ್ಕ್’ ಒಂದನ್ನು ಆರಂಭಿಸಲಾಗುವುದು ಎಂದು ಹೇಳಲಾಗಿದೆ. ಈ ‘ನೆಟ್ ವರ್ಕ್’ ಅನ್ನು ಕ್ರಿಶ್ಚಿಯನ್ ಮೌಲ್ಯಗಳನ್ನು ಪಾಲಿಸುವ ಗ್ರಾಹಕರಿಗಾಗಿ ರೂಪಿಸಲಾಗಿದೆ. ಈ ಹೊಸ ‘ಟೆಲಿಕಾಂ’ ಸೇವೆಯ ಹೆಸರು ‘ಕಿಂಗ್ ಡಮ್ ಮೊಬೈಲ್’ ಎಂದಾಗಿದ್ದು, ಈ ‘ನೆಟ್ ವರ್ಕ್’ ಬಳಕೆದಾರರಿಗೆ ‘ಸ್ವಚ್ಛ ಮತ್ತು ಸುರಕ್ಷಿತ’ ಇಂಟರ್ನೆಟ್ ಅನುಭವ ನೀಡುವ ಭರವಸೆ ನೀಡುತ್ತಿದೆ. ಕಂಪನಿಯ ಪ್ರಕಾರ, ಕ್ರಿಶ್ಚಿಯನ್ ಧರ್ಮದ ಬೋಧನೆಗಳಿಗೆ ವಿರುದ್ಧವಾಗಿರುವ ಎಲ್ಲಾ ವಿಷಯಗಳನ್ನು ಈ ನೆಟ್ ವರ್ಕ್ ಪರಿಶೀಲಿಸುತ್ತದೆ (ಫಿಲ್ಟರ್ ಮಾಡುತ್ತದೆ).
ಈ ನಿರ್ಧಾರವು ಅಮೆರಿಕದಲ್ಲಿ ವಿವಾದಕ್ಕೆ ನಾಂದಿ ಹಾಡಿದೆ. ಅನೇಕರು ಇದನ್ನು ‘ಸೆನ್ಸಾರ್ ಶಿಪ್’ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಕರೆದಿದ್ದಾರೆ, ಆದರೆ ಇನ್ನೊಂದೆಡೆ ಸಂಪ್ರದಾಯವಾದಿ ಕ್ರಿಶ್ಚಿಯನ್ ಸಮುದಾಯದ ಕೆಲವು ಗುಂಪುಗಳು ಈ ಕ್ರಮವನ್ನು ಸ್ವಾಗತಿಸಿವೆ. ಪ್ರಸ್ತುತ ಈ ‘ನೆಟ್ ವರ್ಕ್’ ಅನ್ನು ಅಮೆರಿಕದ ಕೆಲವು ರಾಜ್ಯಗಳಲ್ಲಿ ಪ್ರಾರಂಭಿಸಲು ಯೋಜಿಸಲಾಗಿದ್ದು, ಭವಿಷ್ಯದಲ್ಲಿ ಇದನ್ನು ವಿಸ್ತರಿಸುವ ಸಾಧ್ಯತೆಯಿದೆ.
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ಮುಂಬಯಿ ಲೋಕಲ್ ನಲ್ಲಿನ ಮತಾಂತರ ಮತ್ತು ಢೋಂಗಿತನದ ಹಿಂದೆ ಅಡಗಿರುವ ಗಂಡಾಂತರವನ್ನು ನಿಯಂತ್ರಿಸಲು ವಿಶೇಷ ನಿಯಮಾವಳಿ ಸಿದ್ಧಪಡಿಸಲಾಗುವುದು !
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!