ಸತಾರಾದ ಹಿಂದುತ್ವವಾದಿ ಸಂಘಟನೆಗಳಿಂದ ಪೊಲೀಸರಿಗೆ ಮನವಿ

ಸತಾರಾ, ಮೇ 6 (ವಾರ್ತೆ) – ರಾಷ್ಟ್ರಗುರು ಸಮರ್ಥ ರಾಮದಾಸ ಸ್ವಾಮಿಗಳ ಬಗ್ಗೆ ಯಾವುದೇ ಐತಿಹಾಸಿಕ ಪುರಾವೆಗಳನ್ನು ನೀಡದೆ, ಲಭ್ಯವಿರುವ ಪುರಾವೆಗಳ ಬಗ್ಗೆ ದಾರಿತಪ್ಪಿಸುತ್ತಾ, ರಾಷ್ಟ್ರ ವಿರೋಧಿ ಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕೀಳು ಮಟ್ಟದ ಆರೋಪಗಳನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಾಷ್ಟ್ರಗುರು ಸಮರ್ಥ ರಾಮದಾಸ ಸ್ವಾಮಿಗಳ ಮೇಲೆ ಮಾಡಲಾಗುತ್ತಿರುವ ಆಧಾರರಹಿತ ಆರೋಪಗಳನ್ನು ತಕ್ಷಣವೇ ನಿಲ್ಲಿಸಬೇಕು. ಸಂಬಂಧಪಟ್ಟ ರಾಷ್ಟ್ರ ವಿರೋಧಿ ಮತ್ತು ಸಮಾಜದ ದಾರಿತಪ್ಪಿಸುವ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸತಾರಾದ ಹಿಂದುತ್ವವಾದಿ ಸಂಘಟನೆಗಳ ಪರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಪಿಂಗಳೆ ಅವರಿಗೆ ಮನವಿ ಪತ್ರದ ಮೂಲಕ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಸಮರ್ಥ ಸೇವಾ ಮಂಡಳದ ಕಾರ್ಯಾಧ್ಯಕ್ಷ ಪೂ. ಯೋಗೇಶಬುವಾ ರಾಮದಾಸಿ, ಸಮರ್ಥ ಭಕ್ತ ಶಹಾಜಿಬುವಾ ರಾಮದಾಸಿ, ಶ್ರೀಸಮರ್ಥ ಸದನದ ವ್ಯವಸ್ಥಾಪಕ ಸಮರ್ಥ ಭಕ್ತ ಪ್ರವೀಣ್ ಕುಲಕರ್ಣಿ, ಶ್ರೀ ಶಿವಪ್ರತಿಷ್ಠಾನ ಹಿಂದುಸ್ಥಾನ, ಹಿಂದೂ ಜನಜಾಗೃತಿ ಸಮಿತಿ, ಹಿಂದೂ ಮಹಾಸಭಾ, ಸನಾತನ ಸಂಸ್ಥೆ, ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್, ಮಹಾರಾಷ್ಟ್ರ ಮಂದಿರ ಮಹಾಸಂಘ, ಬಜರಂಗದಳ, ಶ್ರೀ ಸಂಪ್ರದಾಯ, ಇಸ್ಕಾನ್, ಹಿಂದೂ ವಿಧಿಜ್ಞ ಪರಿಷತ್ ಮುಂತಾದ ಹಿಂದುತ್ವವಾದಿ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಮನವಿಯಲ್ಲಿ,
1. ‘ಸಮರ್ಥ ರಾಮದಾಸ ಸ್ವಾಮಿ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ಪರಸ್ಪರ ಭೇಟಿಯಾಗಲೇ ಇಲ್ಲ’, ‘ರಾಮದಾಸ ಸ್ವಾಮಿಗಳು ಆದಿಲ್‌ಶಾಹಿಯ ಗೂಢಚಾರರಾಗಿದ್ದರು’ ಎಂಬಂತಹ ಹೊಲಸು ಆರೋಪಗಳನ್ನು ಮಾಡುವ ಮೂಲಕ ಸಮರ್ಥರ ಪರಿಶುದ್ಧವಾದ ಚಾರಿತ್ರ್ಯದ ಮೇಲೆ ಕೆಸರೆರಚುವ ಕೆಲಸ ಈ ರಾಷ್ಟ್ರ ವಿರೋಧಿ ಜನರು ದುಸ್ಸಾಹಸ ಮಾಡಿದ್ದಾರೆ.
2. ಇತ್ತೀಚಿನ ದಿನಗಳಲ್ಲಿ ಕೆಲವರು ಅರ್ಧಂಬರ್ಧ ಮಾಹಿತಿಯ ಆಧಾರದ ಮೇಲೆ ಮಾಡಿದ ಹೇಳಿಕೆಗಳನ್ನು ನೆಪವಾಗಿಸಿಕೊಂಡು ಮತ್ತೊಮ್ಮೆ ಸಮರ್ಥ ರಾಮದಾಸ ಸ್ವಾಮಿಗಳ ಮೇಲೆ ಕೆಸರೆರಚುವ ಕೆಲಸವನ್ನು ಈ ರಾಷ್ಟ್ರ ವಿರೋಧಿಗಳು ಪ್ರಾರಂಭಿಸಿದ್ದಾರೆ.
3. ಇದರಿಂದಾಗಿ ರಾಷ್ಟ್ರಗುರು ಸಮರ್ಥ ರಾಮದಾಸ ಸ್ವಾಮಿಗಳು ಹಾಗೂ ಇತರ ರಾಷ್ಟ್ರಪುರುಷರು, ಸಂತರ ಮೇಲೆ ಈ ರೀತಿ ಕೀಳು ಭಾಷೆಯಲ್ಲಿ ಟೀಕೆ ಮಾಡಿ ಸಮಾಜದಲ್ಲಿ ಬಿರುಕು ಮೂಡಿಸುವವರ ವಿರುದ್ಧ ಕಠಿಣ ಕ್ರಮವಾಗಬೇಕು. ಅಲ್ಲದೆ ಆದಷ್ಟು ಬೇಗ ಕಠಿಣ ಕಾನೂನು ರೂಪಿಸಬೇಕು.
4. ಇತ್ತೀಚಿನ ಕೆಲವು ವರ್ಷಗಳಲ್ಲಿ ಈ ಮಹಾಪುರುಷರನ್ನು ಜಾತಿಗಳಲ್ಲಿ ವಿಭಜಿಸಿ, ಅವರ ಕೀರ್ತಿಗೆ ಕುಂದು ತರುವ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಕೇವಲ ಜಾತೀಯ ದ್ವೇಷದಿಂದ ಈ ಕೆಲಸವಾಗುತ್ತಿಲ್ಲ, ನಮ್ಮ ದೇಶದ ಆದರ್ಶ ವ್ಯಕ್ತಿತ್ವಗಳ ಬಗ್ಗೆ ಸಮಾಜದ ಮನಸ್ಸಿನಲ್ಲಿ ಉದ್ದೇಶಪೂರ್ವಕವಾಗಿ ಕೆಟ್ಟ ವಿಚಾರಗಳನ್ನು ಹುಟ್ಟುಹಾಕಿ ಅವರನ್ನು ದಾರಿತಪ್ಪಿಸುವ ಮತ್ತು ಆ ಮೂಲಕ ನಮ್ಮ ದೇಶದ ವಿಚಾರಧಾರೆಯನ್ನು ನಾಶಮಾಡುವ ದೊಡ್ಡ ಸಂಚಾಗಿದೆ.
ಮನವಿಯಲ್ಲಿ ಮುಂದೆ: ಶ್ರೀ ಸಮರ್ಥ ರಾಮದಾಸ ಸ್ವಾಮಿಗಳು ಸಮಾಜದಲ್ಲಿ ದೇವರು, ದೇಶ ಮತ್ತು ಧರ್ಮದ ಬಗ್ಗೆ ನಿಷ್ಠೆ ಹೆಚ್ಚಿಸಲು ಅಸಾಧಾರಣ ಕಾರ್ಯ ಮಾಡಿದ್ದಾರೆ. ಸಮರ್ಥ ರಾಮದಾಸರು ಕಠಿಣ ತಪಸ್ಸು, ಅಪಾರ ಅಧ್ಯಯನ ಮತ್ತು ಪ್ರಖರ ಸಾಧನೆಯ ಬಲದಿಂದ ಸಮಾಜದಲ್ಲಿ ಜನಜಾಗೃತಿ ಮತ್ತು ಅಧ್ಯಾತ್ಮ ಪ್ರಸಾರದ ಕಾರ್ಯವನ್ನು ಮಾಡಿದರು. ಅವರು ಸಂಘಟನಾ ಕೌಶಲ್ಯದ ಆಧಾರದ ಮೇಲೆ ಧರ್ಮ ಮತ್ತು ರಾಷ್ಟ್ರದ ಪುನರುತ್ಥಾನದ ಕಾರ್ಯವನ್ನು ಮಾಡಿದರು. ಅದಕ್ಕಾಗಿ ಅವರು ದೇಶಾದ್ಯಂತ 1,100 ಮಠಗಳನ್ನು ಸ್ಥಾಪಿಸಿದರು. ಛತ್ರಪತಿ ಶಿವಾಜಿ ಮಹಾರಾಜರು ನಿರ್ಮಿಸಿದ ಹಿಂದವೀ ಸ್ವರಾಜ್ಯಕ್ಕೆ ಈ ಎಲ್ಲಾ ಕಾರ್ಯಗಳು ಪೂರಕವಾಗಿಯೇ ಪರಿಣಮಿಸಿದವು. ಅದಕ್ಕಾಗಿಯೇ ಈ ಇಬ್ಬರೂ ಮಹಾಪುರುಷರಿಗೆ ಪರಸ್ಪರರ ಬಗ್ಗೆ ಅತ್ಯಂತ ಆತ್ಮೀಯತೆ ಇತ್ತು. ಇದು ಸಮಕಾಲೀನ ಪುರಾವೆಗಳಿಂದ ಪದೇ ಪದೇ ಸಾಬೀತಾಗಿದೆ.
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ