ಬಂಗಾಳ: ಮುಸಲ್ಮಾನ ಬಹುಸಂಖ್ಯಾತ ಜಿಲ್ಲೆಗಳಲ್ಲಿ ಭಾಜಪದ ಹಿಂದೂ ಅಭ್ಯರ್ಥಿಗಳು ಜಯಶಾಲಿ !

  • ಕನಿಷ್ಠ 50 ಶೇಕಡಾ ಮುಸಲ್ಮಾನ ಜನಸಂಖ್ಯೆ ಇರುವ ಮುರ್ಷಿದಾಬಾದ್, ಮಾಲದಾ ಮತ್ತು ಉತ್ತರ ದಿನಾಜ್‌ಪುರ ಜಿಲ್ಲೆಗಳಲ್ಲಿ ಭಾಜಪದ 18 ಅಭ್ಯರ್ಥಿಗಳು ಜಯಶಾಲಿ

  • ಮುಸಲ್ಮಾನರ ಮತಗಳ ವಿಭಜನೆಯಾದದ್ದರ ಲಾಭವೂ ದೊರೆತಿದೆ

ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿ

ಕೋಲಕಾತಾ (ಬಂಗಾಳ) – 2011 ರ ಜನಗಣತಿಯ ಪ್ರಕಾರ ಶೇಕಡಾ 24.6 ರಷ್ಟು ಮುಸಲ್ಮಾನರ ಜನಸಂಖ್ಯೆಯನ್ನು ಹೊಂದಿದ್ದ ಬಂಗಾಳ ರಾಜ್ಯದಲ್ಲಿ ಇಂದು 15 ವರ್ಷಗಳ ನಂತರ ಅವರ ಜನಸಂಖ್ಯೆ ಎಷ್ಟಾಗಿರಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಳೆದ 15 ವರ್ಷಗಳಿಂದ ಮುಸಲ್ಮಾನರ ಓಲೈಕೆ ಮಾಡುವ ತೃಣಮೂಲ ಕಾಂಗ್ರೆಸ್‌ನ ಆಡಳಿತವಿತ್ತು. ಆದರೂ ಭಾಜಪ ರಾಜ್ಯದ ಪ್ರತಿಯೊಂದು ಕ್ಷೇತ್ರದಲ್ಲೂ ಹಿಂದೂ ಅಭ್ಯರ್ಥಿಗಳಿಗೇ ಟಿಕೆಟ್ ನೀಡಿತು. ಶೇಕಡಾ 50 ಕ್ಕಿಂತ ಹೆಚ್ಚು ಮುಸಲ್ಮಾನ ಜನಸಂಖ್ಯೆ ಇರುವ ಜಿಲ್ಲೆಗಳಲ್ಲಿಯೂ ಭಾಜಪ ಹಿಂದೂ ಅಭ್ಯರ್ಥಿಗಳಿಗೇ ಟಿಕೆಟ್ ನೀಡಿತು. ಇದರ ಲಾಭ ಪಕ್ಷಕ್ಕೆ ಆಗಿರುವುದು ಕಂಡುಬಂದಿದೆ. ಭಾಜಪದ ವಿಜೇತ ಅಭ್ಯರ್ಥಿ ಮತ್ತು ಪ್ರಮುಖ ನಾಯಕ ಸುವೇಂದು ಅಧಿಕಾರಿ ಅವರು ತಮ್ಮ ನಂದಿಗ್ರಾಮ ಕ್ಷೇತ್ರದ ಹಿಂದೂಗಳಿಗಾಗಿಯೇ ಕೆಲಸ ಮಾಡುವುದಾಗಿ ಸುಳಿವು ನೀಡಿದ್ದರೆ, ಇತರ ನೂತನ ಶಾಸಕರೂ ಅಲ್ಲಿನ ಹಿಂದೂಗಳಿಗಾಗಿ ಕೆಲಸ ಮಾಡಬೇಕು ಎಂದು ಜನರಿಗೆ ಅನಿಸತೊಡಗಿದೆ.

1. ಬಂಗಾಳ ರಾಜ್ಯದ ಮುರ್ಷಿದಾಬಾದ್, ಮಾಲದಾ ಮತ್ತು ಉತ್ತರ ದಿನಾಜ್‌ಪುರ ಜಿಲ್ಲೆಗಳಲ್ಲಿ 2011 ರ ಜನಗಣತಿಯ ಪ್ರಕಾರ ಮುಸಲ್ಮಾನರ ಜನಸಂಖ್ಯೆಯ ಪ್ರಮಾಣವು ಕ್ರಮವಾಗಿ ಶೇಕಡಾ 66, ಶೇಕಡಾ 51.27 ಮತ್ತು ಶೇಕಡಾ 49.92 ಆಗಿತ್ತು. ಇಂದು ಈ ಪ್ರಮಾಣ ಬಹಳಷ್ಟು ಹೆಚ್ಚಾಗಿರಬಹುದು.

2. ಆದಾಗ್ಯೂ ಭಾಜಪ ಈ ಒಟ್ಟುಗೂಡಿದ ಮತಗಳನ್ನು ನಿರ್ಲಕ್ಷಿಸಿ ಮೂರೂ ಜಿಲ್ಲೆಗಳ ಎಲ್ಲಾ 43 ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದೂ ಅಭ್ಯರ್ಥಿಗಳಿಗೇ ಟಿಕೆಟ್ ನೀಡಿತು.

3. ಈ 3 ಮುಸಲ್ಮಾನ ಬಹುಸಂಖ್ಯಾತ ಜಿಲ್ಲೆಗಳಲ್ಲಿ ಭಾಜಪ 18 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು, ಹಾಗೂ ತೃಣಮೂಲ ಕಾಂಗ್ರೆಸ್ ಕೇವಲ 20 ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು. 2021 ರ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ 35 ಸ್ಥಾನಗಳನ್ನು, ಮತ್ತು ಭಾಜಪ ಉಳಿದ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಭಾಜಪ ಮತ್ತು ತೃಣಮೂಲ ಹೊರತುಪಡಿಸಿ, ಕಾಂಗ್ರೆಸ್‌ಗೆ 2, ಹುಮಾಯುನ್ ಕಬೀರ್ ಅವರ ಆಮ್ ಜನತಾ ಉನ್ನಯನ್ ಪಕ್ಷಕ್ಕೆ 2 ಮತ್ತು ಸಿಪಿಐ(ಎಂ) ಗೆ ಒಂದು ಸ್ಥಾನ ಒಲಿದಿದೆ.

ಭಾಜಪದ ಯಶಸ್ಸಿನ ಹಿಂದಿನ ಕಾರಣಗಳು!

ಭಾಜಪಗೆ ಸಿಕ್ಕಿರುವ ಈ ಯಶಸ್ಸಿನ ಹಿಂದೆ ಹಲವು ಕಾರಣಗಳಿವೆ ಎಂದು ಹೇಳಲಾಗುತ್ತಿದೆ. ಅವುಗಳಲ್ಲಿ ಕೆಲವು ಪ್ರಮುಖ ಕಾರಣಗಳು ಈ ಕೆಳಗಿನಂತಿವೆ –

1. ಯಾವ ಯಾವ ಕ್ಷೇತ್ರಗಳಲ್ಲಿ ಮುಸಲ್ಮಾನರ ಮತಗಳು ಅಧಿಕಾರ ಬದಲಾವಣೆ ತರಲು ಸಮರ್ಥವಾಗಿವೆಯೋ, ಅಲ್ಲೆಲ್ಲಾ ಎಲ್ಲಾ ಪ್ರಮುಖ ಪಕ್ಷಗಳು ಮುಸಲ್ಮಾನ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದವು; ಆದರೆ ಭಾಜಪ ತನ್ನ ತತ್ವವನ್ನು ಬಿಡಲಿಲ್ಲ. ಇದರಿಂದಾಗಿ ಕೆಲವು ಕಡೆ ಮುಸಲ್ಮಾನರ ಮತಗಳ ವಿಭಜನೆಯಾಗಿ ಅದರ ನೇರ ಲಾಭ ಅಲ್ಲಿನ ಭಾಜಪಯ ಹಿಂದೂ ಅಭ್ಯರ್ಥಿಗೆ ಆಯಿತು.

2. ಮತದಾರರ ವಿಶೇಷ ಆಳವಾದ ಪರಿಶೀಲನಾ ಪ್ರಕ್ರಿಯೆಯಿಂದಾಗಿ ಲಕ್ಷಾಂತರ ನಕಲಿ ಮುಸಲ್ಮಾನ ಮತದಾರರ ಹೆಸರುಗಳನ್ನು ಕೈಬಿಡಲಾಯಿತು. ಅದರ ಲಾಭವೂ ಸಹಜವಾಗಿಯೇ ಭಾಜಪಗೆ ಆಯಿತು.

3. ಇದರ ಜೊತೆಗೆ ಹೆಚ್ಚಿನ ಕಡೆ ಹಿಂದೂ ಮತದಾರರ ಒಗ್ಗೂಡುವಿಕೆಯಾಗಿ ಅವರು ಭಾಜಪಗೆ ಮತ ಹಾಕಿದರು. ಅಂದಹಾಗೆ ಸ್ವಾತಂತ್ರ್ಯದ ನಂತರ ಬಂಗಾಳದಲ್ಲಿ ಅತಿ ಹೆಚ್ಚು ಮತದಾನ ಈ ಬಾರಿಯೇ ಆಗಿದೆ. ರಾಜ್ಯದಲ್ಲಿ ಇದುವರೆಗಿನ ಅತಿ ಹೆಚ್ಚು ಮತದಾನದ ಪ್ರಮಾಣವು ಸುಮಾರು ಶೇಕಡಾ 84 ರಷ್ಟಿತ್ತು, ಅದು ಈ ಬಾರಿ ಶೇಕಡಾ 92.47 ಕ್ಕೆ ಏರಿಕೆಯಾಗಿದೆ. ಇದರರ್ಥ ಎಲ್ಲಾ ಕಡೆಯ ಹಿಂದೂಗಳೂ ಸಂಘಟಿತರಾಗಿ ಮತದಾನ ಮಾಡಿದ್ದಾರೆ. ಅದರ ಲಾಭವನ್ನು ಭಾಜಪ ಈ ಮೂರು ಜಿಲ್ಲೆಗಳಲ್ಲೂ ಅನುಭವಿಸಿತು.

4. ಎಲ್ಲೆಲ್ಲಿ ಮುಸಲ್ಮಾನ ಮತದಾರರು ಅಪಾರ ಪ್ರಮಾಣದಲ್ಲಿದ್ದಾರೋ, ಅಲ್ಲೆಲ್ಲಾ ಎಲ್ಲಾ ಪ್ರಮುಖ ಪಕ್ಷಗಳು ಮುಸಲ್ಮಾನ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದವು. ಇದರಲ್ಲಿ ಭಾಜಪದ ಹಿಂದೂ ಅಭ್ಯರ್ಥಿ ಕೆಲವು ಕಡೆ ಮೂರನೇ ಮತ್ತು ಕೆಲವು ಕಡೆ ನಾಲ್ಕನೇ ಸ್ಥಾನಕ್ಕೂ ಹೋದರು. ಉದಾಹರಣೆಗೆ ಮಾಲದಾ ಜಿಲ್ಲೆಯ ಸುಜಾಪುರ ಕ್ಷೇತ್ರದ ಭಾಜಪ ಅಭ್ಯರ್ಥಿ ಅಭಿಜಿತ್ ರಜಕ್ ನಾಲ್ಕನೇ ಸ್ಥಾನಕ್ಕೆ ಹೋದರು. ಅವರಿಗೆ 20 ಸಾವಿರ ಮತಗಳು ಸಿಕ್ಕವು. ಇದೇ ರೀತಿ ಮುರ್ಷಿದಾಬಾದ್ ಜಿಲ್ಲೆಯ ಭಗವಾನ್‌ಗೋಲಾದಲ್ಲೂ ಆಯಿತು. ಅಲ್ಲಿ ಭಾಸ್ಕರ್ ಸರ್ಕಾರ್ ಎಂಬ ಭಾಜಪ ಅಭ್ಯರ್ಥಿಗೆ 23 ಸಾವಿರ ಮತಗಳು ಸಿಕ್ಕವು; ಆದರೂ ಅವರು ನಾಲ್ಕನೇ ಸ್ಥಾನಕ್ಕೆ ಹೋದರು. ಹಾಗೆಯೇ ರಾಣಿನಗರದಲ್ಲೂ ರಾಣಾಪ್ರತಾಪ್ ಸಿಂಗ್ ರಾಯ್ (22 ಸಾವಿರ ಮತಗಳು) ನಾಲ್ಕನೇ ಸ್ಥಾನದಲ್ಲಿದ್ದರು. ಡೊಮ್ಕಲ್ ಕ್ಷೇತ್ರದಲ್ಲಿ ನಂದಾದುಲಾಲ್ ಪಾಲ್ (13 ಸಾವಿರ ಮತಗಳು) ಎಂಬ ಭಾಜಪ ನಾಯಕ ನಾಲ್ಕನೇ ಸ್ಥಾನದಲ್ಲಿದ್ದರು.

ಅಂಕಿಅಂಶಗಳ ಮೂಲಕ ಅರ್ಥಮಾಡಿಕೊಳ್ಳಿ ಮುಸಲ್ಮಾನ ಬಹುಸಂಖ್ಯಾತ ಜಿಲ್ಲೆಗಳಲ್ಲಿ ಭಾಜಪ ಯಶಸ್ವಿಯಾಗಿದ್ದು ಹೇಗೆ ?

1. ಮುರ್ಷಿದಾಬಾದ್‌ನ 22 ಕ್ಷೇತ್ರಗಳಲ್ಲಿ ಭಾಜಪ 8 ಸ್ಥಾನಗಳಲ್ಲಿ ಆಯ್ಕೆಯಾಯಿತು. ಇವುಗಳಲ್ಲಿ ಮುರ್ಷಿದಾಬಾದ್ (31 ಸಾವಿರ), ಬುರ್ವಾನ್ (22 ಸಾವಿರ), ಬಹರಾಂಪುರ್ (17 ಸಾವಿರ), ಬೆಲ್ಡಾಂಗಾ (13 ಸಾವಿರ), ಕಾಂಡಿ (10 ಸಾವಿರ), ಜಂಗೀಪುರ್ (10 ಸಾವಿರ), ಖಾರಿಗ್ರಾಮ್ (9 ಸಾವಿರ) ಮತ್ತು ನಬಾಗ್ರಾಮ್ (6 ಸಾವಿರ) ಕ್ಷೇತ್ರಗಳು ಸೇರಿವೆ. ಆವರಣದಲ್ಲಿರುವ ಸಂಖ್ಯೆಯು ಕ್ಷೇತ್ರದ ಎರಡನೇ ಅಭ್ಯರ್ಥಿಯನ್ನು ಎಷ್ಟು ಮತಗಳಿಂದ ಸೋಲಿಸಲಾಯಿತು ಎಂಬುದನ್ನು ಸೂಚಿಸುತ್ತದೆ.

2. ಮಾಲ್ಡಾ ಜಿಲ್ಲೆಯ 12 ರ ಪೈಕಿ 6 ಕಡೆ ಭಾಜಪಗೆ ಯಶಸ್ಸು ಸಿಕ್ಕಿದೆ. ಇಂಗ್ಲಿಷ್ ಬಜಾರ್ (94 ಸಾವಿರ), ಹಬೀಬ್‌ಪುರ್ (78 ಸಾವಿರ), ಮಾಲದಾ (50 ಸಾವಿರ), ಬೈಷ್ಣಬ್‌ನಗರ್ (47 ಸಾವಿರ), ಗಾಝೋಲ್ (38 ಸಾವಿರ) ಮತ್ತು ಮಾಣಿಕ್‌ಚಕ್ (14 ಸಾವಿರ) ಕ್ಷೇತ್ರಗಳಲ್ಲಿ ಭಾಜಪ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

3. ಉತ್ತರ ದಿನಾಜ್‌ಪುರ ಜಿಲ್ಲೆಯಲ್ಲೂ 9 ರ ಪೈಕಿ 4 ಕಡೆ ಜನತೆ ಭಾಜಪಗೆ ಹಿಂದೂ ಅಭ್ಯರ್ಥಿಗೆ ಮೊದಲ ಆದ್ಯತೆ ನೀಡಿದ್ದಾರೆ. ಇದರಲ್ಲಿ ಕಲಿಯಾಗಂಜ್ (76 ಸಾವಿರ), ರಾಯ್‌ಗಂಜ್ (58 ಸಾವಿರ), ಕರಂದಿಘಿ (20 ಸಾವಿರ) ಮತ್ತು ಹೇಮತಾಬಾದ್ (12 ಸಾವಿರ) ಕ್ಷೇತ್ರಗಳು ಸೇರಿವೆ.

ಸಂಪಾದಕೀಯ ನಿಲುವು

ಬಂಗಾಳದಂತಹ ಮುಸಲ್ಮಾನ ಬಹುಸಂಖ್ಯಾತ ರಾಜ್ಯದಲ್ಲಿ ಹಿಂದೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಭಾಜಪ ಒಂದು ರೀತಿಯಲ್ಲಿ ಹಿಂದುತ್ವಕ್ಕೆ ತನ್ನ ಬಹಿರಂಗ ಬೆಂಬಲವಿದೆ ಎಂಬುದನ್ನು ಪರೋಕ್ಷವಾಗಿ ತೋರಿಸಿಕೊಟ್ಟಿದೆ. ಈಗ ಕಾಶ್ಮೀರದಂತೆ ಕೈತಪ್ಪಿ ಹೋಗುವ ಸ್ಥಿತಿಯಲ್ಲಿರುವ ಬಂಗಾಳವನ್ನು ಮತ್ತೆ 'ಹಿಂದೂಗಳ ಬಂಗಾಳ'ವನ್ನಾಗಿ ಮಾಡಲು ಭಾಜಪ ಮುಂದಾಗಬೇಕು ಎಂಬ ನಿರೀಕ್ಷೆ ಇದೆ! ಬಂಗಾಳದ ಹಿಂದೂ ಜನರ ತೀರ್ಪನ್ನು ಗೌರವಿಸಲಾಗುವುದು ಎಂದು ಬಂಗಾಳ ಮಾತ್ರವಲ್ಲ, ಭಾರತದಾದ್ಯಂತ ಇರುವ ಹಿಂದೂ ಸಮಾಜವು ಭಾವಿಸುತ್ತದೆ!