ನೇಪಾಳದ ಮೂಲಕ ಭಾರತಕ್ಕೆ ನುಗ್ಗಲು ಯತ್ನಿಸುತ್ತಿದ್ದ ಚೀನಾ ಪ್ರಜೆ ಬಂಧನ!

ನವದೆಹಲಿ – ನೇಪಾಳದ ಮೂಲಕ ಭಾರತಕ್ಕೆ ನುಗ್ಗಲು ಯತ್ನಿಸುತ್ತಿದ್ದ ಚೀನಾದ ಪ್ರಜೆಯನ್ನು ಗಡಿ ಭದ್ರತಾ ಪಡೆಯ (BSF) ಸೈನಿಕರು ಬಂಧಿಸಿದ್ದಾರೆ. ಬಂಧಿತನನ್ನು ಚೀನಾದ ಹುನಾನ್ ಪ್ರಾಂತ್ಯದ ನಿವಾಸಿ ಝೌ ಹುವಾನ್ (41 ವರ್ಷ) ಎಂದು ಗುರುತಿಸಲಾಗಿದೆ.

ಹುವಾನ್ ನೇಪಾಳದ ವಿರಾಟನಗರದಿಂದ ನೇಪಾಳಿ ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಜೋಗ್ಬನಿ ತಪಾಸಣಾ ಚೌಕಿಗೆ ಬಂದಿದ್ದನು. ಆತನ ಚಲನವಲನಗಳ ಬಗ್ಗೆ ಅನುಮಾನಗೊಂಡ ಸೈನಿಕರು ಆತನನ್ನು ತಡೆದು ನಿಲ್ಲಿಸಿದರು. ಪ್ರಾಥಮಿಕ ತನಿಖೆಯಲ್ಲಿ ಆತನ ಬಳಿ ಭಾರತಕ್ಕೆ ಪ್ರವೇಶಿಸಲು ಅಗತ್ಯವಿರುವ ಯಾವುದೇ ಮಾನ್ಯ ವೀಸಾ (ಒಂದು ದೇಶಕ್ಕೆ ಪ್ರವೇಶಿಸಲು, ದೇಶವನ್ನು ಬಿಟ್ಟು ಹೋಗಲು ಅಥವಾ ಒಂದು ದೇಶದ ಮೂಲಕ ಪ್ರಯಾಣಿಸಲು ಅನುಮತಿ ನೀಡುವ ಅಧಿಕೃತ ದಾಖಲೆ ಅಥವಾ ಮುದ್ರೆ), ಪಾಸ್‌ಪೋರ್ಟ್ ಅಥವಾ ಇತರ ಯಾವುದೇ ದಾಖಲೆಗಳು ಕಂಡುಬಂದಿಲ್ಲ. ಇದರಿಂದ ಆತ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿರುವುದು ದೃಢಪಟ್ಟಿದೆ. ಹುವಾನ್ ಎಷ್ಟು ದಿನಗಳಿಂದ ನೇಪಾಳದಲ್ಲಿದ್ದ? ಮತ್ತು ಭಾರತಕ್ಕೆ ಬರುವ ಹಿಂದೆ ಆತನ ಉದ್ದೇಶವೇನಿತ್ತು? ಎಂಬ ಬಗ್ಗೆ ಈಗ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸುತ್ತಿವೆ. ಈ ಘಟನೆಯ ನಂತರ ಭದ್ರತಾ ಸಂಸ್ಥೆಗಳು ಮತ್ತಷ್ಟು ಜಾಗರೂಕವಾಗಿವೆ.

ಸಂಪಾದಕೀಯ ನಿಲುವು

ಚೀನಾ ನುಸುಳುಕೋರರ ಕುತಂತ್ರವನ್ನು ತಿಳಿಯಿರಿ! ಚೀನಾ ಮತ್ತು ನೇಪಾಳದ ನಾಗರಿಕರು ದೈಹಿಕವಾಗಿ ಸಾಕಷ್ಟು ಸಾಮ್ಯತೆ ಇರುವುದರ ದುರುಪಯೋಗಪಡಿಸಿಕೊಂಡು ಚೀನಾ ನುಸುಳುಕೋರರು ಇಂತಹ ಭಾರತ ವಿರೋಧಿ ಕುತಂತ್ರ ಮಾಡುತ್ತಾರೆ. ಇಂತಹ ಘಟನೆಗಳನ್ನು ತಡೆಯಲು ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು!