ಭೂತಾನ್‌ನ ವೃತ್ತಪತ್ರಿಕೆಗಳಿಂದ ಭಾರತದ ಮೇಲೆ ಆರೋಪ

ಥಿಂಪು (ಭೂತಾನ್) – ಭಾರತ ಸರಕಾರದ ತೈಲ ಕಂಪನಿಗಳು ಭೂತಾನ್, ಹಾಗೂ ನೇಪಾಳಕ್ಕೆ ದುಬಾರಿ ಬೆಲೆಗೆ ತೈಲ ಮಾರಾಟ ಮಾಡುತ್ತಿವೆ ಎಂದು ಆರೋಪಿಸಲಾಗಿದೆ. ಭೂತಾನ್‌ನಲ್ಲಿ ಮಾರ್ಚ್ ೧೬ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ರಾಜಧಾನಿ ಥಿಂಪುನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ೬೩.೨೯ ನಗುಲ್ಟ್ರಮ್‌ನಿಂದ (ಭೂತಾನ್ ಕರೆನ್ಸಿ) ೧೦೨.೪೦ ಕ್ಕೆ ತಲುಪಿದ್ದರೆ, ಡೀಸೆಲ್ ೭೦ ರಿಂದ ೯೮ ನಗುಲ್ಟ್ರಮ್‌ಗೆ ಏರಿಕೆಯಾಗಿದೆ. ಭೂತಾನ್ ಸರಕಾರದ ರಿಯಾಯಿತಿಯ ನಂತರವೂ ಆಗಿರುವ ಈ ಬೆಲೆ ಏರಿಕೆಗೆ ತಜ್ಞರು ಭಾರತದತ್ತ ಬೆರಳು ತೋರಿಸಿದ್ದಾರೆ. ‘ದಿ ಭೂತಾನೀಸ್’ ಎಂಬ ವೃತ್ತಪತ್ರಿಕೆಯು ಈ ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುವುದಾಗಿ ದಾವೆ ಮಾಡಿದೆ.
ವೃತ್ತಪತ್ರಿಕೆಯ ವರದಿಯ ಪ್ರಕಾರ ಇಂಧನ ಬೆಲೆ ಏರಿಕೆಗೆ ಇರಾನ್-ಅಮೆರಿಕ ಯುದ್ಧ ಕಾರಣ ಎಂದು ಹೇಳಲಾಗುತ್ತಿದ್ದರೂ, ಅದು ಒಂದೇ ಕಾರಣ ಎಂದು ಅನಿಸುತ್ತಿಲ್ಲ. ಭೂತಾನ್‌ನ ವ್ಯಾಪಾರ ಇಲಾಖೆಯ ಬಳಿ ಭಾರತದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂ ಕಂಪನಿಗಳಿಂದ ಆಗುವ ಪೂರೈಕೆಯ ಬಗ್ಗೆ ಬಹಳ ಕಡಿಮೆ ಮಾಹಿತಿಯಿದೆ. ಇಲಾಖೆಯ ಬಳಿ ಲಭ್ಯವಿರುವ ವಿವರಗಳಲ್ಲಿ ಕೇವಲ ಇಂಧನದ ಬೆಲೆ ಮತ್ತು ಅದರ ಸಾಗಾಟ ಶುಲ್ಕದ ಬಗ್ಗೆ ಮಾತ್ರ ಉಲ್ಲೇಖವಿದೆ. ಇದರಿಂದಾಗಿ ಭಾರತದಿಂದ ನಡೆಯುವ ತೈಲ ಮಾರಾಟದ ಬೆಲೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation