ಭಾರತದ ಗುಪ್ತಚರ ಸಂಸ್ಥೆ 'ರಾ'ದ ಮಾಜಿ ಏಜೆಂಟ್ ಲಕ್ಕಿ ಬಿಷ್ಟ ಅವರಿಂದ ಭಾಜಪ ಬಳಿ ಆಗ್ರಹ

ನವ ದೆಹಲಿ – ಭಾಜಪ ಬಂಗಾಳದಲ್ಲಿ ಸಚಿವ ಸಂಪುಟಕ್ಕಾಗಿ ಸಚಿವರ ಪಟ್ಟಿಯನ್ನು ಸಿದ್ಧಪಡಿಸುವ ಮೊದಲು ಜಿಹಾದಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಇದರಿಂದ ಕಳೆದ ೧೪ ವರ್ಷಗಳಿಂದ ಬಂಗಾಳವನ್ನು ಹಿಂಸೆಯಲ್ಲಿ ಬೇಯಿಸಿದವರಿಗೆ ಶಿಕ್ಷೆ ನೀಡಬಹುದು ಎಂದು ಭಾರತದ ಗುಪ್ತಚರ ಸಂಸ್ಥೆ ‘ರಾ’ದ ಮಾಜಿ ಏಜೆಂಟ್ ಲಕ್ಕಿ ಬಿಷ್ಟ ಅವರು ಭಾಜಪವನ್ನು ಆಗ್ರಹಿಸಿದ್ದಾರೆ.
ಲಕ್ಕಿ ಬಿಷ್ಟ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಬಂಗಾಳದಲ್ಲಿ ಶೀಘ್ರದಲ್ಲೇ ಹೊಸ ಸರಕಾರ ಅಸ್ತಿತ್ವಕ್ಕೆ ಬರಲಿದೆ. ಜನರು ನಿಮಗೆ (ಭಾಜಪಕ್ಕೆ) ಅಪಾರ ಪ್ರೀತಿಯನ್ನು ನೀಡಿ, ಪೂರ್ಣ ಬಹುಮತದೊಂದಿಗೆ ನಿಮ್ಮನ್ನು ಆರಿಸಿ ತಂದಿದ್ದಾರೆ. ಶೀಘ್ರದಲ್ಲೇ ನಿಮ್ಮ ಸಚಿವ ಸಂಪುಟದ ಪಟ್ಟಿ ಸಿದ್ಧವಾಗಲಿದೆ; ಆದರೆ ನನ್ನದೊಂದು ವಿನಂತಿಯಿದೆ. ಸಚಿವರ ಪಟ್ಟಿಯನ್ನು ಮಾಡುವ ಮೊದಲು ಆ ಜಿಹಾದಿಗಳ ಪಟ್ಟಿಯನ್ನು ಖಂಡಿತವಾಗಿ ಸಿದ್ಧಪಡಿಸಿ, ಯಾರ ಕೃತ್ಯಗಳಿಂದಾಗಿ ೧೪ ವರ್ಷ ೩೪೯ ದಿನಗಳ ಕಾಲ ಇಡೀ ಬಂಗಾಳವು ಬೆಂಕಿಯಲ್ಲಿ ಬೇಯುವಂತಾಯಿತು. ಈ ಜಿಹಾದಿಗಳು ನಿರಪರಾಧಿ ಜನರನ್ನು ಮನೆಯಿಂದ ಹೊರಗೆ ಎಳೆದು ತಂದು ಗುಂಡಿಕ್ಕಿ ಕೊಂದಿದ್ದಾರೆ ಮತ್ತು ಮಹಿಳೆಯರ ಮೇಲೆ ಬಲಾತ್ಕಾರ ಮಾಡಿದ್ದಾರೆ. ಹೊಸ ಸರಕಾರಕ್ಕೆ ನನ್ನದೊಂದು ವಿನಂತಿಯಿದೆ, ಆ ಜಿಹಾದಿಗಳನ್ನು ಅವರ ಯೋಗ್ಯ ಸ್ಥಾನಕ್ಕೆ (ಕಾರಾಗೃಹಕ್ಕೆ) ಖಂಡಿತವಾಗಿಯೂ ತಲುಪಿಸಿ, ಎಂದು ಮನವಿ ಮಾಡಿದ್ದಾರೆ.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ