Pakistani Employees Fired : ಸಂಯುಕ್ತ ಅರಬ್ ಎಮಿರೇಟ್ಸ್‌: ೧೫ ಪಾಕಿಸ್ತಾನಿ ಉದ್ಯೋಗಿಗಳಿಗೆ ೪೮ ಗಂಟೆಗಳ ಒಳಗೆ ದೇಶ ತೊರೆಯುವಂತೆ ಆದೇಶ !

(ಇಮಿಗ್ರೇಷನ್ ಇಲಾಖೆ ಎಂದರೆ ಯಾವುದೇ ದೇಶದ ಗಡಿಗಳನ್ನು ಮತ್ತು ಅಲ್ಲಿಗೆ ಬರುವ-ಹೋಗುವ ಜನರ ಮೇಲೆ ನಿಯಂತ್ರಣ ಹೊಂದಿರುವ ಮುಖ್ಯ ಕೇಂದ್ರವಾಗಿದೆ.)

AI ನಿರ್ಮಿತ ಚಿತ್ರ

ಅಬುಧಾಬಿ: ಸಂಯುಕ್ತ ಅರಬ್ ಎಮಿರೇಟ್ಸ್‌ನ ‘ಇಮಿಗ್ರೇಷನ್ ಇಲಾಖೆ’ಯು ೧೫ ಪಾಕಿಸ್ತಾನಿ ಉದ್ಯೋಗಿಗಳಿಗೆ ೪೮ ಗಂಟೆಗಳ ಒಳಗೆ ದೇಶವನ್ನು ತೊರೆಯುವಂತೆ ಆದೇಶ ನೀಡಿದೆ. ಸಂಯುಕ್ತ ಅರಬ್ ಎಮಿರೇಟ್ಸ್ ನಲ್ಲಿ ಅಬುಧಾಬಿಯ ‘ಎತಿಹಾದ್ ಏರ್ವೇಸ್’ ವಿಮಾನಯಾನ ಸಂಸ್ಥೆಯು ಈ ಉದ್ಯೋಗಿಗಳನ್ನು ಹಠಾತ್ತಾಗಿ ಕೆಲಸದಿಂದ ವಜಾಗೊಳಿಸಿತ್ತು. ವಿಚಿತ್ರವೆಂದರೆ, ಈ ಪ್ರಕ್ರಿಯೆಯು ವಾಡಿಕೆಯಂತೆ ಸಂಸ್ಥೆಯ ‘ಮಾನವ ಸಂಪನ್ಮೂಲ ಇಲಾಖೆ’ (HR) ಮೂಲಕ ನಡೆಯುವ ಬದಲು, ನೇರವಾಗಿ ಕೇಂದ್ರ ಇಮಿಗ್ರೇಷನ್ ಇಲಾಖೆಯಿಂದಲೇ ನಡೆದಿದೆ. ಇಮಿಗ್ರೇಷನ್ ಇಲಾಖೆಯು ಅವರನ್ನು ಅಧಿಕೃತವಾಗಿ ೪೮ ಗಂಟೆಗಳ ಒಳಗೆ ದೇಶ ಬಿಟ್ಟು ಹೋಗುವಂತೆ ಆದೇಶ ನೀಡಿದೆ.