ಜಿಹಾದಿಗಳ ಮಾನಸಿಕತೆಯನ್ನು ಮಟ್ಟಹಾಕಲು ಉಪಸ್ಥಿತರ ನಿರ್ಧಾರ !

‘ಬೇಟಿ ಸುರಕ್ಷಿತ, ರಾಷ್ಟ್ರ ಸುರಕ್ಷಿತ’ ಈ ಅಭಿಯಾನದ ಲೋಗೋವನ್ನು ಕೈಯಲ್ಲಿ ಹಿಡಿದು ಅಭಿಯಾನಕ್ಕೆ ಚಾಲನೆ ನೀಡುತ್ತಿರುವಾಗ ಎಡಗಡೆಯಿಂದ ಮಹಾರಾಷ್ಟ್ರ ರಾಜ್ಯದ ಸಂಸದೆ ಪ್ರಾ. ಡಾ. (ಸೌ.) ಮೇಧಾ ಕುಲಕರ್ಣಿ, ಸೌ. ಶೆಫಾಲಿ ವೈದ್ಯ ಮತ್ತು ಸಮಿತಿಯ ಶ್ರೀ. ರಮೇಶ ಶಿಂದೆ !

ಪುಣೆ, ಮೇ ೪ (ಸುದ್ದಿ) – ಕೇಂದ್ರ ಸರಕಾರವು ಸಂಸತ್ತಿನಲ್ಲಿ ಮಂಡಿಸಿದ ‘ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ’ದ (ಎನ್.ಸಿ.ಆರ್.ಬಿ. ಅಂದರೆ ‘ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ’) ವರದಿಯ ಪ್ರಕಾರ, ದೇಶಾದ್ಯಂತ ೨೦೧೬ ರಿಂದ ೨೦೨೧ ರ ಅವಧಿಯಲ್ಲಿ ೪ ಲಕ್ಷದ ೬೫ ಸಾವಿರಕ್ಕೂ ಹೆಚ್ಚು ಹುಡುಗಿಯರು ನಾಪತ್ತೆಯಾಗಿದ್ದಾರೆ. ಮಹಾರಾಷ್ಟ್ರದಿಂದ ನಾಪತ್ತೆಯಾಗುತ್ತಿರುವ ಹುಡುಗಿಯರ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ವರದಿಯಿಂದ ಕಂಡುಬರುತ್ತಿದೆ. ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ನಾಪತ್ತೆಯಾಗುತ್ತಿರುವ ಹುಡುಗಿಯರ ಸುರಕ್ಷತೆಗಾಗಿ ‘ಬೇಟಿ ಸುರಕ್ಷಿತ, ರಾಷ್ಟ್ರ ಸುರಕ್ಷಿತ’ ಎಂಬ ರಾಷ್ಟ್ರವ್ಯಾಪಿ ಅಭಿಯಾನವನ್ನು ಪುಣೆಯಲ್ಲಿ ಆರಂಭಿಸಲಾಯಿತು. ‘ಕಾರ್ಪೊರೇಟ್ ಜಿಹಾದ್ – ಖಚಿತ ಸತ್ಯವೇನು ?’ ಎಂಬ ವಿಶೇಷ ಸಂವಾದದಲ್ಲಿ ಗಣ್ಯ ವಕ್ತಾರರು ಅಭಿಯಾನದ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಶಿವಾಜಿನಗರದ ‘ಮಾಡರ್ನ್ ಕಾಲೇಜ್ ಆಡಿಟೋರಿಯಂ’ನಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಸ್ತರಗಳ ಗಣ್ಯರೊಂದಿಗೆ ೫೫೦ ಕ್ಕೂ ಹೆಚ್ಚು ಪುಣೆ ನಗರದ ನಾಗರಿಕರು ಭಾಗವಹಿಸಿದ್ದರು. ಉಪಸ್ಥಿತರಿದ್ದ ಅನೇಕ ಧರ್ಮಪ್ರೇಮಿಗಳು ಸಂದೇಹ ನಿವಾರಣೆ ಮಾಡಿಕೊಂಡರು ಮತ್ತು ಪ್ರಶ್ನೋತ್ತರ ಅಧಿವೇಶನದಲ್ಲಿ ಪಾಲ್ಗೊಂಡರು.

ಕಾರ್ಪೊರೇಟ ಜಿಹಾದ್ ವಿಷಯವನ್ನು ಸಂಸತ್ತಿನಲ್ಲಿ ಮಂಡಿಸಿ ಸಂಸ್ಥೆಗಳಿಗೆ ನಿಯಮ-ನಿಬಂಧನೆಗಳನ್ನು ತರಲಾಗುವುದು ! – ಪ್ರಾ. ಡಾ. (ಸೌ.) ಮೇಧಾ ಕುಲಕರ್ಣಿ, ಸಂಸದರು, ಭಾಜಪ

ಪ್ರಾ. ಡಾ. (ಸೌ.) ಮೇಧಾ ಕುಲಕರ್ಣಿ

ಈಗ ‘ಮಾಡು ಇಲ್ಲವೇ ಮಡಿ’ ಎನ್ನುವ ಸಮಯ ಬಂದಿದ್ದು, ಹಿಂದೂಗಳು ಜಾಗೃತವಾಗುವುದು ಅಗತ್ಯವಾಗಿದೆ. ಇಂದು ನಮ್ಮ ಮುಂದೆ ಇರುವ ಸಂಕಷ್ಟವು ಕೇವಲ ‘ಕಾರ್ಪೊರೇಟ್’ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲಿ ಅವಕಾಶ ಸಿಗುತ್ತದೆಯೋ ಅಲ್ಲಿ ಭಾರತದ ದೇಶವನ್ನು ಒಳಗಿನಿಂದಲೇ ಕೊರೆಯುವ ಮತ್ತು ದೇಶವನ್ನು ಹರಿದು ಹಂಚುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಎಲ್ಲಾ ಧರ್ಮಗಳಲ್ಲಿ ಹಿಂದೂ ಧರ್ಮವು ವಿಭಿನ್ನವಾಗಿದೆ ಮತ್ತು ಅದು ಶ್ರೇಷ್ಠವಾಗಿದೆ. ನಮಗೆ ನಮ್ಮ ಧರ್ಮ, ಸಂಸ್ಕೃತಿ ಮತ್ತು ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಕೇವಲ ಆಲೋಚನೆ ಮಾಡಿದರೆ ಸಾಲದು, ಬದಲಿಗೆ ಕೃತಿ ಮಾಡುವ ಸಮಯ ಬಂದಿದೆ. ‘ಕಾರ್ಪೊರೇಟ್ ಜಿಹಾದ್’ ವಿಷಯವನ್ನು ನಾನು ಮುಂದಿನ ದಿನಗಳಲ್ಲಿ ಸಂಸತ್ತಿನಲ್ಲಿ ಮಂಡಿಸಲಿದ್ದೇನೆ”, ಎಂದು ಹೇಳಿದರು.
ನಾವು ನಮ್ಮ ಧರ್ಮವನ್ನು ಉಳಿಸಿಕೊಳ್ಳಬೇಕಾದರೆ ಪ್ರತಿದಿನ ದೇವಸ್ಥಾನಕ್ಕೆ ಹೋಗಬೇಕು. ನಮ್ಮ ಪ್ರತಿಯೊಂದು ದೇವತೆಗಳ ಕೈಯಲ್ಲಿ ಶಸ್ತ್ರವಿದೆ. ಆದ್ದರಿಂದ ಹಿಂದೂಗಳು ಈಗ ಬುದ್ಧಿಯ ಶಸ್ತ್ರವನ್ನು ಬಳಸಬೇಕು. ಮಾಡು ಇಲ್ಲವೇ ಮಡಿ ಎನ್ನುವಂತಹ ಸಮಯ ಎಲ್ಲರ ಮೇಲೆ ಬಂದಿದೆ. ನಾವೆಲ್ಲರೂ ಸದೃಢರಾಗಿ ಮತ್ತು ಸಂಘಟಿತರಾಗೋಣ, ಮೃದು ಧೋರಣೆಗಳನ್ನು ಕೈಬಿಡೋಣ. ‘ಯಾವುದೇ ಖರೀದಿಯನ್ನು ಹಿಂದೂಗಳಿಂದಲೇ ಮಾಡುತ್ತೇವೆ’ ಎಂದು ನಾವೆಲ್ಲರೂ ನಿಶ್ಚಯಿಸೋಣ.

ಕಾರ್ಪೊರೇಟ್ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಜಿಹಾದ್ ಅನ್ನು ತಡೆಯಲು, ಈ ಸಂಸ್ಥೆಗಳು ಭಾರತಕ್ಕೆ ಬರುವ ಮೊದಲೇ ಅವುಗಳ ಮೇಲೆ ಕೆಲವು ನಿರ್ಬಂಧಗಳು ಮತ್ತು ಷರತ್ತುಗಳನ್ನು ಅನ್ವಯಿಸಲು ಸಾಧ್ಯವೇ ಎಂಬ ಬಗ್ಗೆ ಚಿಂತನೆ ನಡೆಯುತ್ತಿದೆ. ಜಿಹಾದ್ ನ ಹೆಚ್ಚುತ್ತಿರುವ ಘಟನೆಗಳನ್ನು ತಡೆಯಲು ಸಕ್ರಿಯರಾಗುವ ಅವಶ್ಯಕತೆಯಿದೆ. – ಪ್ರಾ. ಡಾ. (ಸೌ.) ಮೇಧಾ ಕುಲಕರ್ಣಿ

‘ಆಪರೇಷನ್ ದುರ್ಗಾ’ ಎಂಬುದು ಹರಿಯಾಣ ಸರಕಾರವು ಮಹಿಳೆಯರ ಸುರಕ್ಷತೆಗಾಗಿ ಮತ್ತು ಚುಡಾಯಿಸುವುದನ್ನು ತಡೆಯಲು ಆರಂಭಿಸಿರುವ ವಿಶೇಷ ಪೊಲೀಸ್ ಅಭಿಯಾನವಾಗಿದೆ. ಅದೇ ರೀತಿ ‘ಹಿಂದೂ ಜನಜಾಗೃತಿ ಸಮಿತಿ’ಯ ಸಹಯೋಗದೊಂದಿಗೆ ಇಡೀ ಮಹಾರಾಷ್ಟ್ರದಾದ್ಯಂತ ‘ಆಪರೇಷನ್ ದುರ್ಗಾ’ ಜಾರಿಗೊಳಿಸೋಣ ಎಂಬ ಆಲೋಚನೆಯನ್ನು ಅವರು ಮಂಡಿಸಿದರು. ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದಿಂದ ಆಶಾದಾಯಕ ಕಿರಣ ಮೂಡಿದೆ. – ಪ್ರಾ. ಡಾ. (ಸೌ.) ಮೇಧಾ ಕುಲಕರ್ಣಿ

ಯಾರು ಧರ್ಮದ ಕಾರ್ಯವನ್ನು ಮಾಡುತ್ತಾರೋ, ಧರ್ಮವು ಅವರನ್ನು ರಕ್ಷಿಸುತ್ತದೆ ! – ಸೌ. ಶೆಫಾಲಿ ವೈದ್ಯ, ಪ್ರಸಿದ್ಧ ವಾಗ್ಮಿ ಮತ್ತು ಲೇಖಕಿ

ಸೌ. ಶೆಫಾಲಿ ವೈದ್ಯ

ಹಿಂದೂ ಬಹುಸಂಖ್ಯಾತ ಪ್ರದೇಶದಲ್ಲಿ ನಾವು ‘ಕಾರ್ಪೊರೇಟ್ ಜಿಹಾದ್’ ಬಗ್ಗೆ ಮಾತನಾಡಬೇಕಾಗಿ ಬಂದಿರುವುದು ನಾಚಿಕೆಗೇಡಿನ ಸಂಗತಿ. ಕಾರ್ಪೊರೇಟ್ ಜಿಹಾದ್ ಎಂದರೆ ಇತರ ಧರ್ಮೀಯರಿಗೆ ರಿಯಾಯಿತಿ ಮತ್ತು ಹಿಂದೂ ಧರ್ಮೀಯರಿಗೆ ನಿಯಮಗಳ ಹೆಸರಿನಲ್ಲಿ ನಿರ್ಬಂಧ ಹೇರುವುದು ! ಹಿಂದೂಗಳು ಇಂದು ಪ್ರತಿರೋಧ ತೋರುತ್ತಿಲ್ಲ, ಕೇವಲ ಸಹಿಸುತ್ತಿದ್ದಾರೆ, ಅದಕ್ಕಾಗಿಯೇ ಅಪರಾಧಗಳ ಈ ಸರಣಿ ಹೆಚ್ಚುತ್ತಾ ಸಾಗಿದೆ. ಇದಕ್ಕೆ ‘ಬ್ರೋಕನ್ ವಿಂಡೋ ಥಿಯರಿ’ ಅನ್ವಯವಾಗುತ್ತದೆ. ಇದರರ್ಥ ಕಾರಿನ ಗಾಜು ಒಡೆದಾಗ ಸರಿಯಾದ ಸಮಯದಲ್ಲಿ ಕ್ರಮ ಕೈಗೊಳ್ಳದ ಕಾರಣ ಇಡೀ ಕಾರನ್ನೇ ಲೂಟಿ ಮಾಡಲಾಗುತ್ತಿದೆ. ‘ಲೆನ್ಸ ಕಾರ್ಟ್’ನಂತಹ ಮಳಿಗೆಗಳಲ್ಲಿ ಇಂತಹ ಘಟನೆಗಳು ನಡೆದಾಗ ಅದರ ವಿರುದ್ಧ ಧ್ವನಿ ಎತ್ತುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಇದರಿಂದ ಹಿಂದೂಗಳಲ್ಲಿ ಧರ್ಮದ ಬಗ್ಗೆ ಇರುವ ಅನಾಸಕ್ತಿ ಬಹಿರಂಗವಾಗುತ್ತದೆ. ಎಲ್ಲಿಯವರೆಗೆ ಹಿಂದೂಗಳು ದೃಢವಾಗಿ ಪ್ರತಿಭಟಿಸುವುದಿಲ್ಲವೋ ಅಲ್ಲಿಯವರೆಗೆ ಇದು ಹೀಗೆಯೇ ಮುಂದುವರಿಯುತ್ತದೆ. ಯಾರು ಧರ್ಮದ ಕಾರ್ಯವನ್ನು ಮಾಡುತ್ತಾರೋ, ಧರ್ಮವು ಅವರನ್ನು ರಕ್ಷಿಸುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.

ಜಿಹಾದ್ ಗೆ ಯಾವುದೇ ಗಡಿ ಇಲ್ಲದಿರುವುದರಿಂದ ನಮಗೆ ಸ್ವಬೋಧ ಮತ್ತು ಶತ್ರುಬೋಧ ಇರಲೇಬೇಕು ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ರಮೇಶ ಶಿಂದೆ

ಇಂದು ಸಮಾಜದಲ್ಲಿ ನಡೆಯುತ್ತಿರುವ ಗಂಭೀರ ಘಟನೆಗಳನ್ನು ನೋಡಿದಾಗ, ನರಾಧಮರಿಗೆ ಗಲ್ಲು ಶಿಕ್ಷೆಗಿಂತಲೂ ಕಠಿಣ ಶಿಕ್ಷೆಯನ್ನು ನೀಡುವ ಅವಶ್ಯಕತೆಯಿದೆ ಎಂಬುದು ಅರಿವಿಗೆ ಬರುತ್ತದೆ. ‘ಲ್ಯಾಂಡ್ ಜಿಹಾದ್’, ‘ಲವ್ ಜಿಹಾದ್’, ‘ಉಗುಳುವ ಜಿಹಾದ್’, ದಂಗೆಗಳ ಮೂಲಕ ನಡೆಯುವ ಜಿಹಾದ್ ಇವೆಲ್ಲವೂ ಭಾರತದಲ್ಲಿ ದೀರ್ಘಕಾಲದಿಂದ ನಡೆಯುತ್ತಿವೆ. ನಾಸಿಕ್ ನ ಮತಾಂತರ ಪ್ರಕರಣದಿಂದಾಗಿ ‘ಕಾರ್ಪೊರೇಟ್ ಜಿಹಾದ್’ ಇತ್ತೀಚೆಗೆ ಆರಂಭವಾಗಿದೆ ಎಂದು ಎಲ್ಲರಿಗೂ ಅನಿಸುತ್ತಿದೆ; ಆದರೆ ‘ಘಜ್ವಾ-ಎ-ಹಿಂದ್’ ಅಂದರೆ ಇಡೀ ಭಾರತವನ್ನು ಇಸ್ಲಾಮೀಕರಣಗೊಳಿಸುವುದು ಮುಸಲ್ಮಾನರ ಕನಸಾಗಿದೆ. ‘ವಿಷನ್ ೨೦೪೭’ ದಾಖಲೆಯು ಭಾರತದ ಇಸ್ಲಾಮೀಕರಣದ ಲಿಖಿತ ದಾಖಲೆಯಾಗಿದೆ. ೧೯೪೭ ರಲ್ಲಿ ದೇಶದ ವಿಭಜನೆಯಾಯಿತು ಮತ್ತು ಮುಸಲ್ಮಾನ ಬಹುಸಂಖ್ಯಾತ ರಾಜ್ಯಗಳು ನಿರ್ಮಾಣವಾಗತೊಡಗಿದವು, ೧೯೭೧ ರಲ್ಲಿ ಬಾಂಗ್ಲಾದೇಶದ ನಿರ್ಮಾಣ, ೧೯೯೦ ರಲ್ಲಿ ಕಾಶ್ಮೀರದಲ್ಲಿ ನಡೆದ ಹಿಂದೂಗಳ ನರಮೇಧ ಮತ್ತು ಹೆಚ್ಚಿದ ಭಯೋತ್ಪಾದನೆ, ೧೯೯೨ ರಲ್ಲಿ ನಡೆದ ‘ಅಜ್ಮೀರ್ ಸೆಕ್ಸ್ ಸ್ಕ್ಯಾಂಡಲ್’, ೨೦೦೬ ರಲ್ಲಿ ಲವ್ ಜಿಹಾದ್ ನ ಬಹಿರಂಗಗೊಂಡ ಪ್ರಕರಣ ಇಂತಹ ಎಷ್ಟೋ ಘಟನೆಗಳಿಂದ ಜಿಹಾದಿಗಳ ವಿಕೃತ ಮಾನಸಿಕತೆ ಅರಿವಿಗೆ ಬರುತ್ತದೆ. ಆದ್ದರಿಂದ ಸ್ವಬೋಧ ಮತ್ತು ಶತ್ರುಬೋಧ ಅರ್ಥಮಾಡಿಕೊಳ್ಳುವುದು ಅವಶ್ಯಕವಾಗಿದೆ. ಹಿಂದೂಗಳಾದ ನಾವು ಪರಸ್ಪರ ಸಂವಾದವನ್ನು ಹೆಚ್ಚಿಸೋಣ. ಪ್ರತಿಯೊಬ್ಬ ತಂದೆ-ತಾಯಿಯರು ಮಕ್ಕಳೊಂದಿಗೆ ಮಾತನಾಡಲು ದಿನದಲ್ಲಿ ೧೫ ನಿಮಿಷ ಸಮಯ ಮೀಸಲಿಡುವುದು ಅಗತ್ಯವಾಗಿದೆ.

ಪ್ರತಿಕ್ರಿಯೆ

ನ್ಯಾಯವಾದಿ ಮಂಗೇಶ ಮುಂಜಳೇಕರ – ಲವ್ ಜಿಹಾದ್ ಕುರಿತಾದ ಮಾರ್ಗದರ್ಶನವನ್ನು ವಿವಿಧ ನಗರಗಳಲ್ಲಿ, ಗ್ರಾಮಗಳಲ್ಲಿ ಆಯೋಜಿಸಿ ಎಲ್ಲೆಡೆಯ ಹಿಂದೂಗಳನ್ನು ಜಾಗೃತಗೊಳಿಸುವುದು ಅಗತ್ಯವಾಗಿದೆ. ಬಹುಸಂಖ್ಯಾತ ಹಿಂದೂಗಳು ಇದರ ಲಾಭ ಪಡೆಯಬೇಕು. ಲವ್ ಜಿಹಾದ್ ವಿರುದ್ಧದ ಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಜನಜಾಗೃತಿ ಮೂಡಿಸಬೇಕು.

ಕ್ಷಣಚಿತ್ರಗಳು

ಸಂಸದೆ ಪ್ರಾ. ಡಾ. (ಸೌ.) ಮೇಧಾ ಕುಲಕರ್ಣಿ ಅವರು ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಕಾರ್ಯಕ್ರಮ ಮುಕ್ತಾಯದ ಬಳಿಕ ಹೋಗುವಾಗ ಎಲ್ಲಾ ಧರ್ಮಪ್ರೇಮಿಗಳು ಜೋರಾಗಿ ಘೋಷಣೆಗಳನ್ನು ಕೂಗಿದರು.