ಮೋಡಗಳ ಕಳ್ಳತನದಿಂದಾಗಿ ಗಲ್ಫ್ ರಾಷ್ಟ್ರಗಳಲ್ಲಿ ಬರಗಾಲ ಉಂಟಾಗುತ್ತಿದೆ ಎಂದು ದಾವೆ

ಬಾಗ್ದಾದ್ (ಇರಾಕ್) – ಇರಾನ್ ಯುದ್ಧದ ಹಿನ್ನೆಲೆಯಲ್ಲಿ, ಇರಾಕ್ ಸಂಸದ ಅಬ್ದುಲ್ಲಾ ಅಲ್ ಖೈಖಾನಿ ಅವರು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಗಲ್ಫ್ ಪ್ರದೇಶದ ಮೋಡಗಳನ್ನು ಕದಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಬ್ದುಲ್ಲಾ ಅಲ್-ಖೈಖಾನಿ ಅವರ ಪ್ರಕಾರ, ಅಮೆರಿಕ ಮತ್ತು ಇಸ್ರೇಲ್ ಹಲವು ವರ್ಷಗಳಿಂದ ವಿಮಾನಗಳ ಸಹಾಯದಿಂದ ಗಲ್ಫ್ ಪ್ರದೇಶದ ಮೋಡಗಳನ್ನು ಕದಿಯುತ್ತಿವೆ. ಇದೇ ಕಾರಣದಿಂದಾಗಿ ಈ ಪ್ರದೇಶದಲ್ಲಿ ದೀರ್ಘಕಾಲದಿಂದ ಬರಗಾಲ ಎದುರಾಗಿದೆ. ಪ್ರಸ್ತುತ ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧದ ಯುದ್ಧದಲ್ಲಿ ತೊಡಗಿರುವುದರಿಂದ, ಅವರಿಗೆ ಮೋಡಗಳನ್ನು ಕದಿಯುವತ್ತ ಗಮನಹರಿಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಈ ಭಾಗದಲ್ಲಿ ಮತ್ತೆ ಮಳೆ ಪ್ರಾರಂಭವಾಗಿದೆ ಎಂದು ಅವರು ಹೇಳಿದ್ದಾರೆ.
ವಾತಾವರಣದಲ್ಲಿ ಬದಲಾವಣೆ ಮಾಡುವ ಮೂಲಕ ಉದ್ದೇಶಪೂರ್ವಕವಾಗಿ ಮಳೆಯನ್ನು ತಡೆಯಲಾಗಿದೆ ಎಂದು ಅಬ್ದುಲ್ಲಾ ಮತ್ತೊಮ್ಮೆ ಹೇಳಿದ್ದಾರೆ. ಮೋಡಗಳ ಕಳ್ಳತನಕ್ಕಾಗಿ ‘ಅಟ್ಮಾಸ್ಫೆರಿಕ್ ಮಾಡಿಫಿಕೇಶನ್ ವೆಪನ್’ (ವಾತಾವರಣ ಬದಲಿಸುವ ಆಯುಧ) ಬಳಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
☁️ "Cloud Theft" Accusations? 🇮🇶
Iraqi MP Abdullah Al-Kaikhani has sparked a massive debate by accusing the US and Israel of "stealing" Iraq's clouds! ⛈️🚫
Al-Kaikhani claims that "cloud theft" is the primary reason behind the severe droughts plaguing Iraq and other Gulf… pic.twitter.com/BGFlnccAUY
— Sanatan Prabhat (@SanatanPrabhat) May 4, 2026
ಹವಾಮಾನ ತಜ್ಞರಿಂದ ಆರೋಪ ನಿರಾಕರಣೆ!
1. ಇರಾಕ್ ಹವಾಮಾನ ಇಲಾಖೆಯ ವಕ್ತಾರ ಅಮ್ರ್ ಅಲ್ ಜಬೀರಿ ಅವರು, “ಈ ಹೇಳಿಕೆಯು ವೈಜ್ಞಾನಿಕವೂ ಅಲ್ಲ ಅಥವಾ ತರ್ಕಬದ್ಧವೂ ಅಲ್ಲ! 2026ರ ವರ್ಷವು ಇರಾಕ್ ಪಾಲಿಗೆ ಉತ್ತಮ ಮಳೆಯ ವರ್ಷವಾಗಲಿದೆ ಎಂದು ಕಳೆದ ವರ್ಷ ಸೆಪ್ಟೆಂಬರ್‌ನಲ್ಲೇ ಮುನ್ಸೂಚನೆ ನೀಡಲಾಗಿತ್ತು” ಎಂದು ತಿಳಿಸಿದ್ದಾರೆ.
2. ಇಂತಹ ದಾವೆಗಳು ಪರಸ್ಪರ ನಂಬಿಕೆಯ ಕೊರತೆ ಮತ್ತು ಹವಾಮಾನದ ಬಗ್ಗೆ ಇರುವ ಅಲ್ಪ ಜ್ಞಾನದಿಂದ ಉಂಟಾಗುತ್ತವೆ ಎಂದು ತಜ್ಞರು ಹೇಳಿದ್ದಾರೆ. ಇದು ಹವಾಮಾನ ಬದಲಾವಣೆಯ (Climate Change) ಪರಿಣಾಮವಾಗಿದೆ.
3. ವಿಶ್ವ ಹವಾಮಾನ ಸಂಸ್ಥೆಯ ಮಾಹಿತಿಯ ಪ್ರಕಾರ, ಕಳೆದ ಕೆಲವು ದಶಕಗಳಲ್ಲಿ ಈ ಪ್ರದೇಶದ ತಾಪಮಾನವು ಜಾಗತಿಕ ಸರಾಸರಿಗಿಂತ ಎರಡು ಪಟ್ಟು ವೇಗವಾಗಿ ಏರಿಕೆಯಾಗಿದೆ. ಇದರಿಂದಾಗಿ ಶಾಖದ ಅಲೆಗಳು ದೀರ್ಘಕಾಲ ಇರುತ್ತವೆ ಮತ್ತು ತೀವ್ರವಾಗಿರುತ್ತವೆ. ಅಲ್ಲದೆ ಮಳೆಯೂ ಕೂಡ ಅನಿಮಿತವಾಗಿದೆ. ಒಟ್ಟಾರೆಯಾಗಿ ಮಳೆ ಕಡಿಮೆಯಾಗುತ್ತಿದೆ; ಆದರೆ ಮಳೆ ಬಂದಾಗ ಅತಿ ಜೋರಾಗಿ ಬರುವುದರಿಂದ ಪ್ರವಾಹ ಅಥವಾ ಬರಗಾಲದ ಅಪಾಯ ಹೆಚ್ಚಾಗುತ್ತದೆ.
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !
ಟೆಕ್ಸಾಸ್ (ಅಮೆರಿಕ) ನಲ್ಲಿ ಭಾರತದ ರಾಷ್ಟ್ರಧ್ವಜ ಹರಿದ ಅಮೆರಿಕನ್ ಯುವಕ