ಭಾಜಪ ಸಂಸದ ಶ್ರೀ ನಿಶಿಕಾಂತ್ ದುಬೆ ಅವರ ಆರೋಪ
ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ನೆಹರೂ ಕಾರಣ ಎಂಬ ಆರೋಪ!

ನವದೆಹಲಿ – ಬಂಗಾಳದಲ್ಲಿ 64 ವರ್ಷಗಳ ಹಿಂದೆ ನಡೆದ ದಂಗೆಗಳಲ್ಲಿ ಹಿಂದೂಗಳ ಕಿರುಕುಳಕ್ಕೆ ಅಡಿಪಾಯ ಹಾಕಲಾಯಿತು ಎಂದು ಭಾಜಪ ಸಂಸದ ನಿಶಿಕಾಂತ್ ದುಬೆ ಅವರು ‘X’ (ಟ್ವಿಟರ್) ನಲ್ಲಿ ಪೋಸ್ಟ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ. ಇದಕ್ಕೆ ನೆಹರೂ ಅವರೇ ಕಾರಣ ಮತ್ತು ಇದು ಕಾಂಗ್ರೆಸ್‌ನ ಕರಾಳ ಅಧ್ಯಾಯವಾಗಿದೆ ಎಂದು ಅವರು ಹೇಳಿದ್ದಾರೆ. ಸಂಸದ ದುಬೆ ಅವರು ತಮ್ಮ ಪೋಸ್ಟ್‌ನೊಂದಿಗೆ ಕೆಲವು ದಾಖಲೆಗಳನ್ನೂ ಸಹ ಹಂಚಿಕೊಂಡಿದ್ದಾರೆ.
BJP MP @nishikant_dubey claims that the roots of communal tensions in Bengal trace back to riots 64 years ago, alleging that policies under Jawaharlal Nehru led to Hindu persecution and minority appeasement.
He further argues that such policies of the Congress have had long-term… pic.twitter.com/zvt2OzMIre
— Sanatan Prabhat (@SanatanPrabhat) May 3, 2026
ನಿಶಿಕಾಂತ್ ದುಬೆ ಅವರು ತಮ್ಮ ಪೋಸ್ಟ್ ನಲ್ಲಿ,
1. ಇಂದು ಬಂಗಾಳದಲ್ಲಿ ನಡೆಯುತ್ತಿರುವ ಹಿಂದೂಗಳ ಕಿರುಕುಳ ಮತ್ತು ಮುಸ್ಲಿಮರ ಓಲೈಕೆಯ ಅಡಿಪಾಯವು ಮೇ 3, 1962 ರಂದು ಹಾಕಲ್ಪಟ್ಟಿತು. ಮೇ 3 ರಿಂದ ಮೇ 30, 1962 ರ ಅವಧಿಯಲ್ಲಿ ಬಂಗಾಳದ ಮಾಲ್ಡಾ, ಮುರ್ಷಿದಾಬಾದ್, ನದಿಯಾ ಮತ್ತು ಕೂಚ್ ಬೆಹಾರ್ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂ-ಮುಸ್ಲಿಂ ದಂಗೆಗಳು ನಡೆದಿದ್ದವು. ಆ ದಂಗೆಗಳಲ್ಲಿ ಬಹಳಷ್ಟು ಜನರು ಸಾವನ್ನಪ್ಪಿದರು ಮತ್ತು ಅನೇಕರು ನಿರಾಶ್ರಿತರಾದರು.
2. ಇಂತಹದೇ ಪರಿಸ್ಥಿತಿಯನ್ನು ಪೂರ್ವ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳೂ ಅನುಭವಿಸಿದ್ದರು. ಅಲ್ಲಿನ ಹಿಂದೂಗಳು ಸಾವನ್ನಪ್ಪಿದರು ಅಥವಾ ಓಡಿಹೋಗಿ ನಿರಾಶ್ರಿತರಾದರು. ದಂಗೆಗೆ ತುತ್ತಾದವರಲ್ಲಿ ಹೆಚ್ಚಿನವರು ಮತುವಾ ಅಂದರೆ ಪರಿಶಿಷ್ಟ ಜಾತಿ ಸಮುದಾಯದವರು. ಈ ಸಮುದಾಯದವರಿಗೆ ಮೋದಿ ಸರಕಾರವು ಪೌರತ್ವವನ್ನು ನೀಡಿದೆ.
कांग्रेस का काला अध्याय
48. 3 मई 1962 से लेकर 30 मई 1962 तक पूरा पश्चिम बंगाल हिंदू मुस्लिम दंगे में झुलसता रहा । हज़ारों हिंदू मालदा,मुर्शिदाबाद,नदिया,कूचबिहार में मरते रहे,यही हाल पूर्वी पाकिस्तान/ बांग्लादेश के हिंदुओं का हो रहा था,या तो हिंदू मारे गए या भागकर शरणार्थी बने जो… pic.twitter.com/1F6IudU0tc— Dr Nishikant Dubey (@nishikant_dubey) May 3, 2026
3. ನೆಹರೂ ಅವರು ಯಾವಾಗಲೂ ಸಂಸತ್ತಿನ ಒಳಗೆ ಮತ್ತು ಹೊರಗೆ ಮುಸ್ಲಿಮರ ಪರವಾಗಿಯೇ ಮಾತನಾಡುತ್ತಿದ್ದರು. ರಾಜಗೋಪಾಲಚಾರಿ ಅವರಿಗೆ ಬರೆದ ಪತ್ರಗಳಿಂದ ಕಾಂಗ್ರೆಸ್‌ನ ಮತ ಬ್ಯಾಂಕ್ ರಾಜಕಾರಣದ ಬಗ್ಗೆ ಮಾಹಿತಿ ಸಿಗುತ್ತದೆ. ಸಂಸದ ದುಬೆ ಅವರು ಈ ಪತ್ರವನ್ನೂ ಸಹ ಬಹಿರಂಗಪಡಿಸಿದ್ದಾರೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !