ನಾಜಿ ವಿಚಾರಧಾರೆಯ ಆರೋಪಿಯ ಬಂಧನ

ಆಮಸ್ಟರಡ್ಯಾಮ್ (ನೆದರಲ್ಯಾಂಡ) – ನೆದರಲ್ಯಾಂಡ ಮುಂದಿನ ರಾಣಿ ರಾಜಕುಮಾರಿ ಕ್ಯಾಥರಿನಾ ಅಮಾಲಿಯಾ ಮತ್ತು ಆಕೆಯ ಸಹೋದರಿ ರಾಜಕುಮಾರಿ ಅಲೆಕ್ಸಿಯಾ ಅವರ ಹತ್ಯೆಗೆ ಸಂಚು ರೂಪಿಸಿದ್ದ ೩೩ ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಬಳಿ ಕೊಡಲಿ ಮತ್ತು ‘ಬ್ಲಡ್ ಬಾತ್’ (ಯುದ್ಧ ಅಥವಾ ದಂಗೆಯ ಸಮಯದಲ್ಲಿ ಅನೇಕರು ಮೃತಪಡುವುದನ್ನು ‘ರಕ್ತಸ್ನಾನ’ ಎನ್ನಲಾಗುತ್ತದೆ) ಎಂಬ ಉಲ್ಲೇಖವಿರುವ ಪತ್ರ ಪತ್ತೆಯಾಗಿದೆ. ಈ ಘಟನೆಯ ನಂತರ ನೆದರಲ್ಯಾಂಡ ರಾಜಮನೆತನದ ಭದ್ರತೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.
ಬಂಧಿತ ವ್ಯಕ್ತಿಯು ಕಟ್ಟಾ ಬಲಪಂಥೀಯ ವಿಚಾರಧಾರೆಯವನಾಗಿದ್ದು, ನಾಜಿ ವಿಚಾರಗಳಿಂದ ಪ್ರೇರಿತನಾಗಿ ರಾಜಕುಮಾರಿಯರ ಹತ್ಯೆಗೆ ಸಂಚು ರೂಪಿಸಿದ್ದನು. ಪೊಲೀಸರು ಆರೋಪಿಯಿಂದ ಜಪ್ತಿ ಮಾಡಿದ ಕೊಡಲಿಯ ಮೇಲೆ ರಾಜಕುಮಾರಿ ಅಲೆಕ್ಸಿಯಾಳ ಹೆಸರು, ಇಸ್ರೇಲಿ ಗುಪ್ತಚರ ಸಂಸ್ಥೆ ‘ಮೊಸಾದ್’ ಮತ್ತು ನಾಜಿ ಕಾಲದ ‘ಸೀಗ್ ಹೇಲ್’ ಎಂಬ ಪದಗಳನ್ನು ಕೆತ್ತಲಾಗಿತ್ತು.
ರಾಜಕುಮಾರಿ ಅಮಾಲಿಯಾ (೨೨ ವರ್ಷ) ಕಳೆದ ಹಲವು ವರ್ಷಗಳಿಂದ ಸತತವಾಗಿ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಬೆದರಿಕೆಗಳ ಕಾರಣದಿಂದಾಗಿ ಸುರಕ್ಷತೆಯ ದೃಷ್ಟಿಯಿಂದ ಆಕೆಯು ಆಮಸ್ಟರಡ್ಯಾಮನಲ್ಲಿನ ತನ್ನ ವಿದ್ಯಾರ್ಥಿ ಜೀವನವನ್ನು ತೊರೆಯಬೇಕಾಯಿತು ಮತ್ತು ೨೦೨೪ ರಲ್ಲಿ ಕೆಲವು ಕಾಲ ಸ್ಪೇನ್ ನ ಮ್ಯಾಡ್ರಿಡ್ ನಲ್ಲಿ ರಹಸ್ಯವಾಗಿ ವಾಸಿಸಬೇಕಾಗಿತ್ತು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!