ಪವಿತ್ರ ಗಂಗಾನದಿಯಲ್ಲಿ ಇಫ್ತಾರ್ ಕೂಟ ನಡೆಸಿ ಮೂಳೆಗಳನ್ನು ನೀರಿನಲ್ಲಿ ಎಸೆದ ಪ್ರಕರಣ
ದೋಣಿಗಳಲ್ಲಿ ಮಾಂಸಾಹಾರ, ಮದ್ಯ ಇತ್ಯಾದಿಗಳಿಗೆ ನಿಷೇಧ, ಪ್ರತಿ ವರ್ಷ ನೋಂದಣಿ ಕಡ್ಡಾಯ!

ವಾರಾಣಸಿ (ಉತ್ತರ ಪ್ರದೇಶ) – ಇಲ್ಲಿನ ಗಂಗಾನದಿಯಲ್ಲಿ ಮಾರ್ಚ್ ತಿಂಗಳಿನಲ್ಲಿ ಇಫ್ತಾರ್ ಕೂಟದ ನಂತರ ಚಿಕನ್ ಬಿರಿಯಾನಿ ತಿಂದು ಮೂಳೆಗಳನ್ನು ನೀರಿನಲ್ಲಿ ಎಸೆದಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ 14 ಮುಸ್ಲಿಂ ಯುವಕರನ್ನು ಬಂಧಿಸಲಾಗಿದೆ. ಅವರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಗಂಗಾನದಿಯಲ್ಲಿ ಸಂಚರಿಸುವ ದೋಣಿಗಳಿಗೆ ಸರಕಾರವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಪ್ರತಿ ವರ್ಷ ದೋಣಿಗಳನ್ನು ಹೊಸದಾಗಿ ಸರಕಾರಿ ದಾಖಲೆಗಳಲ್ಲಿ ನೋಂದಣಿ ಮಾಡಿಸಬೇಕಾಗುತ್ತದೆ. ಇದರೊಂದಿಗೆ ಮಾಂಸಾಹಾರ, ಮದ್ಯ, ಶಸ್ತ್ರಾಸ್ತ್ರ ಇತ್ಯಾದಿಗಳನ್ನು ದೋಣಿಯಲ್ಲಿ ಕೊಂಡೊಯ್ಯುವುದಕ್ಕೆ ನಿಷೇಧವಿರಲಿದೆ. ದೋಣಿಗಳ ನೋಂದಣಿಗಾಗಿ ಹೊಸ ಜಾಲತಾಣವನ್ನೂ ಪ್ರಾರಂಭಿಸಲಾಗುವುದು. ರಾಜ್ಯ ಸರಕಾರವು ಗಂಗಾನದಿಯಲ್ಲಿ ಸಂಚರಿಸುವ ದೋಣಿಗಳ ನೋಂದಣಿ ಅಧಿಕಾರವನ್ನು ವಾರಾಣಸಿ ಮಹಾನಗರ ಪಾಲಿಕೆಯಿಂದ ಹಿಂಪಡೆದು ಈಗಾಗಲೇ ಸಾರಿಗೆ ಇಲಾಖೆಗೆ ನೀಡಿದೆ. ಮಹಾನಗರ ಪಾಲಿಕೆಯಲ್ಲಿ ಪ್ರಸ್ತುತ 1 ಸಾವಿರದ 217 ದೋಣಿಗಳು ನೋಂದಣಿಯಾಗಿವೆ.
ದೋಣಿ ಚಾಲಕರ ಸಂಘಟನೆಯಿಂದಲೂ ಮುಂದಾಳತ್ವ!
ಗಂಗಾನದಿಯಲ್ಲಿ ಮಾರ್ಚ್‌ನಲ್ಲಿ ನಡೆದ ಘಟನೆಯು ಪುನರಾವರ್ತನೆಯಾಗಬಾರದು ಎಂಬ ನಿಟ್ಟಿನಲ್ಲಿ ದೋಣಿ ಚಾಲಕರ ಸಂಘಟನೆಯು ಮುಂದಾಗಿದೆ. ‘ಮಾ ಗಂಗಾ ನಿಷಾದ್ ರಾಜ್ ಸೇವಾ ನ್ಯಾಸ’ದ ಅಧ್ಯಕ್ಷ ಪ್ರಮೋದ್ ಮಾಂಝಿ ಮಾತನಾಡಿ, ಈ ಹಿಂದೆ ದೋಣಿಗಳಲ್ಲಿ ಏನು ಮಾಡಬಹುದು ಮತ್ತು ಏನು ಮಾಡಬಾರದು ಎನ್ನುವ ಬಗ್ಗೆ ಯಾವುದೇ ಸ್ಪಷ್ಟವಾದ ನೀತಿ ಸಂಹಿತೆ ಇರಲಿಲ್ಲ; ಆದರೆ ಈ ವಿವಾದದ ನಂತರ ಗಂಗೆಯ ಪವಿತ್ರತೆಯನ್ನು ಕಾಪಾಡಲು ಮತ್ತು ಮಾಲಿನ್ಯವನ್ನು ತಡೆಗಟ್ಟಲು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ದೋಣಿಗಳಲ್ಲಿ ಶಸ್ತ್ರಾಸ್ತ್ರ ಪ್ರದರ್ಶನ ಮಾಡುವುದನ್ನೂ ನಿಷೇಧಿಸಲಾಗಿದ್ದು, ನಿಯಮ ಮೀರುವವರ ವಿರುದ್ಧ ಸಂಘಟನೆಯ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕೆಳಹಂತದ ನ್ಯಾಯಾಲಯದಲ್ಲಿ ವಜಾಗೊಂಡಿದ್ದ ಇಫ್ತಾರ್ ಕೂಟ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿ ಹೈಕೋರ್ಟ್ ತಲುಪಿದೆ!
ಇನ್ನೊಂದೆಡೆ ಇಫ್ತಾರ್ ಕೂಟದ ಪ್ರಕರಣದಲ್ಲಿ ಬಂಧಿತರಾಗಿರುವ 14 ಯುವಕರ ಮೇಲೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದು, ಪೂಜಾ ಸ್ಥಳವನ್ನು ಅಪವಿತ್ರಗೊಳಿಸಿರುವುದು ಮತ್ತು ಸುಲಿಗೆಯಂತಹ ಆರೋಪಗಳಿವೆ. ಆರೋಪಿಗಳ ಜಾಮೀನು ಅರ್ಜಿಯನ್ನು ಈಗಾಗಲೇ ಕೆಳಹಂತದ ನ್ಯಾಯಾಲಯ ಮತ್ತು ಸೆಷನ್ಸ್ ನ್ಯಾಯಾಲಯಗಳು ವಜಾಗೊಳಿಸಿವೆ. ಈಗ ಅಲಹಾಬಾದ್ ಹೈಕೋರ್ಟ್‌ನಲ್ಲಿ ಈ ಪ್ರಕರಣದ ಮುಂದಿನ ವಿಚಾರಣೆಯು ಮೇ 5 ರಂದು ನಡೆಯಲಿದೆ.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ