ಇರಾನ್ ಸಂಸದರಿಂದ ಗಲ್ಫ್ ರಾಷ್ಟ್ರಗಳ ರಾಜರಿಗೆ ಎಚ್ಚರಿಕೆ

ತೆಹ್ರಾನ್ (ಇರಾನ್) – ಇರಾನ್ ನಾಯಕರು ಅಥವಾ ಸರ್ವೋಚ್ಚ ನಾಯಕತ್ವದ ಮೇಲೆ ಯಾವುದೇ ದಾಳಿ ನಡೆದರೆ, ಅದಕ್ಕೆ ಬೆಂಬಲ ನೀಡುವ ಗಲ್ಫ್ ರಾಷ್ಟ್ರಗಳ ಆಡಳಿತಗಾರರನ್ನು ಜೀವಂತ ಬಿಡುವುದಿಲ್ಲ ಮತ್ತು ಅವರ ಅರಮನೆಗಳನ್ನು ಧ್ವಂಸ ಮಾಡುತ್ತೇವೆ ಎಂದು ಇರಾನ್ ನ ಸಂಸದ ಮಹಮೂದ್ ನಬಾವಿಯಾನ್ ಎಚ್ಚರಿಕೆ ನೀಡಿದ್ದಾರೆ.
ಮಹಮೂದ್ ನಬಾವಿಯಾನ್ ಅವರು ಇರಾನ್ ನ ಪರಮಾಣು ಒಪ್ಪಂದದ ಮಾತುಕತೆ ನಡೆಸುವ ತಂಡದ ಸದಸ್ಯರಾಗಿದ್ದಾರೆ. ಇರಾನ್ ಕೇವಲ ದಾಳಿ ಮಾಡುವ ದೇಶದ ಮೇಲಷ್ಟೇ ಅಲ್ಲದೆ, ಅವರಿಗೆ ಬೆಂಬಲ ನೀಡುವ ಪ್ರಾದೇಶಿಕ ನಾಯಕರ ಮೇಲೂ ನೇರ ದಾಳಿ ನಡೆಸುತ್ತದೆ ಎಂದು ನಬಾವಿಯಾನ್ ಸ್ಪಷ್ಟಪಡಿಸಿದ್ದಾರೆ. ಗಲ್ಫ್ ರಾಷ್ಟ್ರಗಳ ಭೂಮಿಯಲ್ಲಿರುವ ಅಮೆರಿಕದ ಅಥವಾ ವಿದೇಶಿ ಸೈನಿಕ ನೆಲೆಗಳನ್ನು ಇರಾನ್ ವಿರುದ್ಧ ಬಳಸುವಂತಿಲ್ಲ. ಒಂದು ವೇಳೆ ಈ ನೆಲೆಗಳಿಂದ ಇರಾನ್ ಮೇಲೆ ದಾಳಿ ನಡೆದರೆ, ಆ ದೇಶಗಳನ್ನು ‘ಅಪರಾಧಿ’ಗಳೆಂದು ಪರಿಗಣಿಸಲಾಗುವುದು. ಈ ದಾಳಿಯಲ್ಲಿ ಪಾಲ್ಗೊಳ್ಳುವ ಯಾವುದೇ ಆಡಳಿತಗಾರರು ಸುರಕ್ಷಿತವಾಗಿ ಉಳಿಯುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers