ಇದಕ್ಕೆ ಆರ್ಥಿಕ ನಷ್ಟವೇ ಕಾರಣ

ನವಿ ಮುಂಬಯಿ – ‘ಏರ್ ಇಂಡಿಯಾ’ ವಿಮಾನ ಸಂಸ್ಥೆಯು ಹೆಚ್ಚಿನ ದರಗಳು, ಅಪೂರ್ಣ ಸಂಪರ್ಕ ವ್ಯವಸ್ಥೆ ಮತ್ತು ಉಭಯ ವಿಮಾನ ನಿಲ್ದಾಣ ನಿರ್ವಹಣೆ (ಸಂಚಾರ) ಇವುಗಳಿಂದಾಗಿ ಹೆಚ್ಚಾಗುವ ವೆಚ್ಚದ ಕಾರಣ ನೀಡುತ್ತಾ ನವಿ ಮುಂಬಯಿ ವಿಮಾನ ನಿಲ್ದಾಣದಲ್ಲಿ ಸಂಚಾರ ಪ್ರಾರಂಭಿಸಲು ಭಾರತೀಯ ವಿಮಾನ ನಿಲ್ದಾಣ ಆರ್ಥಿಕ ನಿಯಂತ್ರಣ ಪ್ರಾಧಿಕಾರದ ಬಳಿ ಅಸಮರ್ಥತೆ ತೋರಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ನವಿ ಮುಂಬಯಿ ವಿಮಾನ ನಿಲ್ದಾಣದಿಂದ ವಿಮಾನ ಸಂಚಾರ ಪ್ರಾರಂಭಿಸುವುದು ಆರ್ಥಿಕ ದೃಷ್ಟಿಯಿಂದ ಲಾಭದಾಯಕವಲ್ಲ ಎಂಬ ಅಭಿಪ್ರಾಯವನ್ನು ‘ಏರ್ ಇಂಡಿಯಾ’ ವಿಮಾನ ಸಂಸ್ಥೆಯು ವ್ಯಕ್ತಪಡಿಸಿದೆ.
ಮಾಜಿ ಪೈಲಟ್ ಕ್ಯಾಪ್ಟನ್ ಅಭಿಜಿತ್ ಅಡ್ಸೂಲ್ ಹೇಳಿದರು,
೧. ಮುಂಬಯಿ ಮತ್ತು ನವಿ ಮುಂಬಯಿ ವಿಮಾನ ನಿಲ್ದಾಣಗಳಿಂದ ಏಕಕಾಲದಲ್ಲಿ ಅನೇಕ ವಿಮಾನಗಳನ್ನು ಓಡಿಸಿದರೆ ಮಾನವ ಸಂಪನ್ಮೂಲದೊಂದಿಗೆ ಇತರ ಅಗತ್ಯತೆಗಳೂ ದುಪ್ಪಟ್ಟು ಹೆಚ್ಚಾಗುತ್ತವೆ. ಅದರಿಂದ ವೆಚ್ಚ ಹೆಚ್ಚಾಗುತ್ತದೆ.
೨. ನವಿ ಮುಂಬಯಿ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸುವ ವೆಚ್ಚವು ನೋಯ್ಡಾ ವಿಮಾನ ನಿಲ್ದಾಣದ ಹೋಲಿಕೆಯಲ್ಲಿ ದೇಶೀಯಕ್ಕಾಗಿ ೮೪ ಪ್ರತಿಶತ ಮತ್ತು ಅಂತರಾಷ್ಟ್ರೀಯಕ್ಕಾಗಿ ೧೧೩ ಪ್ರತಿಶತ ಅಧಿಕವಾಗಿರಬಹುದು.
೩. ನವಿ ಮುಂಬಯಿ ವಿಮಾನ ನಿಲ್ದಾಣದವರೆಗೆ ಪ್ರಯಾಣಿಕರಿಗಾಗಿ ಯೋಗ್ಯ ಮೆಟ್ರೋ ಅಥವಾ ರಸ್ತೆ ವ್ಯವಸ್ಥೆ ಲಭ್ಯವಿಲ್ಲದ ಕಾರಣ ಬಹುತೇಕ ಪ್ರಯಾಣಿಕರು ಮುಂಬಯಿ ವಿಮಾನ ನಿಲ್ದಾಣಕ್ಕೇ ಆದ್ಯತೆ ನೀಡುತ್ತಾರೆ. ವಿಶೇಷವಾಗಿ ಪಶ್ಚಿಮ ಮುಂಬಯಿನ ಪ್ರಯಾಣಿಕರಿಗೆ ನವಿ ಮುಂಬಯಿಗೆ ತಲುಪುವುದು ಕಷ್ಟವಾಗುತ್ತದೆ.
೪. ಮುಂಬಯಿ ವಿಮಾನ ನಿಲ್ದಾಣದಲ್ಲಿನ ಟರ್ಮಿನಲ್ ೧ ಮುಚ್ಚುವ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ನವಿ ಮುಂಬಯಿ ವಿಮಾನ ನಿಲ್ದಾಣದಿಂದ ಸಂಚಾರವನ್ನು ಚಾಲನೆಯಲ್ಲಿಡುವುದು ಕಠಿಣವಾಗಿದೆ.
೫. ಪೈಲಟ್‌ಗಳು, ಗಗನಸಖಿಯರು, ಹಾಗೆಯೇ ಇತರ ಸಿಬ್ಬಂದಿಗಳು ದೊಡ್ಡ ಸಂಖ್ಯೆಯಲ್ಲಿ ಪಶ್ಚಿಮ ಉಪನಗರಗಳಲ್ಲಿ ವಾಸಿಸುತ್ತಾರೆ. ಪೈಲಟ್‌ಗಳು ದೇಶೀಯ ವಿಮಾನಗಳಿಗಾಗಿ ಕನಿಷ್ಠ ೧ ಗಂಟೆ ಮತ್ತು ಅಂತರಾಷ್ಟ್ರೀಯ ವಿಮಾನಗಳಿಗಾಗಿ ಒಂದೂವರೆ ಗಂಟೆ ಮೊದಲು ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿರಬೇಕಾಗುತ್ತದೆ. ಗಗನಸಖಿಯರಿಗೆ ೨ ಗಂಟೆ ಮೊದಲು ಬರಬೇಕಾಗುತ್ತದೆ. ಎಲ್ಲಿಯವರೆಗೆ ನವಿ ಮುಂಬಯಿ ವಿಮಾನ ನಿಲ್ದಾಣದವರೆಗೆ ತಲುಪಲು ಸಮರ್ಥ ಸಾರಿಗೆ ವ್ಯವಸ್ಥೆ ನಿರ್ಮಾಣವಾಗುವುದಿಲ್ಲವೋ, ಅಲ್ಲಿಯವರೆಗೆ ವಿಮಾನ ಸಂಸ್ಥೆಗಳು ಇಲ್ಲಿಂದ ವಿಮಾನ ಸೇವೆ ನಡೆಸಲು ಹಿಂದೇಟು ಹಾಕುತ್ತವೆ.
ನವಿ ಮುಂಬಯಿ ವಿಮಾನ ನಿಲ್ದಾಣದಲ್ಲಿ ಪ್ರಸ್ತುತ ಚಾಲನೆಯಲ್ಲಿರುವ ಸಂಸ್ಥೆಗಳ ವಿಮಾನಸೇವೆ
ಏರ್ ಇಂಡಿಯಾ ಎಕ್ಸ್‌ಪ್ರೆಸ್, ಇಂಡಿಗೋ, ಸ್ಟಾರ್ ಏರ್ ಮತ್ತು ಅಕಾಸಾ ಏರ್ ಈ ಸಂಸ್ಥೆಗಳ ವಿಮಾನಗಳು ಬೆಂಗಳೂರು, ದೆಹಲಿ, ಗೋವಾ-ಮೋಪಾ, ಕೊಚ್ಚಿ, ಅಹಮದಾಬಾದ್, ಬೆಂಗಳೂರು, ಚೆನ್ನೈ, ಕೊಯಮತ್ತೂರು, ಭಾಗ್ಯನಗರ, ಜೈಪುರ, ಲಕ್ಷ್ಮಣಪುರಿ (ಲಖನೌ), ಮಂಗಳೂರು, ನಾಗ್ಪುರ ಮತ್ತು ವಡೋದರಾ ಈ ಸ್ಥಳಗಳಿಗೆ ಪ್ರಯಾಣಿಸುತ್ತಿವೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!