
ಕುಪ್ವಾಡಾ (ಕಾಶ್ಮೀರ) – ಜಿಹಾದಿ ಭಯೋತ್ಪಾದಕರು ಕುಪ್ವಾಡಾದ ಚಾಂದಿಗಾಮ್‌ನಲ್ಲಿ ನಾಶ ಮಾಡಿದ ಒಂದು ದೇವಾಲಯದ ಭೂಮಿಯನ್ನು ೩೬ ವರ್ಷಗಳ ನಂತರ ಆಡಳಿತ ಮಂಡಳಿಯಿಂದ ಮತ್ತೆ ಕಾಶ್ಮೀರಿ ಹಿಂದೂಗಳ ವಶಕ್ಕೆ ನೀಡಲಾಯಿತು, ಎಂಬ ಮಾಹಿತಿಯನ್ನು ಭಾಜಪದ ಜಮ್ಮು-ಕಾಶ್ಮೀರ ಶಾಖೆಯು ‘ಎಕ್ಸ್’ ಮೇಲಿನ ಪೋಸ್ಟ್ ಮೂಲಕ ನೀಡಿದೆ. ಸ್ಥಳೀಯ ಮಟ್ಟದಲ್ಲಿ ಇದನ್ನು ದೊಡ್ಡ ಉತ್ಸಾಹದಲ್ಲಿ ಸ್ವಾಗತಿಸಲಾಗಿದೆ. ೧೯೯೦ ರ ದಶಕದಲ್ಲಿ ಜಿಹಾದಿ ಭಯೋತ್ಪಾದನೆಯಿಂದಾಗಿ ಯಾವ ಕುಟುಂಬಗಳಿಗೆ ಕಾಶ್ಮೀರ ಕಣಿವೆಯಿಂದ ಪಲಾಯನ ಮಾಡಬೇಕಾಗಿತ್ತೋ, ಆ ಕುಟುಂಬಗಳಿಗೆ ಇದು ಅತ್ಯಂತ ಭಾವನಾತ್ಮಕ ಕ್ಷಣವಾಗಿತ್ತು.
ಜಿಹಾದಿ ಭಯೋತ್ಪಾದಕರು ಧ್ವಂಸಗೊಳಿಸಿದ್ದರು ದೇವಾಲಯ ಮತ್ತು ಆಶ್ರಮ !
‘ಕಾಶ್ಮೀರಿ ಹಿಂದೂ’ ಹೆಸರಿನ ಒಂದು ‘ಫೇಸ್‌ಬುಕ್ ಪೇಜ್’ ಮೇಲೆ ನೀಡಿರುವ ಮಾಹಿತಿಯ ಪ್ರಕಾರ, ೧೯೯೦ ರಲ್ಲಿ ಜಿಹಾದಿ ಭಯೋತ್ಪಾದಕರು ದೇವಾಲಯ ಮತ್ತು ಆಶ್ರಮದ ಮೇಲೆ ವಶಪಡಿಸಿಕೊಂಡಿದ್ದರು; ಅವರು ಕೇವಲ ಈ ದೇವಾಲಯವನ್ನು ಲೂಟಿ ಮಾಡಿ ಅದಕ್ಕೆ ಬೆಂಕಿ ಹಚ್ಚಲಿಲ್ಲ, ಬದಲಿಗೆ ಅಲ್ಲಿನ ಎಲ್ಲಾ ವಾಸ್ತುಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದರು. ಈಗ ಇದೇ ಪವಿತ್ರ ಸ್ಥಳದಲ್ಲಿ ಭೂಮಿಪೂಜೆ (ಅಡಿಪಾಯ ಸಮಾರಂಭ) ನೆರವೇರಿದ್ದು ಮತ್ತು ಶೀಘ್ರದಲ್ಲೇ ಅಲ್ಲಿ ಒಂದು ಭವ್ಯವಾದ ದೇವಾಲಯ ಮತ್ತು ಆಶ್ರಮದ ನಿರ್ಮಾಣ ಮಾಡಲಾಗುವುದು.
Ram Mandir Theft Confession : ಕಳ್ಳತನದ ಹಣವನ್ನು ಶೌಚಾಲಯದಲ್ಲಿ ಅಡಗಿಸಿಡುತ್ತಿದ್ದೆವು!
ವಿಶೇಷ ನ್ಯಾಯಾಲಯದಿಂದ ಶಾಸಕ ಟಿ. ರಾಜಾ ಸಿಂಗ್ ಖುಲಾಸೆ!
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು